Karnataka news paper

ಸಿಡುಬು ರೋಗಕ್ಕೆ ಬಲಿಯಾದ್ರಾ ಮಕ್ಕಳು..? ಕಲಬುರಗಿ ಜನರಿಗೆ ಚಿಕನ್ ಪಾಕ್ಸ್ ಭೀತಿ..!


ಕಲಬುರಗಿ: ಕೊರೊನಾ‌‌‌ ಮೂರನೇ ಅಲೆ ಅಷ್ಟೊಂದು ಪರಿಣಾಮಕಾರಿ ಅಲ್ಲ ಅಂತ ನಿಟ್ಟುಸಿರು ಬಿಡುತ್ತಿದ್ದ ಕಲಬುರಗಿ ಜನತೆಗೆ ಇದೀಗ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಮಾರಣಾಂತಿಕ ರೋಗ ಅಲ್ಲದಿದ್ರೂ ಚಿಕನ್ ಪಾಕ್ಸ್‌ (ಸಿಡುಬು) ರೋಗಕ್ಕೆ ಇಬ್ಬರು ಮಕ್ಕಳು ಬಲಿ ಆಗಿದ್ದು ಜನರ ನಿದ್ದೆಗೆಡಸಿದೆ.

ಮಕ್ಕಳು ನಿಜಕ್ಕೂ ಚಿಕನ್‌ ಪಾಕ್ಸ್ ರೋಗಕ್ಕೆ ಬಲಿಯಾದ್ರಾ ಅಥವಾ ಮತ್ಯಾವ ರೋಗ ಬಾದಿಸಿತ್ತಾ ಅನ್ನೋ ತಲೆನೋವು ಈಗ ಜಿಲ್ಲಾ ಆರೋಗ್ಯ ಇಲಾಖೆಗೂ ಕಾಡಲಾರಂಭಿಸಿದೆ. ಚಿಕನ್‌ಪಾಕ್ಸ್ ಸಾಮಾನ್ಯವಾಗಿ ಬಾಲ್ಯದಲ್ಲಿ ಕಂಡು ಬರುವ ಒಂದು ವೈರಲ್‌ ಸೋಂಕು. ಜ್ವರ, ಶೀತ, ತಲೆನೋವು ರೂಪದಲ್ಲಿ‌ಕಾಣಿಸಿಕೊಂಡು ನಂತರದಲ್ಲಿ ಮುಖ ಮತ್ತು ಶರೀರದಲ್ಲಿ ಗುಳ್ಳೆಗಳಾಗಿ ಉರಿ ಹಾಗೂ ತುರಿಕೆ ನೀಡುತ್ತದೆ.

ಈ ಚಿಕನ್‌ ಪಾಕ್ಸ್ ಸಾಂಕ್ರಾಮಿಕ ರೋಗ ಮಾರಣಾಂತಿಕವಲ್ಲ, ಗುಣಮುಖವಾಗುವ ರೋಗವಾಗಿದೆ. ಆದ್ರೂ ಕಲಬುರಗಿಯಲ್ಲಿ ಚಿಕನ್‌ ಪಾಕ್ಸ್ ರೋಗಕ್ಕೆ ಇಬ್ಬರು ಮಕ್ಕಳು ಬಲಿಯಾಗಿರುವುದು ಜನರ ನಿದ್ದೆಗೆಡಸಿದೆ. ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವನ್ಪಪ್ಪಿದ್ದು, ಇನ್ನಿಬ್ಬರು ಮಕ್ಕಳು ಮತ್ತು ಇವರ ತಾಯಿ ಕೂಡಾ ರೋಗದಿಂದ ಬಳಲುತ್ತಿದ್ದಾರೆ‌.

ಆರಂಭದಲ್ಲಿ‌ ಜ್ವರ ಕಾಣಿಸಿಕೊಂಡಾಗ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರೋಗ ಗುಣವಾಗದಿದ್ದಾಗ ಓರ್ವ ಮಗುವನ್ನು ಪಕ್ಕದ ರಾಜ್ಯ ಮಹಾರಾಷ್ಟ್ರದ ಸೋಲಾಪುರಕ್ಕೆ ಕರೆದೊಯ್ದಾಗ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ. ಇನ್ನೊಂದು ಮಗು ಕಲಬುರ್ಗಿಯಲ್ಲಿ ಚಿಕಿತ್ಸೆ ಕೊಡಸಿದ್ರು ಗುಣಮುಖವಾಗದೆ ಸಾವನ್ನಪ್ಪಿದ್ದಾನೆ.

ಚಿಕನ್‌ ಪಾಕ್ಸ್‌
ಇಮ್ರಾನ್ (8) ರಹೆಮಾನ್ (15) ಚಿಕನ್ ಪಾಕ್ಸ್‌ಗೆ ಬಲಿಯಾದ ಮಕ್ಕಳು. ತಾಯಿ ಅಫಿಜಾ ಬೇಗಂ (32) ಅರ್ಮಾನ್ (6) ನಫಿಜಾ (13) ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕನ್ ಪಾಕ್ಸ್ ರೋಗದಿಂದ ಸಾಯುವರ ಸಂಖ್ಯೆ ವಿರಳದಲ್ಲಿ ಅತಿ ವಿರಳ. ಹೀಗಿರುವಾಗ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿ, ಮೂವರು ನರಳಾಡುವಂತಾಗಿದ್ದು ತಲೆನೋವಾಗಿ ಕಾಡುತ್ತಿದೆ.

ಮೇಲ್ನೋಟಕ್ಕೆ ಚಿಕನ್ ಪಾಕ್ಸ್ ರೋಗದಿಂದ ಮಕ್ಕಳಿಬ್ಬರು ಸಾವನ್ನಪ್ಪಿದಂತೆ ಕಂಡು ಬಂದರೂ ಹೆಚ್ಚಿನ ತಪಾಸಣೆಗಾಗಿ ರಕ್ತದ ಮಾದರಿಯನ್ನು ಲ್ಯಾಬ್ ‌ಗೆ ಕಳಿಸಲಾಗಿದೆ. ಇಬ್ಬರು ಮಕ್ಕಳು ಬಲಿಯಾಗುತ್ತಿದ್ದಂತೆಯೇ ಎಚ್ಚೆತ್ತ ಆರೋಗ್ಯ ಇಲಾಖೆ, ನಾಲವಾರ ಮತ್ತು ಅಕ್ಕಪಕ್ಕದ ಗ್ರಾಮದಲ್ಲಿ ಸರ್ವೆ ಕಾರ್ಯ ಕೂಡಾ ಆರಂಭಿಸಿದೆ.

ಇಂಟರ್‌ನೆಟ್‌ನಿಂದ ಮಕ್ಕಳಲ್ಲಿ ಮಿದುಳಿನ ಸಮಸ್ಯೆ
ಶಾಲೆಗಳು ಸೇರಿದಂತೆ 240 ಮನೆಗಳ ಸರ್ವೆ ಕಾರ್ಯ ಮಾಡಿದಾಗ ಪ್ರತೀಕ್ಷಾ ಮತ್ತು ಲಕ್ಷ್ಮಿ ಅನ್ನೊ ಇಬ್ಬರು ಮಕ್ಕಳಲ್ಲಿ ಚಿಕನ್ ಪಾಕ್ಸ್ ಲಕ್ಷಣಗಳು ಕಂಡುಬಂದಿದೆ. ಇಬ್ಬರು ಕೂಡ ನಾಲವಾರ ಗ್ರಾಮದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಶಂಕಿತ ಚಿಕನ್ ಫಾಕ್ಸ್ ನಿಂದ ಬಳಲುತ್ತಿರುವ ಮಕ್ಕಳ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್‌ ಇನ್ಸ್ ಟ್ಯೂಟ್ ಆಫ್ ವೈರಾಲಜಿಗೆ ರವಾನೆ ಮಾಡಲಾಗಿದೆ.

ರೋಗ ನಿರೋಧಕ ಶಕ್ತಿ ಕಡಿಮೆ ಇದ್ರೆ ಮಕ್ಕಳಲ್ಲಿ ಚಿಕನ್ ಪಾಕ್ಸ್ ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ದಡಾರ ರೋಗ ಇರುವ ಸಾಧ್ಯತೆ ಕೂಡಾ ಇದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ರಕ್ತದ ಮಾದರಿಯನ್ನು ಲ್ಯಾಬ್ ಗೆ ಕಳಿಸಿದೆ. ಲ್ಯಾಬ್ ವರದಿ ಬಂದ ನಂತರವಷ್ಟೇ ಇವರಿಗೆ ಅಂಟಿದ ನಿಜವಾದ ರೋಗ ಯಾವದು ಅನ್ನೋದು ತಿಳಿದು ಬರಬೇಕಿದೆ.

ಚಿಕನ್‌ಪಾಕ್ಸ್‌ನಂತೆ ವೇಗವಾಗಿ ಹರಡಬಲ್ಲದು ಕೋವಿಡ್ 19 ಡೆಲ್ಟಾ ತಳಿ: ಅಮೆರಿಕ ಎಚ್ಚರಿಕೆ



Read more

[wpas_products keywords=”deal of the day sale today offer all”]