Karnataka news paper

ಮೊದಲು ಹಳ್ಳಿ ರಸ್ತೆ ಸರಿಪಡಿಸಿ, ಆಮೇಲೆ ಹೆದ್ದಾರಿ: ಸಂಸದ ಪ್ರತಾಪ್ ಸಿಂಹಗೆ ಬಡಗಲಪುರ ನಾಗೇಂದ್ರ ಚಾಟಿ..!


ಮೈಸೂರು: ಮೊದಲು ಹಳ್ಳಿಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ, ನಂತರ ಶ್ರೀರಂಗಪಟ್ಟಣ – ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಆಲೋಚಿಸಿ ಎಂದು ಸಂಸದ ಪ್ರತಾಪ್‌ ಸಿಂಹ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಾಕೀತು ಮಾಡಿದರು.

‘ಸಂಸದರ ಕ್ಷೇತ್ರದಲ್ಲೇ ಸಾಕಷ್ಟು ಹಳ್ಳಿಗಳು ಯೋಗ್ಯ ರಸ್ತೆಗಳನ್ನೇ ಹೊಂದಿಲ್ಲ. ಬೇಕಿದ್ದರೆ ಅವರಿಗೆ ಪಟ್ಟಿ ಕೊಡುತ್ತೇನೆ. ಕಾಡಂಚಿನ ಗ್ರಾಮಗಳಲ್ಲಿ ಮಾನವ – ಪ್ರಾಣಿ ಸಂಘರ್ಷ ಇನ್ನೂ ನಿಂತಿಲ್ಲ. ತಂಬಾಕು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ನೂರೆಂಟು ಸಮಸ್ಯೆಗಳಿವೆ. ಆದರೆ, ಇದೆಲ್ಲವನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿ ಬಗ್ಗೆ ವಿಶೇಷ ಆಸಕ್ತಿ ಏನು..? ಎನ್‌ ಎಚ್‌ ಒಂದೇ ಅಭಿವೃದ್ಧಿ ಸಂಕೇತವೇ..?’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಹೊಸ ಮಾರ್ಗ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಯಿಂದಾಗಿ ಭೂಮಿ ಕಳೆದುಕೊಳ್ಳುವ ರೈತ ಕುಟುಂಬಗಳ ಬಗ್ಗೆ ನೀವು ಏನನ್ನೂ ಮಾತನಾಡಿಲ್ಲ. ಆ ಭಾಗದಲ್ಲಾಗುವ ಪರಿಸರ ಅಸಮತೋಲನ ಮತ್ತು ನಷ್ಟದ ಬಗ್ಗೆಯೂ ಚಕಾರವೆತ್ತಿಲ್ಲ. ಕೇವಲ ರಸ್ತೆ ಬಗ್ಗೆ ಮಾತ್ರ ಅತ್ಯಂತ ಕಾಳಜಿ ವಹಿಸುತ್ತಿದ್ದೀರಿ. ಇದರಲ್ಲಿ ಸ್ವಹಿತಾಸಕ್ತಿ ಇದೆಯೇ..? ಅಥವಾ ಕಂಟ್ರಾಕ್ಟರ್‌ಗಳ ಸಂಘದ ಮುಖಂಡರು ಪ್ರಧಾನ ಮಂತ್ರಿಗೆ ನೀಡಿರುವ ದೂರಿನ ರೀತಿ ಶೇ.40 ರಷ್ಟು ಕಮಿಷನ್‌ ಅಡಗಿರಬಹುದೇ ಎಂಬ ಸಂಶಯ ಮೂಡುತ್ತಿದೆ’ ಎಂದು ಆರೋಪಿಸಿದರು.

ತಮಿಳುನಾಡಿನ ರೈತರಿಗೆ ಮೇಕೆದಾಟು ಯೋಜನೆಯ ವಾಸ್ತವ ತಿಳಿಸ್ತೇವೆ:ಬಡಗಲಪುರ ನಾಗೇಂದ್ರ
ಇರುವ ರಸ್ತೆಯನ್ನೇ ಅಗಲೀಕರಿಸಿ..

‘ಈಗಾಗಲೇ ರಾಷ್ಟ್ರೀಯ ಹೆದ್ದಾರಿ 275 ಇದ್ದು, ಅದನ್ನೇ ಅಗಲೀಕರಿಸಿ ಅಭಿವೃದ್ಧಿ ಪಡಿಸಬಹುದಿತ್ತಲ್ಲವೇ..? ಈ ರಸ್ತೆ ಇದ್ದಾಗಿಯೂ ಹೊಸ ಮಾರ್ಗದ ಅವಶ್ಯಕತೆ ಏನು..? ಇದಕ್ಕಾಗಿ 1,200 ಎಕರೆಗಿಂತಲೂ ಅಧಿಕ ಪ್ರದೇಶ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಹಾರಂಗಿ ಅಚ್ಚುಕಟ್ಟಿಗಾಗಿ ಸರಕಾರ ನೂರಾರು ಕೋಟಿ ಖರ್ಚು ಮಾಡಿ ನೀರಾವರಿ ಒದಗಿಸಿದೆ. ರೈತರು ಕಷ್ಟಪಟ್ಟು ತೋಟಗಾರಿಕೆ ಮಾಡಿಕೊಂಡಿದ್ದಾರೆ. ಇದೆಲ್ಲವೂ ಸಂಸದರ ಅಂತಃಕರಣಕ್ಕೆ ಗೋಚರಿಸುವುದಿಲ್ಲವೇ..?’ ಎಂದು ಪ್ರಶ್ನಿಸಿದರು.

ಪ್ರತಿ ಟನ್‌ ಕಬ್ಬಿಗೆ 4,500 ರೂ. ದರ ನಿಗದಿಗೆ ಆಗ್ರಹ: ಸಕ್ಕರೆ ಸಚಿವರ ನಿವಾಸಕ್ಕೆ ಮುತ್ತಿಗೆ: ಬಡಗಲಪುರ ನಾಗೇಂದ್ರ
‘ಇದೂ ಸೇರಿದಂತೆ ಸಾಕಷ್ಟು ಪ್ರಶ್ನೆಗಳಿದ್ದು, ಸಾರ್ವಜನಿಕವಾಗಿ ಉತ್ತರಿಸಬೇಕು. ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಜನಪ್ರತಿನಿಧಿಗಳು ಕೂಡಲೇ ಸಭೆ ಕರೆದು ಚರ್ಚಿಸಿ ಸ್ಪಷ್ಟ ತೀರ್ಮಾನಕ್ಕೆ ಬರಬೇಕು. ಇಲ್ಲದಿದ್ದಲ್ಲಿ ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡದೆ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ವಿಜೇಯಂದ್ರ, ಹೊಸೂರು ಕುಮಾರ್‌ ಮತ್ತಿತರರು ಇದ್ದರು.

ಜಾಗ ಕೊಡಲ್ಲ ಎಂದ ರೈತರು

‘ರಸ್ತೆ ಸರ್ವೆಯಲ್ಲಿ ತಮ್ಮ ಭೂಮಿಯೂ ಒಳಗೊಳ್ಳುತ್ತದೆ. ನಾವು ಯಾವುದೇ ಕಾರಣಕ್ಕೂ ಜಾಗ ಕೊಡುವುದಿಲ್ಲ. ಇದೇ ನಮ್ಮ ಜೀವನಾಧಾರ’ ಎಂದು ರೈತರಾದ ವೀಣಾ, ಅವಿನಾಶ್‌, ರಾಮೇಗೌಡ ಅವರು ತಮ್ಮ ಅಳಲು ತೋಡಿಕೊಂಡರು.

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದತಿಗೆ ಆಗ್ರಹ: ಶುಕ್ರವಾರ ಮೈಸೂರು – ಬೆಂಗಳೂರು ಹೆದ್ದಾರಿ ಬಂದ್



Read more

[wpas_products keywords=”deal of the day sale today offer all”]