ದಿಲ್ಲಿಯ ಹೆಚ್ಚುವರಿ ಸೆಷನ್ ಕೋರ್ಟ್‌ನಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು, ವಾಟ್ಸಪ್ ಚಾಟ್ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಕೋರ್ಟ್ ಮುಂದೆ ಪ್ರಸ್ತುತಪಡಿಸಿದರು.
ಆರೋಪಿ ಉಮರ್ ಖಾಲಿದ್ ಗಲಭೆಗೆ ಪ್ರಚೋದನೆ ನೀಡಿದ ಕುರಿತಾಗಿ ನ್ಯಾಯಾಧೀಶರಾದ ಅಮಿತಾಭ್ ರಾವತ್ ಅವರ ಎದುರು ವಿಶೇಷ ಸರ್ಕಾರಿ ಅಭಿಯೋಜಕರು ಸಾಕ್ಷ್ಯಗಳನ್ನು ತೆರೆದಿಟ್ಟರು.
ಆರೋಪಿ ಉಮರ್ ಖಾಲಿದ್ 2020 ಜನವರಿ 15 ಹಾಗೂ 16ರಂದು ದಿಲ್ಲಿಯ ಚಾಂದ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ವಿಚಾರಗಳನ್ನು ಪ್ರತ್ಯಕ್ಷ್ಯದರ್ಶಿಯ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಪ್ರಸ್ತುತ ಪಡಿಸಿದರು.
ಸಭೆಯಲ್ಲಿ ಆರೋಪಿ ಉಮರ್ ಖಾಲಿದ್ ‘ದೊಣ್ಣೆ, ಕಲ್ಲು, ಖಾರದ ಪುಡಿ ಹಾಗೂ ಆಸಿಡ್ ಸಂಗ್ರಹಿಸಿ’ ಎಂದು ಕರೆ ನೀಡಿದ್ದ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಸಿದರು. ಶಾಂತಿಯುತ ಪ್ರತಿಭಟನೆ ನಡೆಸುವ ಸಂಬಂಧ ನಡೆದ ಸಿದ್ದತಾ ಸಭೆಯಲ್ಲಿ ದೊಣ್ಣೆ, ಕಲ್ಲು, ಖಾರದ ಪುಡಿ ಹಾಗೂ ಆಸಿಡ್‌ನ ಪ್ರಸ್ತಾಪವಾದರೂ ಏಕೆ ಬಂತು ಎಂದು ಪ್ರಶ್ನಿಸಿದ ಅವರು, ಈ ಮಾತುಗಳನ್ನು ಗಮನಿಸಿದರೆ ಅಲ್ಲಿ ಶಾಂತಿಯುತ ಪ್ರತಿಭಟನೆಗೆ ಸಿದ್ದತೆ ನಡೆದಿರಲಿಲ್ಲ ಎಂದು ವಾದಿಸಿದರು. ಅಷ್ಟೇ ಅಲ್ಲ, ಸಭೆಯಲ್ಲಿ ಉಪಸ್ಥಿತರಿದ್ದ ಪ್ರತ್ಯಕ್ಷದರ್ಶಿ ಕೂಡಾ ಕೋರ್ಟ್‌ನಲ್ಲಿ ಈ ಸಂಬಂಧ ಸಾಕ್ಷ್ಯ ನುಡಿದಿದ್ದು, ಸಭೆಗೆ ಆಗಮಿಸಿದ್ದ ಪುರುಷರು ಹಾಗೂ ಮಹಿಳೆಯರಿಗೆ ಲಾಠಿ ಹಾಗೂ ಕಲ್ಲುಗಳನ್ನು ನೀಡಲಾಯ್ತು ಎಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಗಮನಿಸಿದರೆ ದಿಲ್ಲಿ ಗಲಭೆ ಪೂರ್ವ ನಿಯೋಜಿತ ಅನ್ನೋದು ಸಾಬೀತಾಗ್ತಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಅಷ್ಟೇ ಅಲ್ಲ, ಸಾಕ್ಷಿಯೊಬ್ಬರು ನೀಡಿರುವ ಅಧಿಕೃತ ಹೇಳಿಕೆಯನ್ನೂ ವಕೀಲರು ಕೋರ್ಟ್‌ನಲ್ಲಿ ಓದಿದರು. ‘ಈ ಸರ್ಕಾರವು ಮುಸ್ಲಿಮರ ವಿರೋಧಿಯಾಗಿದೆ. ಕೇವಲ ಮಾತುಕತೆಯಷ್ಟೇ ಸಾಲದು. ನಾವು ರಕ್ತ ಹರಿಸಬೇಕು’ ಎಂದು ಆರೋಪಿ ಉಮರ್ ಖಾಲಿದ್ ಹೇಳಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇನ್ನೊಂದೆಡೆ ಪ್ರತಿಭಟನೆಗೆ ಮುನ್ನ ಹಲವಾರು ವಾಟ್ಸಪ್ ಗ್ರೂಪ್‌ಗಳನ್ನು ರಚನೆ ಮಾಡಲಾಗಿತ್ತು. ಈ ಗ್ರೂಪ್‌ಗಳಲ್ಲಿ ಪ್ರತಿಭಟನೆ ಕುರಿತಾಗಿ ಮಾಹಿತಿ, ಸಲಹೆ, ಸೂಚನೆ ನೀಡಲಾಗುತ್ತಿತ್ತು ಎಂದೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಈ ಪೈಕಿ ಡೆಲ್ಲಿ ಪ್ರೊಟೆಸ್ಟ್ ಸಪೋರ್ಟ್ ಗ್ರೂಪ್ ಎಂಬ ವಾಟ್ಸಪ್ ಗ್ರೂಪ್ ಸ್ಕ್ರೀನ್ ಶಾಟ್ ಒಂದನ್ನು ನ್ಯಾಯಾಲಯದ ಗಮನಕ್ಕೆ ತಂದ ವಕೀಲರು, ಈ ಗ್ರೂಪ್‌ನಲ್ಲಿ 2020 ಫೆಬ್ರುವರಿ 16 ಹಾಗೂ 17ರಂದು ಓವೈಸಿ ಸುಲ್ತಾನ್ ಖಾನ್ ಎಂಬಾತ ‘ನೀವು ಹಿಂಸಾಚಾರಕ್ಕೆ ಪ್ರಚೋದಿಸಿದಿರಿ, ಸ್ಥಳೀಯರ ಬಳಿ ಸಾಕ್ಷ್ಯ ಇದೆ. ಅವರು ಇದೀಗ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಂದೇಶ ಪ್ರಕಟಿಸಿದ್ದ.
ಇದಕ್ಕೂ ಮುನ್ನ ಇದೇ ಗ್ರೂಪ್‌ನಲ್ಲಿ ‘ನಮ್ಮಲ್ಲಿ ಎಲ್ಲವೂ ಇದೆ, ಬೆಂಕಿ ಹಚ್ಚಬೇಕಷ್ಟೇ’ ಎಂಬ ಸಂದೇಶವೂ ರವಾನೆಯಾಗಿತ್ತು. ಈ ವಾಟ್ಸಪ್ ಗ್ರೂಪ್‌ನಲ್ಲಿ ಆರೋಪಿಗಳಾದ ಉಮರ್ ಖಾಲಿದ್, ಖಾಲಿದ್ ಸೈಫಿ ಸೇರಿದಂತೆ ಹಲವರು ಇದ್ದಾರೆ.
2020ರಲ್ಲಿ ದಿಲ್ಲಿಯಲ್ಲಿ ಗಲಭೆ ಸಂಭವಿಸಿದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ್ದ ದಿಲ್ಲಿ ಪೊಲೀಸರು, ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಭಾಷಣಕಾರ ಝಾಕೀರ್ ನಾಯ್ಕ್ ಹಾಗೂ ಖಾಲಿದ್ ಸೈಫಿ ನಡುವೆ ನಂಟು ಇರೋದನ್ನು ಪತ್ತೆ ಹಚ್ಚಿದ್ದರು. ಮಲೇಷ್ಯಾದಲ್ಲಿ ಝಾಕೀರ್ ನಾಯ್ಕ್‌ನನ್ನು ಭೇಟಿಯಾಗಿದ್ದ ಆರೋಪಿ ಖಾಲಿದ್ ಸೈಫಿ ದಿಲ್ಲಿ ಗಲಭೆಗೆ ಹಣಕಾಸಿನ ನೆರವು ಪಡೆದಿದ್ದ ಎಂದು ಆರೋಪಿಸಲಾಗಿದೆ.
Read more
[wpas_products keywords=”deal of the day sale today offer all”]