Karnataka news paper

ಮೋದಿ ಕೃಪೆಯಿಂದಾಗಿ ಕೋವಿಡ್ ವೇಳೆಯೂ ಮನೆ ಮನೆಗೂ ಲಕ್ಷ್ಮಿ ದೇವತೆ ಆಗಮಿಸಿದ್ದಾಳೆ: ಅಮಿತ್ ಶಾ


ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಕೋವಿಡ್ 19 ಸಾಂಕ್ರಾಮಿಕದ ಎರಡು ವರ್ಷಗಳ ಅವಧಿಯಲ್ಲಿ ಕೂಡ ದೇಶದ ಪ್ರತಿ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಉತ್ತರ ಪ್ರದೇಶದ ಅಟ್ರೌಲಿ ಕ್ಷೇತ್ರದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಕೋವಿಡ್ ಸಾಂಕ್ರಾಮಿಕದ ಕಳೆದ ಎರಡು ವರ್ಷಗಳಲ್ಲಿ ಕಮಲದ ಮೇಲೆ ಕುಳಿತುಕೊಂಡ ಲಕ್ಷ್ಮಿ ದೇವತೆ ಪ್ರತಿ ಮನೆ ಮನೆಗೂ ಬಂದಿದ್ದಾಳೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
UP Elections: ಚಿದಂಬರಂ ಪ್ರಕರಣದ ತನಿಖೆ ನಡೆಸಿದ ಇ.ಡಿ ಅಧಿಕಾರಿ ಈಗ ಬಿಜೆಪಿ ಅಭ್ಯರ್ಥಿ!
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಅವರು ಎಂದಿಗೂ ಬಡವರ ಬಗ್ಗೆ ಚಿಂತಿಸುವುದಿಲ್ಲ. ಹಾಗೆಯೇ ಅಭಿವೃದ್ಧಿ ಪರವಾಗಿ ಏನನ್ನೂ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ ಅಮಿತ್ ಶಾ, ಬಿಜೆಪಿ ಲಸಿಕೆ ಎಂಬ ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು. ‘ನೀವೆಲ್ಲರೂ ಲಸಿಕೆ ಪಡೆದುಕೊಂಡಿದ್ದೀರಿ, ಅಲ್ಲವೇ? ಅಖಿಲೇಶ್ ಯಾದವ್ ಅವರು ಇದು ಬಿಜೆಪಿ ಲಸಿಕೆ ಎಂದು ಹೇಳುತ್ತಿದ್ದರು. ಕೊನೆಗೆ ಅವರೇ ಲಸಿಕೆ ಪಡೆದುಕೊಂಡರು’ ಎಂದು ಟೀಕಿಸಿದ್ದಾರೆ.

2014, 2017 ಮತ್ತು 2019ರ ಚುನಾವಣೆಗಳು ಉತ್ತರ ಪ್ರದೇಶದ ಹಣೆಬರಹವನ್ನು ಬದಲಿಸಿವೆ. ‘ಬುವಾ- ಭತಿಜಾ’ (ಚಿಕ್ಕಮ್ಮ- ಸೋದರಳಿಯ) ಅವರ ಜಾತಿವಾದಿ ಸರ್ಕಾರಗಳು ಉತ್ತರ ಪ್ರದೇಶಕ್ಕೆ ಯಾವುದೇ ಒಳಿತು ಮಾಡಲು ಸಾಧ್ಯವಿಲ್ಲ. ಈ ರಾಜ್ಯವು ‘ಬಿಮಾರು’ ರಾಜ್ಯಗಳ ವರ್ಗದಲ್ಲಿ ಬರುತ್ತಿತ್ತು. ಬಿಜೆಪಿ ಸರ್ಕಾರ ಬದಲಾವಣೆ ತರುವ ಬಯಕೆಯೊಂದಿಗೆ ಕೆಲಸ ಮಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕನ್ಹಯ್ಯಾ ಕುಮಾರ್‌ ಮೇಲೆ ಮಸಿ ದಾಳಿ
ಬಿಮಾರು ಎಂದರೆ ರೋಗ ಎಂಬ ಅರ್ಥವಿದೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯದ ಮೊದಲ ಅಕ್ಷರಗಳನ್ನು ಜೋಡಿಸಿ ‘ಬಿಮಾರು’ ಎಂದು 1980ರ ದಶಕದಲ್ಲಿ ಆಶೀಶ್ ಬೋಸ್ ಅವರು ಕರೆದಿದ್ದರು.

ಅಲಿಗಡದ ಬೀಗ ಕೈಗಾರಿಕೆಯನ್ನು ಪುನಶ್ಚೇತಗೊಳಿಸಲು ಬಿಜೆಪಿ ಸರ್ಕಾರ ನೆರವು ನೀಡಿರುವುದಾಗಿ ಅಮಿತ್ ಶಾ ಹೇಳಿದ್ದಾರೆ. ಬುವಾ- ಭತಿಜಾ (ಮಾಯಾವತಿ- ಅಖಿಲೇಶ್ ಯಾದವ್) ಅವರ ಸರ್ಕಾರ ಅಲಿಗಡದ ಬೀಗ ಕಾರ್ಖಾನೆಯನ್ನು ಮುಚ್ಚಿತ್ತು. ಒಂದು ಜಿಲ್ಲೆ ಒಂದು ಉತ್ಪನ್ನದ ಅಡಿ ಬೀಗ ಕೈಗಾರಿಕೆಯನ್ನು ಬಿಜೆಪಿ ಸರ್ಕಾರ ಉತ್ತೇಜಿಸಿತ್ತು. ಈಗ ಇಲ್ಲಿ ಮತ್ತೆ ನೂರಾರು ಬೀಗ ಉತ್ಪಾದನಾ ಕೈಗಾರಿಕೆಗಳು ಆರಂಭವಾಗಿವೆ ಎಂದು ತಿಳಿಸಿದ್ದಾರೆ.

‘ನೀವು ಇಡೀ ಉತ್ತರ ಪ್ರದೇಶದಲ್ಲಿ ಮಾಫಿಯಾ ಎಲ್ಲಿದೆ ಎಂದು ಹುಡುಕಿದರೆ, ನಿಮಗೆ ಅದು ಮೂರು ಸ್ಥಳಗಳಲ್ಲಿ ಮಾತ್ರ ಕಾಣಿಸುತ್ತದೆ. ಒಂದು ಜೈಲಿನಲ್ಲಿ, ಎರಡು ಉತ್ತರ ಪ್ರದೇಶದ ಹೊರಗೆ ಮತ್ತು ಮೂರು ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಬೆಹೆನ್‌ಜಿ ಮತ್ತು ಅಖಿಲೇಶ್ ಅವರ ಸರ್ಕಾರವಿದ್ದಾಗ ಗೂಂಡಾಗಳು ಜನರಿಗೆ ಕಿರುಕುಳ ನೀಡುತ್ತಿದ್ದರು. ಉತ್ತರ ಪ್ರದೇಶದಲ್ಲಿ ಪೊಲೀಸರು ಮಾಫಿಯಾ ಬಗ್ಗೆ ಹೆದರಿಕೊಂಡಿದ್ದರು. ಯೋಗಿ ಆದಿತ್ಯನಾಥ್ ಸರ್ಕಾರದ ಅಡಿ ಮಾಫಿಯಾ ಈಗ ಉತ್ತರ ಪ್ರದೇಶದಿಂದ ಹೊರಗೆ ವಲಸೆ ಹೋಗಿದೆ’ ಎಂದು ಹೇಳಿದ್ದಾರೆ.
ಮೋದಿಗಿಂತಲೂ ದೊಡ್ಡ ಹಿಂದೂ ಆಗಲು ಯೋಗಿ ಮತ್ತು ಅಖಿಲೇಶ್ ನಡುವೆ ಪೈಪೋಟಿ: ಓವೈಸಿ ಟೀಕೆ
‘ಇತ್ತೀಚೆಗೆ ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಇಲ್ಲಿ ದಾಳಿ ನಡೆಸಲಾಗಿತ್ತು. ಅಲ್ಲಿ 250 ಕೋಟಿ ರೂ ಸಿಕ್ಕಿತ್ತು. ಮೋದಿ ಅವರು ರಾಜಕೀಯ ಮಾಡುತ್ತಾರೆ ಎಂದು ಈ ಜನರು ಹೇಳುತ್ತಾರೆ. ಆ ವ್ಯಾಪಾರಿ ಜತೆಗೆ ನಿಮ್ಮ ಸಂಬಂಧ ಏನು ಎಂದು ಹೇಳಿ? ಒಂದು ವೇಳೆ ಯಾವುದೇ ಸಂಬಂಧ ಇಲ್ಲದೆ ಹೋದರೆ ನಿಮಗೇಕೆ ನೋವಾಗುತ್ತಿದೆ? ಈ ಜನರು ಖಂಡಿತಾ ಪಾರದರ್ಶಕ ಆಡಳಿತ ನೀಡಲು ಸಾಧ್ಯವಿಲ್ಲ’ ಎಂದು ಟೀಕಾಪ್ರಹಾರ ನಡೆಸಿದ್ದಾರೆ.



Read more

[wpas_products keywords=”deal of the day sale today offer all”]