Karnataka news paper

ಹೃದಯದ ಸರ್ಜರಿಗೊಳಪಟ್ಟ ‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಹಾಸ್ಯ ನಟ ಸುನೀಲ್ ಗ್ರೋವರ್‌


ದಿ ಕಪಿಲ್ ಶರ್ಮಾ ಶೋ‘ ಮೂಲಕ ಖ್ಯಾತಿ ಪಡೆದಿರುವ ನಟ ಸುನೀಲ್ ಗ್ರೋವರ್ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯದ ಸರ್ಜರಿಗೆ ಒಳಗಾಗಿದ್ದಾರೆ. ಸುನೀಲ್ ಆಸ್ಪತ್ರೆಗೆ ದಾಖಲಾಗಿರೋದನ್ನು ಬಿಟ್ಟು ಉಳಿದಂತೆ ಯಾವ ಮಾಹಿತಿಯನ್ನು ಕೂಡ ಆಸ್ಪತ್ರೆಯವರು ಬಿಟ್ಟುಕೊಟ್ಟಿಲ್ಲ.

ಕಳೆದ ಏಳು ದಿನಗಳ ಹಿಂದೆ ಸುನೀಲ್ ಸೋಶಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ‘ಕಾಮಿಡಿ ಸರ್ಕಸ್’, ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಶೋನಲ್ಲಿ ಸುನೀಲ್ ಅವರು ವಿಧ ವಿಧವಾದ ಪಾತ್ರಗಳಿಗೆ ಬಣ್ಣ ಹಚ್ಚಿ, ಎಲ್ಲರನ್ನು ನಗಿಸಿದ್ದರು. ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಡಾ ಮಶೂರ್ ಗುಲಾಟಿ, ರಿಂಕು ದೇವಿ, ಪಿದ್ದು ಪಾತ್ರಗಳನ್ನು ಸುನೀಲ್ ನಿಭಾಯಿಸಿದ್ದರು.

ಮಹಿಳೆಯಾಗಲು ತುಂಬ ಇಷ್ಟಪಡ್ತೀನಿ ಎಂದ ಈ ನಟ ಯಾರು ಎಂದು ಗುರುತಿಸಬಲ್ಲಿರಾ?

‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಸುನೀಲ್ ಗ್ರೋವರ್ ಅವರು ವಿಧ ವಿಧವಾದ ಪಾತ್ರಗಳ ಮೂಲಕ ಸ್ಥಳದಲ್ಲಿಯೇ ಮಾತಿಗೆ ತಕ್ಕಂತೆ ಉತ್ತರ ಕೊಟ್ಟು ಎಲ್ಲರನ್ನು ನಗಿಸಿದ್ದರು. ಈ ಶೋಗೆ ಆಗಮಿಸಿದ್ದ ಎಲ್ಲ ಅತಿಥಿಗಳು ಕೂಡ ಸುನೀಲ್ ಕಾಮಿಡಿಗೆ ನಕ್ಕು ನಕ್ಕು ಸುಸ್ತಾಗಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಶನ್, ಶಿಲ್ಪಾ ಶೆಟ್ಟಿ, ರಿತೇಶ್ ದೇಶಮುಖ್, ಕಂಗನಾ ರಣಾವತ್, ಜೆನಿಲಿಯಾ, ಫರಾ ಖಾನ್, ಕಾಜೋಲ್, ಅಜಯ್ ದೇವಗನ್, ಗೋವಿಂದ, ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಸೇರಿ ಅನೇಕರು ಸುನಿಲ್ ಕಾಮಿಡಿ ಕಂಡು ಸಿಕ್ಕಾಪಟ್ಟೆ ನಕ್ಕಿದ್ದಾರೆ. ‘ದಿ ಕಪಿಲ್ ಶರ್ಮಾ ಶೋ’ನ ಕಪಿಲ್ ಶರ್ಮಾ ಜೊತೆ ಸುನೀಲ್ ಜಗಳ ಮಾಡಿಕೊಂಡ ನಂತರದಲ್ಲಿ ಅವರು ಶೋಗೆ ಮರಳಿಲ್ಲ. ಅಭಿಮಾನಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕೂಡ ಅವರಿಬ್ಬರು ಒಂದಾಗಿಲ್ಲ.

ಅಂತೂ ‘ದಿ ಕಪಿಲ್ ಶರ್ಮಾ ಶೋ’ ನಟಿ ಸುಮೋನಾ ಚಕ್ರವರ್ತಿಗೆ ಮೋಸ ಆಗಲಿಲ್ಲ!

ಬೇರೆಯವರನ್ನು ಅನುಕರಿಸೋದರಲ್ಲಿ ಸುನೀಲ್ ಗ್ರೋವರ್ ಎತ್ತಿದ ಕೈ. ‘ಕೌನ್ ಬನೇಗಾ ಕರೋಡ್‌ಪತಿ’ ಶೋನ ಅಮಿತಾಭ್ ಬಚ್ಚನ್ ಹಾಗೂ ಶಾರುಖ್ ಖಾನ್, ಸಲ್ಮಾನ್ ಖಾನ್‌ರನ್ನು ಸುನೀಲ್ ಅದ್ಭುತವಾಗಿ ಮಿಮಿಕ್ರಿ ಮಾಡುತ್ತಾರೆ. ಅದರಲ್ಲಿಯೂ ಬಿಗ್ ಬಾಸ್ ಶೋಗಳಲ್ಲಿ ಸುನೀಲ್ ಗ್ರೋವರ್ ಅವರು ಸಲ್ಮಾನ್ ಖಾನ್‌ರ ಅನೇಕ ಪಾತ್ರಗಳನ್ನು ಅನುಕರಿಸಿದ ರೀತಿ ಸಾಕಷ್ಟು ಮೆಚ್ಚುಗೆ ಪಡೆದು, ವೈರಲ್ ಆಗಿತ್ತು.

ಮಹಿಳೆ ಪಾತ್ರವನ್ನು ಕೂಡ ಸುನೀಲ್ ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಈ ಬಗ್ಗೆ ಮಾತನಾಡಿದ್ದ ಸುನೀಲ್ ಗ್ರೋವರ್, “ಕಾಡಿಗೆ ಹಚ್ಚುವುದು, ಮಹಿಳೆಯರ ರೀತಿ ಡ್ರೆಸ್ ಮಾಡಿಕೊಳ್ಳೋದು ತುಂಬ ಕಷ್ಟ. ಅದರಲ್ಲೂ ಪುರುಷರು ಮಹಿಳೆ ವೇಷ ಧರಿಸುವುದು ಅಂದರೆ ಮೂಲ ಅಸ್ತಿತ್ವವನ್ನು ಮರೆಮಾಚುವುದಾಗಿರುತ್ತದೆ. ನನ್ನ ಜೊತೆ ನಾನು ಕಂಫರ್ಟ್ ಇಲ್ಲ, ಆದ್ದರಿಂದ ನಾನು ಆಸಕ್ತಿದಾಯಕ ವ್ಯಕ್ತಿ ಅಂತ ನನಗೆ ಅನಿಸೋದಿಲ್ಲ, ಹೀಗಾಗಿ ನನಗೆ ಮಹಿಳೆಯರ ರೀತಿ ಡ್ರೆಸ್ ಮಾಡಿಕೊಳ್ಳೋದು ಅಂದರೆ ತುಂಬ ಇಷ್ಟ. ಸೀರೆಯುಟ್ಟರೆ ಸಾಕು ಖುಷಿಯಾಗತ್ತೆ” ಎಂದು ಹೇಳಿದ್ದರು.

ಕಾಮಿಡಿ ಬಿಟ್ಟು ಗಂಭೀರವಾದ ಪಾತ್ರಗಳನ್ನು ಕೂಡ ಸುನೀಲ್ ನಿರ್ವಹಿಸಲು ಇಷ್ಟಪಡುವೆ ಎಂದು ಹೇಳಿದ್ದ ಅವರು ‘ತಾಂಡವ್’, ‘ಸನ್ ಫ್ಲವರ್’ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ನಟ ಶಾರುಖ್ ಖಾನ್ ನಟನೆಯ, ನಿರ್ದೇಶಕ ಅಟ್ಲೀ ಸಿನಿಮಾದಲ್ಲಿಯೂ ಸುನೀಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.



Read more

[wpas_products keywords=”deal of the day party wear dress for women stylish indian”]