ಹೊಸ ಮನೆಯ ಬಾಲ್ಕನಿ ಫೋಟೋಗಳನ್ನು ಹಂಚಿಕೊಂಡಿರುವ ಚಂದನ್ ಕುಮಾರ್, “ಹೊಸ ಮನೆಯಲ್ಲಿ ಹೊಸ ಜೀವನ. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿ ಮಾಡಿದ್ದೇನೆ” ಎಂದು ಕ್ಯಾಪ್ಶನ್ ನೀಡಿದ್ದಾರೆ. ಅನೇಕರು ಚಂದನ್, ಕವಿತಾ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲಿ ‘ಮರಳಿ ಮನಸಾಗಿದೆ’ ಹಾಗೂ ತೆಲುಗಿನ ಶ್ರೀಮತಿ ಶ್ರೀನಿವಾಸ್ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ.
ಸಖತ್ ಬ್ಯುಸಿಯಾಗಿದ್ದಾರೆ ಚಂದನ್ ಕುಮಾರ್
ಎರಡು ಧಾರಾವಾಹಿಗಳ ಶೂಟಿಂಗ್ ಜೊತೆಗೆ ಚಂದನ್ ಕುಮಾರ್ ಒಡೆತನದ ಹೋಟೆಲ್ ಕೂಡ ಇದೆ, ಇದರ ಜೊತೆಗೆ ಪ್ರೋಟೀನ್ ಅಂಗಡಿ ಕೂಡ ಇದೆ. ಸಿನಿಮಾ ಕೆಲಸ ಆರಂಭಿಸಿರುವ ಅವರು ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ತಿಂಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಎಂದು ಎಷ್ಟು ಬ್ಯುಸಿಯಾಗಿದ್ದೆ ಅಂತ ಹೇಳಿಕೊಂಡಿದ್ದರು.
ನಟ ಸುಶಾಂತ್ ಸಿಂಗ್ ‘ಪವಿತ್ರ ರಿಷ್ತಾ’ ಸೀರಿಯಲ್‌ಗೂ, ಚಂದನ್ ಕುಮಾರ್ ಮುಂದಿನ ಪ್ರಾಜೆಕ್ಟ್‌ಗಿದೆ ನಂಟು!
ಪ್ರೀತಿಸಿ ಮದುವೆಯಾದ ಕವಿತಾ, ಚಂದನ್
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಕೆಲವೇ ತಿಂಗಳುಗಳಲ್ಲಿ ಚಂದನ್ ಆ ಧಾರಾವಾಹಿಯಿಂದ ಹೊರ ಬಂದು ಬೇರೆ ಬೇರೆ ಧಾರಾವಾಹಿ, ಸಿನಿಮಾಗಳಲ್ಲಿ ಬ್ಯುಸಿಯಾದರು. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ ಹೊರಬಂದು ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದರೂ ಕೂಡ ಚಂದನ್ ಹಾಗೂ ಕವಿತಾ ಗೌಡ ನಡುವೆ ಇದ್ದ ಸ್ನೇಹ ದೂರ ಆಗದೆ ಅದು ಇನ್ನಷ್ಟು ಹತ್ತಿರ ಆಗಿ ಪ್ರೀತಿಯಾಗಿ ಬೆಳೆಯಿತು. ಕುಟುಂಬದವರನ್ನು ಒಪ್ಪಿಸಿ ಚಂದನ್ ಹಾಗೂ ಕವಿತಾ ಮದುವೆಯಾಗಿದ್ದಾರೆ.
ಹೇಗಿದ್ದ ಚಂದನ್ ಕುಮಾರ್ ಹೇಗಾದ್ರು ನೋಡಿ; ಇದು ಮದುವೆ ಎಫೆಕ್ಟ್ ಎಂದು ಪ್ರಶ್ನಿಸಿದ ನೆಟ್ಟಿಗರು!
ಸರಳವಾಗಿ ನಡೆದ ಚಂದು, ಕವಿತಾ ಮದುವೆ
ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕವಿತಾ, ಚಂದನ್ ಅವರು ಕಳೆದ ವರ್ಷ ಸರಳವಾಗಿ ಮದುವೆಯಾದರು. ಕೊರೊನಾ ಕಾರಣದಿಂದ ಈ ಜೋಡಿ ಅಷ್ಟಾಗಿ ಯಾರನ್ನೂ ಅವರ ಮದುವೆಗೆ ಕರೆದಿರಲಿಲ್ಲ, ಆರತಕ್ಷತೆ ಕಾರ್ಯಕ್ರಮ ಕೂಡ ಮಾಡಿಕೊಂಡಿರಲಿಲ್ಲ. ಈ ಮದುವೆಗೆ ಕೆಲವೇ ಕೆಲವು ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸಿದ್ದರು. ಮದುವೆ ನಂತರದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡ ಈ ಜೋಡಿಗೆ ಅವರ ಅಭಿಮಾನಿಗಳು, ಸ್ಯಾಂಡಲ್‌ವುಡ್, ಟಾಲಿವುಡ್ ಗಣ್ಯರು ಶುಭ ಹಾರೈಸಿದ್ದರು.
ಸದ್ಯ ಕವಿತಾ ಗೌಡ ಅವರು ಸಿನಿಮಾ ಕಡೆಗೆ ಮುಖ ಮಾಡುತ್ತಿದ್ದಾರೆ. ಕವಿತಾ ನಟನೆಯ ‘ಹುಟ್ಟುಹಬ್ಬದ ಶುಭಾಶಯಗಳು’, ‘ಗೋವಿಂದ ಗೋವಿಂದ’ ಸಿನಿಮಾ ಇತ್ತೀಚೆಗೆ ರಿಲೀಸ್ ಆದರೂ ಯಶಸ್ಸು ಕಾಣಲಿಲ್ಲ. ಸದ್ಯ ಕವಿತಾ ಬೇರೆ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕವಿತಾ, ಚಂದನ್ ಆಗಾಗ ಸಿನಿಮಾ, ಧಾರಾವಾಹಿ, ಫಿಟ್‌ನೆಸ್ ಕುರಿತಂತೆ ಪೋಸ್ಟ್ ಮಾಡುತ್ತಿರುತ್ತಾರೆ.
Video: ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್ ಕುಮಾರ್- ಕವಿತಾ ಗೌಡ
Read more
[wpas_products keywords=”deal of the day party wear dress for women stylish indian”]