ಹೌತಿ ಬಂಡುಕೋರರ ವಿರುದ್ಧ ಸೆಣೆಸಲು ಯುಎಇಗೆ ಒಂದು ಯುದ್ಧನೌಕೆ ಮತ್ತು ಫೈಟರ್ ಜೆಟ್‌ಗಳನ್ನು ಕಳಿಸಿಕೊಡಲು ಅಮೆರಿಕ ನಿರ್ಧರಿಸಿದೆ. ಹೌತಿ ಬಂಡುಕೋರರು ನಿರಮತರವಾಗಿ ಯುಎಇ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಯುಎಇ ರಕ್ಷಣೆಗೆ ಧಾವಿಸಲು ನಾವು ಸಿದ್ಧ ಎಂದು ಅಮೆರಿಕ ಹೇಳಿದೆ.
ಈ ಕುರಿತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಅಬುಧಾಬಿ ಯುವರಾಜ ಮೊಹಮ್ಮದ್ ಬಿನ್ ಜಾಯೆದ್ ಅಲ್-ನಹ್ಯಾನ್ ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ಅಮೆರಿಕದ ರಕ್ಷಣಾ ಸಹಾಯವನ್ನು ಸ್ವಾಗತಿಸುವುದಾಗಿ ಯುವರಾಜ ಹೇಳಿದ್ದಾರೆ ಎಂದು ಯುಎಇಯ ಅಮೆರಿಕದ ರಾಯಭಾರಿ ಸ್ಪಷ್ಟಪಡಿಸಿದ್ದಾರೆ.
ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಒಕ್ಕೂಟದ ಭಾಗವಾಗಿರುವ ಯುಎಇ, ಇದೀಗ ಹೌತಿ ಬಂಡುಕೋರರ ವಿಧ್ವಂಸಕ ದಾಳಿಗಳಿಗೆ ಗುರಿಯಾಗಿದೆ. ಕಳೆದ ತಿಂಗಳು ಯುಎಇ ಮೇಲೆ ಮೂರು ಕ್ಷಿಪಣಿ ದಾಳಿಗಳನ್ನು ನಡೆಸಿರುವ ಹೌತಿ ಬಂಡುಕೋರರು, ತೈಲ ಕಾರ್ಮಿಕರನ್ನು ಕೊಂದು ಹಾಕಿದೆ.
ಇದರಿಂದ ವಿಚಲಿತವಾಗಿರುವ ಯುಎಇ, ಹೌತಿ ಬಂಡುಕೋರರ ವಿರುದ್ಧದ ತನ್ನ ಸಮರವನ್ನು ಮತ್ತಷ್ಟು ಹಚ್ಚಿಸಿದೆ. ಇದೀಗ ಅಮೆಎರಿಕ ಕೂಡ ಯುಎಇ ಬೆಂಬಲಕ್ಕೆ ಬಂದಿದ್ದು, ಅತ್ಯಾಧುನಿಕ ಯುದ್ಧ ನೌಕೆ ಮತ್ತು ಫೈಟರ್ ಜೆಟ್‌ಗಳನ್ನು ರವಾನಿಸಲು ನಿರ್ಧರಿಸಿದೆ. ಅಮೆರಿಕದ ಈ ನಿರ್ಧಾರವನ್ನು ಯುಎಇ ಕೂಡ ಸ್ವಾಗತಿಸಿದ್ದು, ಬಂಡುಕೋರರ ಹುಟ್ಟಡಗಿಸಲು ನಾವು ಸಜ್ಜಾಗುತ್ತಿದ್ದೇವೆ ಎಂಬ ಸಂದೇಶ ರವಾನಿಸಿದೆ.
ಒಟ್ಟಿನಲ್ಲಿ ಯುಎಇ ಮತ್ತು ಹೌತಿ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅಮರಿಕದ ಮಧ್ಯಪ್ರವೇಶದಿಂದ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ ಎಂದು ಹೇಳಬಹುದು.
Read more
[wpas_products keywords=”deal of the day sale today offer all”]