ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾವಿ ಪತಿ ಜೊತೆ ಸೀರೆ ಶಾಪಿಂಗ್ ಹೋದ ಬಗ್ಗೆ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು. ಇದನ್ನೆಲ್ಲ ನೋಡಿದರೆ ರಶ್ಮಿ ಜೋರಾಗಿಯೇ ಮದುವೆ ತಯಾರಿ ನಡೆಸಿದ್ದಾರೆ. ಇನ್ನು ನಿಶ್ಚಿತಾರ್ಥದ ನಂತರದಲ್ಲಿ ಅವರು ನಿಖಿಲ್ ಭಾರ್ಗವ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಅಪ್‌ಲೋಡ್ ಮಾಡುತ್ತಿದ್ದಾರೆ. ಪ್ರತಿ ಬಾರಿ ಹೈದರಾಬಾದ್‌ಗೆ ಶೂಟಿಂಗ್ ಹೋಗುವಾಗ ನಿಖಿಲ್ ತನಗೆ ಡ್ರಾಪ್ ಮಾಡುತ್ತಾರೆ ಎಂದು ಇತ್ತೀಚೆಗೆ ಸಿಕ್ರೇಟ್ ಬಿಟ್ಟುಕೊಟ್ಟಿದ್ದರು.
ಆರತಕ್ಷತೆ ಕಾರ್ಯಕ್ರಮ ಇರೋದಿಲ್ಲ
2021ರ ನವೆಂಬರ್‌ನಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ ನಿಶ್ಚಿತಾರ್ಥ ಬೆಂಗಳೂರಿನಲ್ಲಿಯೇ ನಡೆದಿತ್ತು. ಈ ಹಿಂದೆ ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿ ಪ್ರಭಾಕರ್ ಅವರು ‘ಸಾಂಪ್ರದಾಯಿಕವಾಗಿ ಮದುವೆ ಆಗ್ತೀನಿ, ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಳ್ಳಲ್ಲ’ ಎಂದು ಹೇಳಿದ್ದರು. ಕಳೆದ ಮೂರು ವರ್ಷಗಳಿಂದ ನಿಖಿಲ್ ಭಾರ್ಗವ ಹಾಗೂ ರಶ್ಮಿ ಸ್ನೇಹಿತರು. ನಿಖಿಲ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಿಖಿಲ್, ರಶ್ಮಿ ಪ್ರೀತಿಗೆ ಅವರ ಮನೆಯವರು ಒಪ್ಪಿದ್ದು, ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರಶ್ಮಿ ಹಸೆಮಣೆ ಏರಲಿದ್ದಾರೆ.
ನಿಖಿಲ್ ಭಾರ್ಗವ ಜೊತೆ ಉಂಗುರ ಬದಲಾಯಿಸಿಕೊಂಡ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ರಶ್ಮಿ ಪ್ರಭಾಕರ್
100 ದಿನದ ಚಾಲೆಂಜ್, ತೂಕ ಕಳೆದುಕೊಂಡ ರಶ್ಮಿ ಪ್ರಭಾಕರ್
ಕನ್ನಡದಲ್ಲಿ ‘ಶುಭವಿವಾಹ’ , ‘ಜೀವನಚೈತ್ರ’ , ‘ಮನಸೆಲ್ಲಾ ನೀನೇ’, ‘ಮಹಾಭಾರತ’, ‘ದರ್ಪಣ’ ಧಾರಾವಾಹಿಗಳಲ್ಲಿ ರಶ್ಮಿ ಪ್ರಭಾಕರ್ ನಟಿಸಿದ್ದರು. ತಮಿಳಿನ ‘ಅರುಂಧತಿ’, ತೆಲುಗಿನ ‘ಪೌರ್ಣಮಿ’ ಧಾರಾವಾಹಿ ಜೊತೆಗೆ ಪ್ರಸ್ತುತ ತೆಲುಗಿನ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ‘ಕಾವ್ಯಾಂಜಲಿ’ ಧಾರಾವಾಹಿಯ ಅಪ್‌ಡೇಟ್ ಕುರಿತಂತೆ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುತ್ತಿದ್ದಾರೆ. ಕಳೆದ ಲಾಕ್‌ಡೌನ್‌ನಲ್ಲಿ ಡಯೆಟ್, ವರ್ಕೌಟ್ ಮಾಡಿ ರಶ್ಮಿ ಪ್ರಭಾಕರ್ ತೂಕ ಕಳೆದುಕೊಂಡಿದ್ದಾರೆ. ನಿತ್ಯ 10000 ಹೆಜ್ಜೆಗಳಂತೆ 100 ದಿನ ನಡೆಯಬೇಕು ಎಂಬ ಚಾಲೆಂಜ್ ಮಾಡಿಕೊಂಡು ರಶ್ಮಿ ವಾಕಿಂಗ್ ಮಾಡಿದ್ದಾರೆ. ಇದರಿಂದ ಪ್ರೇರಣೆಗೊಂಡ ಅನೇಕರು ವಾಕಿಂಗ್ ಮಾಡುತ್ತಿದ್ದಾರೆ. ಡಯೆಟ್, ವರ್ಕೌಟ್‌ನಿಂದ ದೇಹದಲ್ಲಿನ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸುಧಾರಿಸಿವೆ ಎಂದು ಸ್ವತಃ ರಶ್ಮಿ ಈ ಹಿಂದೆಯೇ ಹೇಳಿದ್ದರು.
ಆರತಕ್ಷತೆ ಇರಲ್ಲ, ಸಾಂಪ್ರದಾಯಿಕವಾಗಿ ಮದುವೆ ಆಗುವೆ: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ರಶ್ಮಿ ಪ್ರಭಾಕರ್
ಧಾರಾವಾಹಿ ಜೊತೆಗೆ ‘ಮಹಾಕಾವ್ಯ’, ‘ಬಿಬಿ5’ ಸಿನಿಮಾಗಳಲ್ಲಿ ರಶ್ಮಿ ನಟಿಸಿದ್ದರು. ಶ್ರುತಿ ನಾಯ್ಡು ನಿರ್ಮಾಣದ ‘ಮನಸೆಲ್ಲಾ ನೀನೆ’ ಧಾರಾವಾಹಿಯನ್ನು ರಶ್ಮಿ ಪ್ರಭಾಕರ್ ವೈಯಕ್ತಿಕ ಕಾರಣಕ್ಕೆ ಅರ್ಧಕ್ಕೆ ಬಿಟ್ಟಿದ್ದರು. ಇನ್ನು ಯಾವಾಗ ರಶ್ಮಿ ಮತ್ತೆ ಕಿರುತೆರೆಗೆ ಮರಳುತ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಾಗಿನಿಂದ ಅವರು ಒಂದಲ್ಲ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದಾರೆ.
Read more
[wpas_products keywords=”deal of the day party wear dress for women stylish indian”]