1 ಲೀಟರ್ ಎಲ್‌ಪಿಜಿ ಗ್ಯಾಸ್‌ಗೆ 69 ರೂ. ಆಗಿದ್ದು, ಆಟೋ ಚಾಲಕರ ಬದುಕು ದುಸ್ತರವಾಗಿದೆ. ಹಾಗಾಗಿ ಬೆಂಗಳೂರು ನಗರದಲ್ಲಿ ಜಾರಿಗೆ ಬಂದಿರುವ ಆಟೋ ಬಾಡಿಗೆ ದರದ ಮಾದರಿಯಲ್ಲಿ ಪರಿಷ್ಕರಿಸಬೇಕೆಂಬ ಆಟೋ ಚಾಲಕರ ಮನವಿಯನ್ನು ಸಭೆ ಅಂಗೀಕರಿಸಿತು. ಆ್ಯಪ್ ಆಧಾರಿತ ಸಾರಿಗೆ ಸೇವೆಗಳಾದ ಓಲಾ, ಉಬರ್, ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಸೇವೆ ನೀಡಲಾಗುತ್ತಿದೆ.
ಇದು ಕಾನೂನು ಬಾಹಿರ. ಇವುಗಳಿಂದ ಆಟೋರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕಾನೂನಿನಡಿಯಲ್ಲಿ ಇಲ್ಲವೆಂದು ಕಾನೂನು ಬಾಹಿರ ಎನ್ನಲಾಗದು. ದೇಶದ ವಿವಿಧ ಭಾಗಗಳಿಂದ ಉಬರ್, ಓಲಾ ಸೇವೆ ದೊರೆಯುತ್ತಿದೆ. ಸಮಸ್ಯೆ ಬಗ್ಗೆ ಮನವಿ ಕೊಟ್ಟರೆ ಸರಕಾರ ಕಳುಹಿಸುತ್ತೇವೆ ಎಂದು ಭರವಸೆ ನೀಡಿದರು.
ಡಿ.1 ರಿಂದ ಆಟೋ ಪ್ರಯಾಣ ದುಬಾರಿ; ಕನಿಷ್ಟ ಪ್ರಯಾಣ ದರ ₹30 ರೂಪಾಯಿಗೆ ಹೆಚ್ಚಳ ಮಾಡಿ ಆದೇಶ
ಪರಿಹಾರ ದೊರೆತಿಲ್ಲ!
ಲಾಕ್‌ಡೌನ್ ವೇಳೆ ಸರಕಾರ ಆಟೋ ಚಾಲಕರಿಗೆ ಘೋಷಿಸಿದ ಪರಿಹಾರ ದೊರೆತಿಲ್ಲ ಎಂದು ಚಾಲಕರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಮಹದೇವಸ್ವಾಮಿ, ಡಿಎಲ್ ಇಲ್ಲದ ಕಾರಣ ಪರಿಹಾರ ನೀಡಲಾಗಿಲ್ಲ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಬಗಾದಿ ಗೌತಮ್, ಪರಿಹಾರ ವಿತರಣೆಯಲ್ಲಿ ತಡ ಮಾಡುವುದು ಸರಿಯಲ್ಲ. ಕೂಡಲೇ ಸಮಸ್ಯೆ ಇತ್ಯರ್ಥ ಮಾಡುವಂತೆ ಸೂಚಿಸಿದರು.
ಪಾಯಿಂಟ್ ಸರ್ವೇಗೆ ಒತ್ತಾಯ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಹೊರಡುವ ಪ್ರಿಪೇಯ್ಡ್ ಆಟೋಗಳಿಗೆ ಬರುವ ಗ್ರಾಹಕರಿಗೆ ನೀಡುವ ಚೀಟಿಯಲ್ಲಿ ನಮೂದಿಸುವ ಕಿ.ಮೀ. ದೂರದ ವಿವರದಲ್ಲಿ ನ್ಯೂನತೆ ಇದ್ದು, ಪ್ರಿಪೇಯ್ಡ್‌ನಲ್ಲಿ ಮರು ಸರ್ವೇ ನಡೆಸಬೇಕೆಂದು ಚಾಲಕ ಸಾಯಿಬಾಬಾ ನಾಗರಾಜು ಒತ್ತಾಯಿಸಿದರು. 2008ರಲ್ಲಿ ಸರ್ವೇ ಮಾಡಿದಾಗ ನಗರ 7ರಿಂದ 8 ಕಿಮೀ ಬೆಳೆದಿತ್ತು. ಈಗ 14ರಿಂದ 15 ಕಿಮೀ ಬೆಳೆದಿದೆ.
ಸರ್ವೇ ಮಾಡಿಸಿ ನಿಖರವಾಗಿ ಪಾಯಿಂಟ್ ಗುರುತಿಸಿದರೆ ಪ್ರಿಪೇಯ್ಡ್ ಆಟೋರಿಕ್ಷಾ ಚಾಲಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಪಿ ಶಿವಕುಮಾರ್ ಆರ್.ದಂಡಿನ, ನಗರದ ಡಿಸಿಪಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಹುಣಸೂರು ಆರ್‌ಟಿಒ ಹೇಮಾವತಿ, ಉಪ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್, ಸಂಯುಕ್ತ ಕರ್ನಾಟಕ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸಮಿತ್ರ, ಚಾಲಕ ಸೋಮನಾಯ್ಕ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಪರಿಷ್ಕರಣೆಯಾದ ದರ -ಆಟೋ ರಿಕ್ಷಾ ಬಾಡಿಗೆ ದರ ಕನಿಷ್ಠ 2 ಕಿ.ಮೀ.ಗೆ 30 ರೂ., ನಂತರದ 1 ಕಿ.ಮೀ.ಗೆ ತಲಾ 15 ರೂ. -ಕಾಯುವ ದರ ಮೊದಲು 5 ನಿಮಿಷ ಉಚಿತ, ನಂತರದ ಪ್ರತಿ 15 ನಿಮಿಷಕ್ಕೆ ತಲಾ 5 ರೂ. -ಲಗೇಜು ದರಗಳು 20 ಕೆಜಿವರೆಗೆ ಉಚಿತ, ನಂತರದ ಪ್ರತಿ 20 ಕಿಲೋಗೆ ತಲಾ 5 ರೂ. -ಪ್ರಯಾಣಿಕರ ಗರಿಷ್ಠ ಲಗೇಜು ಮಿತಿ 50 ಕೆಜಿ. -ರಾತ್ರಿ ವೇಳೆ ದರವು ಸಾಮಾನ್ಯ ಬಾಡಿಗೆ ದರದ ಅರ್ಧಪಟ್ಟು ಹೆಚ್ಚಳ(ರಾತ್ರಿ 10ರಿಂದ ಬೆಳಗ್ಗಿನ ಜಾವ 5ರವರೆಗೆ).
Read more
[wpas_products keywords=”deal of the day sale today offer all”]