ದೆಹಲಿ ಭೇಟಿ ಕುರಿತಾಗಿ ಬೆಂಗಳೂರಿನ ಆರ್.ಟಿ. ನಗರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಅಧಿವೇಶನಕ್ಕೆ ಮೊದಲು ರಾಜ್ಯದ ಸಂಸದರನ್ನು ಮುಖ್ಯಮಂತ್ರಿಗಳು ಭೇಟಿ ಮಾಡುವುದು ವಾಡಿಕೆ. ಈ ನಿಟ್ಟಿನಲ್ಲಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಜೊತೆಗೆ ಅಂತಾರಾಜ್ಯ ಜಲವಿವಾದ ಪ್ರತಿನಿಧಿಸುವ ವಕೀಲರನ್ನು ಭೇಟಿ ಮಾಡಲಿದ್ದೇನೆ. ಭೇಟಿ ಸಮಯ ನಿಗದಿಯಾದರೆ ಬಹುತೇಕ ನಾಳೆ ಬೆಳಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದರು.
ದೆಹಲಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುತ್ತಾ? ಎಂದ ಪ್ರಶ್ನೆಗೆ, “ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಬಗ್ಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಇದೇ ವೇಳೆ ಹೇಳಿದರು.
ಬಜೆಟ್ ಇಲಾಖಾವಾರು, ರಾಜ್ಯವಾರು ಸಂಪೂರ್ಣ ವಿವರ ಬರಲು ಎರಡು ದಿನಗಳು ಬೇಕು. ರಾಜ್ಯಕ್ಕೆ ಯಾವ ಹೊಸ ಯೋಜನೆ ಬಂದಿದೆ? ಅದರ ಅನುದಾನ ಏನಿದೆ ಎಂಬುದು ಬಳಿಕ ತಿಳಿಯಲಿದೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನ, ಸಾಲ ಇದರ ಆಧಾರದಲ್ಲಿ ನಮ್ಮ ರಾಜ್ಯದ ಬಜೆಟ್ ನಿರ್ಣಯ ಮಾಡಬೇಕಾಗುತ್ತದೆ.
ಏಳನೇ ತಾರೀಖಿನಿಂದ ಬಜೆಟ್ ಪಕ್ರಿಯೆಗೆ ಚಾಲನೆ ನೀಡಲಿದ್ದೇನೆ. ಬೇರೆ ಬೇರೆ ಇಲಾಖೆಯ ಜೊತೆ ಸಭೆ ನಡೆಸಲಿದ್ದೇನೆ. ಅವರ ಅಭಿಪ್ರಾಯ ಪಡೆದುಕೊಂಡು ಬಜೆಟ್ ಬಗ್ಗೆ ತೀರ್ಮಾನ ನಡೆಸುತ್ತೇನೆ ಎಂದರು.
ಗರಿಗೆದರಿದ ಸಂಪುಟ ವಿಸ್ತರಣೆ ಚರ್ಚೆ
ಸಿಎಂ ದೆಹಲಿ ಪ್ರವಾಸಕ್ಕೆ ಮುಂದಾಗುತ್ತಿದ್ದಂತೆ ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಯೂ ಗರಿಗೆದರಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ಸಾಕಷ್ಟು ಆಕಾಂಕ್ಷಿಗಳಿದ್ದು ಮುಖ್ಯಮಂತ್ರಿ ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ. ಗುರುವಾರ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುತ್ತಾರಾ? ಎಂಬ ಸಹಜ ಕುತೂಹಲ ಹುಟ್ಟಿಕೊಂಡಿದೆ.
Read more
[wpas_products keywords=”deal of the day sale today offer all”]