Karnataka news paper

ಹಿಜಾಬ್‌ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್


ಹುಬ್ಬಳ್ಳಿ: ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ. ಸರಕಾರ ವಿಳಂಬ ಮಾಡದೆ ಅವಿಧೇಯತೆ ತೋರವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ತಾವು ವಿದ್ಯಾಕೇಂದ್ರಕ್ಕೆ ಬರುತ್ತಿದ್ದೆವೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದೆವೋ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ವಿದ್ಯಾಸಂಸ್ಥೆಯಲ್ಲಿ ಎಲ್ಲರಿಗೂ ಒಂದೇ ನಿಯಮ ಇರುತ್ತದೆ. ಅದನ್ನು ಪಾಲಿಸಬೇಕಾದ ಕರ್ತವ್ಯ ವಿದ್ಯಾರ್ಥಿಗಳ ಮೇಲಿದೆ’ ಎಂದರು.
ಉಡುಪಿ: ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ತರಗತಿ ಪ್ರವೇಶಕ್ಕೆ ನಿರಾಕರಣೆ
‘ಉಡುಪಿ ಸರಕಾರಿ ಮಹಿಳಾ ಕಾಲೇಜಿನ ಹಿಜಾಬ್‌ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ, ಇವತ್ತು ಹಿಜಾಬ್‌ ಬೇಕು ಎನ್ನುತ್ತಾರೆ, ನಾಳೆ ಬುರ್ಖಾ ಬೇಕು ಎನ್ನುತ್ತಾರೆ, ನಾಡಿದ್ದು ಮಸೀದಿ, ಮೈಕ್ ಬೇಕು ಎನ್ನುತ್ತಾರೆ. ಹಿಜಾಬ್‌ನ ಈ ವಿಷಯ ಭಯೋತ್ಪಾದನೆ ತನಕ ಕೊಂಡೊಯ್ಯುವ ಮಾನಸಿಕತೆ ಇದೆ. ಇದು ಬಹಳ ಅಪಾಯಕಾರಿ. ಈ ವಿಷಯದಲ್ಲಿ ವಿನಾಕಾರಣ ವಿವಾದ ಸೃಷ್ಟಿಸುವುದು ಸರಿಯಲ್ಲ. ಅಷ್ಟಕ್ಕೂ ಹಿಜಾಬ್‌ ಧರಿಸಿಯೇ ಬರುತ್ತೇವೆ ಎಂದಾದರೆ ಅಂಥವರು ಪಾಕಿಸ್ತಾನಕ್ಕೆ ಹೋಗಲಿ. ಅಂಥ ವಿದ್ಯಾರ್ಥಿಗಳ ಮನವಿ ಆಲಿಸಿ ಕಾಲಹರಣ ಮಾಡುವ ಬದಲು ಚರ್ಚೆಗೆ ಅವಕಾಶ ಮಾಡಿಕೊಡದೆ ಅವರಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳುಹಿಸಬೇಕು’ ಎಂದರು.
ಬೆಂಗಳೂರು: ಹಿಜಾಬ್‌ ಧಾರಣೆ ಮೂಲಭೂತ ಹಕ್ಕು ಎಂದು ಘೋಷಿಸಿ, ಹೈಕೋರ್ಟ್‌ಗೆ ವಿದ್ಯಾರ್ಥಿನಿ ಮೊರೆ
ಜಾತ್ರೆಗೆ ನಿರ್ಬಂಧ ಸರಿಯಲ್ಲ:
‘ಈಗಾಗಲೇ ಎಲ್ಲೆಡೆ ಕೋವಿಡ್‌ ನಿಯಮಾವಳಿ ಸಡಿಲಿಕೆ ಮಾಡಲಾಗಿದೆ. ಬಾರ್‌, ಕ್ಲಬ್‌, ಪಬ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಹಿಂದೂಗಳ ಜಾತ್ರೆಗೆ ನಿರ್ಬಂಧ ಹೇರುವುದು ಸರಿಯಲ್ಲ. ಈ ಕೂಡಲೆ ಸರಕಾರ ಕ್ರಮ ಕೈಗೊಂಡು ಜಾತ್ರೆ, ಹಬ್ಬ ಹರಿದಿನಕ್ಕೆ ಅನುಮತಿ ನೀಡಬೇಕು. ಫೆ. 4ರೊಳಗೆ ಸೂಕ್ತ ತೀರ್ಮಾನ ಪ್ರಕಟಿಸಬೇಕು. ಬೇಡಿಕೆ ಈಡೇರದಿದ್ದಲ್ಲಿ ಫೆ. 4ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ ಕಚೇರಿಗಳಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಸಂಘಟನೆ ಕಾರ್ಯದರ್ಶಿ ಮಂಜುನಾಥ ಕಾಟಕರ, ಜಿಲ್ಲಾಧ್ಯಕ್ಷ ಅಣ್ಣಪ್ಪ ದೀವಟಗಿ, ಹುಬ್ಬಳ್ಳಿ ಅಧ್ಯಕ್ಷ ಬಸವರಾಜ ದುರ್ಗದ ಇದ್ದರು.



Read more

[wpas_products keywords=”deal of the day sale today offer all”]