ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ ವೇಳೆ ಹೃದಯಾಘಾತಕ್ಕೊಳಗಾಗಿದ್ದು, ಸಿಪಿಆರ್ ನೀಡಿದ ಚೇತರಿಸಿದ್ದಾರೆ. ಮೆದುಳಿನ ರಕ್ತದ ಹರಿವಿನಲ್ಲೂ ಸುಧಾರಣೆ ಕಂಡುಬಂದಿದೆ. ಚಿಕಿತ್ಸೆಗೂ ಅವರು ಸ್ಪಂದಿಸಿದ್ದಾರೆ. ಕೈಕಾಲುಗಳು ಸ್ವಲ್ಪಮಟ್ಟಿಗೆ ಚಲಿಸುತ್ತಿದ್ದು, ಹೃದಯ ಬಡಿತ ಮತ್ತು ರಕ್ತದೊತ್ತಡ ಸಾಮಾನ್ಯ ಸ್ಥಿತಿಯಲ್ಲಿದೆ.
ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಸದ್ಯ ವೆಂಟಿಲೇಟರ್‌ನಲ್ಲಿರುವ ವಾವಾ ಸುರೇಶ್ ಅವರಿಗೆ ಆರು ಮಂದಿ ಪರಿಣಿತರ ತಂಡ ಚಿಕಿತ್ಸೆ ನೀಡುತ್ತಿದೆ. ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಟ್ಟು ಕಾಪಾಡುವುದರಲ್ಲಿ ಖ್ಯಾತರಾಗಿದ್ದ ನಲವತ್ತೇಳು ವರ್ಷದ ಸುರೇಶ್, ಕೊಟ್ಟಾಯಂ ಜಿಲ್ಲೆಯ ಚಂಗನಾಶ್ಶೇರಿ ಸಮೀಪದ ಕುರಿಚಿ ಎಂಬ ಹಳ್ಳಿಯ ಮನೆಯೊಂದರಲ್ಲಿ ನಾಗರಹಾವು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಹಾವು ಕಚ್ಚಿದೆ.
ಸಳೀಯ ನಿವಾಸಿಯೊಬ್ಬರು ಸೆರೆಹಿಡಿದ ಘಟನೆಯ ವಿಡಿಯೋದಲ್ಲಿ ಸುರೇಶ್ ಅವರು ನಾಗರಹಾವನ್ನು ಗೋಣಿ ಚೀಲದೊಳಗೆ ಹಾಕಲು ಅದರ ಬಾಲವನ್ನು ಕೈಯಲ್ಲಿ ಹಿಡಿದು ತಲೆಕೆಳಗಾಗಿ ಹಿಡಿದಿದ್ದರು. ಆಗ ಹಾವು ಅವರ ಬಲ ತೊಡೆಯ ಮೇಲೆ ಕಚ್ಚಿದೆ. ಮಾಧ್ಯಮ ವರದಿಗಳ ಪ್ರಕಾರ ಸುರೇಶ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಅವರು ಪ್ರಜ್ಞಾಹೀನರಾಗಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದರು.
ರಕ್ಷಣೆಯ ವೇಳೆ ವ್ಯಕ್ತಿಗೆ ಕಚ್ಚಿದ ನಾಗರಹಾವು!: ಬೆಚ್ಚಿಬೀಳಿಸುವಂತಿದೆ ಈ ಆಘಾತಕಾರಿ ದೃಶ್ಯ
ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ದಿ ಹಿಂದೂ ವರದಿ ಮಾಡಿದೆ. ನಾಗರ ಹಾವು ಕಚ್ಚಿದ ತಕ್ಷಣ ಸುರೇಶ್ ಹಾವನ್ನು ಕೈಯಿಂದ ಬಿಟ್ಟಿದ್ದು, ಅಲ್ಲಿ ಸೇರಿದ ಜನರು ಭಯದಿಂದ ಕಿರುಚಿ ಚದುರುವುದು ವಿಡಿಯೋದಲ್ಲಿದೆ.
Read more
[wpas_products keywords=”deal of the day sale today offer all”]