Karnataka news paper

ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕನ್ಹಯ್ಯಾ ಕುಮಾರ್‌ ಮೇಲೆ ಮಸಿ ದಾಳಿ


ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣಾ ರಂಗು ದಿನೇ ದಿನೆ ಕಾವೇರುತ್ತಿದ್ದು, ಈ ಮಧ್ಯೆ ಕಾಂಗ್ರೆಸ್‌ ಯುವ ನಾಯಕ ಮುಖಂಡ ಕನ್ಹಯ್ಯಾ ಕುಮಾರ್‌ ಮೇಲೆ ಮಸಿಯಿಂದ ದಾಳಿ ನಡೆಸಲಾಗಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಲಖನೌಗೆ ಬಂದಿದ್ದರು. ಕಾಂಗ್ರೆಸ್‌ ಪಕ್ಷದ ಮನೆ ಬಾಗಿಲಿಗೆ ತೆರಳುವ ಅಭಿಯಾನದಲ್ಲಿ ಭಾಗಿಯಾಗಿದ್ದ ಕನ್ಹಯ್ಯಾ , ಪಕ್ಷದ ಕಚೇರಿಯ ಹೊರಗಡೆ ನಿಂತಿದ್ದಾಗ ಅವರ ಮೇಲೆ ಮಸಿಯನ್ನು ಎರಚಲಾಗಿದೆ. ಸ್ವಲ್ಪದರಲ್ಲೇ ಪಾರಾದ ಕನ್ಹಯ್ಯಾ ಅವರು, ಕೂಡಲೇ ಕಚೇರಿ ಒಳಗೆ ದೌಡಾಯಿಸಿದರು. ಕೂಡಲೇ ಎಚ್ಚೆತ್ತ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮಸಿ ಎಸೆದ ಕಿಡಿಗೇಡಿ ದೇವಾಂಶ್‌ ಬಾಜ್‌ಪೇಯಿ ಎಂಬಾತನನ್ನು ಹಿಡಿದು ಥಳಿಸಿದ್ದಾರೆ. ಆದರೆ ಆತ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಬಳಿಕ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕಿಡಿಗೇಡಿ ದೇವಾಂಶ್‌ ಬಾಜ್‌ಪೇಯಿನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಮುಸ್ಲಿಮರ ಬೆಂಬಲ..! ಕೇಸರಿಗೆ ಜೈ ಎಂದ ಎಸ್ಪಿ, ಬಿಎಸ್ಪಿಯ ಹಲವು ಮುಖಂಡರು..!
ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಯುವ ಸಂಸತ್‌ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಲು ಕನ್ಹಯ್ಯಾ ಕುಮಾರ್ ಸಿದ್ಧತೆ ನಡೆಸುತ್ತಿದ್ದಾಗಲೇ ಈ ಘಟನೆ ಜರುಗಿದೆ. ಘಟನೆಯನ್ನು ಕಾಂಗ್ರೆಸ್‌ ಮುಖಂಡರು ಖಂಡಿಸಿದ್ದರು, ‘ಕನ್ಹಯ್ಯಾ ಕುಮಾರ್ ಅವರ ಮೇಲೆ ಎಸೆದದ್ದು ಮಸಿ ಅಲ್ಲ, ಅದು ಒಂದು ರೀತಿಯ ಆಸಿಡ್. ಆರೋಪಿಗಳು ಕನ್ಹಯ್ಯಾ ಕುಮಾರ್ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. ಆದರೆ, ಕೆಲವು ಹನಿಗಳು ಸಮೀಪದಲ್ಲಿ ನಿಂತಿದ್ದ 3-4 ಯುವಕರ ಮೇಲೆ ಬಿದ್ದಿದೆ’ ಎಂದು ಹೇಳಿದ್ದಾರೆ.

ಮಸಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯಾ ಕುಮಾರ್, ‘ಹತ್ರಾಸ್, ಉನ್ನಾವ್ ಮತ್ತು ಲಖೀಂಪುರ ಖೇರಿ ಘಟನೆ ನಡೆದಾಗಿನಿಂದ ಕಾಂಗ್ರೆಸ್ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದೆ. ದೇಶವನ್ನು ಕಟ್ಟದವರು ದೇಶವನ್ನು ಮಾರುತ್ತಿದ್ದಾರೆ, ಕಾಂಗ್ರೆಸ್ ಭಾರತವನ್ನು ನಿರ್ಮಿಸಿದೆ, ಆದ್ದರಿಂದ ದೇಶವನ್ನು ಮಾರುತ್ತಿರುವವರಿಂದ ದೇಶವನ್ನು ಉಳಿಸುತ್ತಿದೆ’ ಎಂದು ಹೇಳಿದ್ದಾರೆ.

2018ರಲ್ಲಿ ‘ಸಂವಿಧಾನ ಬಚಾವೋ’ ಪ್ರತಿಭಟನೆಯ ಭಾಗವಾಗಿ ಗ್ವಾಲಿಯರ್‌ನ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರ ಮೇಲೂ ಗ್ವಾಲಿಯರ್‌ನಲ್ಲಿ ಮಸಿ ಬಳಿಯುವ ಯತ್ನ ನಡೆದಿತ್ತು.



Read more

[wpas_products keywords=”deal of the day sale today offer all”]