Karnataka news paper

ಇಂದಿನಿಂದ ಓಲಾ S1 ಮತ್ತು ಓಲಾ S1 ಪ್ರೊ ಇವಿ ಸ್ಕೂಟರ್ ವಿತರಣೆ ಪ್ರಾರಂಭ!


|

ಓಲಾ ಕಂಪನಿಯ ಬಹುನಿರೀಕ್ಷಿತ ಓಲಾ S1 ಮತ್ತು ಓಲಾ S1 ಪ್ರೊ ಇವಿ ಸ್ಕೂಟರ್‌ ಇಂದಿನಿಂದ ವಿತರಣೆ ಪ್ರಾರಂಭ ಆಗಲಿದೆ. ಓಲಾ ಕಂಪನಿಯ ಈ ಎರಡು ಮಾಡೆಲ್ ಸ್ಕೂಟರ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿವೆ. ಚಿಪ್ ಕೊರತೆಯಿಂದಾಗಿ ಕಂಪನಿಯು ವಿತರಣಾ ದಿನಾಂಕಗಳನ್ನು ಸುಮಾರು ಎರಡು ತಿಂಗಳು ವಿಳಂಬ ಆಗಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.

ಇಂದಿನಿಂದ ಓಲಾ S1 ಮತ್ತು ಓಲಾ S1 ಪ್ರೊ ಇವಿ ಸ್ಕೂಟರ್ ವಿತರಣೆ ಪ್ರಾರಂಭ!

ಭವಿಶ್ ಅಗರ್ವಾಲ್ ತಮ್ಮ ಟ್ವೀಟ್‌ನಲ್ಲಿ ಅವರು, ‘ಸ್ಕೂಟರ್‌ಗಳು ಸಿದ್ಧವಾಗುತ್ತಿವೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಮತ್ತು ಡಿಸೆಂಬರ್ 15 ರಿಂದ ವಿತರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು!’ ಎಂದು ತಿಳಿಸಿದ್ದರು. ಹಾಗೆಯೇ ಈಗ ಸ್ಕೂಟರ್‌ಗಳನ್ನು ರವಾನಿಸಲಾಗುತ್ತಿದೆ ಎಂದು ಸೋಮವಾರ ಅವರು ಖಚಿತಪಡಿಸಿದರು.

ಓಲಾ ಸಂಸ್ಥೆಯು ಸೆಪ್ಟೆಂಬರ್ ತಿಂಗಳಲ್ಲಿ ಓಲಾ S1 ಮತ್ತು ಓಲಾ S1 ಪ್ರೊ ಸ್ಕೂಟರ್‌ಗಳ ಬುಕಿಂಗ್ ಅನ್ನು ಪ್ರಾರಂಭಿಸಿತು. ಮುಂಗಡ ಬುಕಿಂಗ್ ಮೊತ್ತ 499 ರೂ. ನೀಡಿತ್ತು. ಕಂಪನಿಯು ಅಕ್ಟೋಬರ್‌ನಲ್ಲಿ ವಿತರಣೆಯನ್ನು ಪ್ರಾರಂಭಿಸಲು ಯೋಜಿಸಿತ್ತು. ನಂತರ ಅದನ್ನು ನವೆಂಬರ್‌ಗೆ ಮುಂದೂಡಲಾಯಿತು. ಈಗ ಓಲಾ ಅಂತಿಮವಾಗಿ ಡಿಸೆಂಬರ್ ತಿಂಗಳಿನಲ್ಲಿ ವಿತರಣೆಯನ್ನು ಪ್ರಾರಂಭಿಸಲಿದೆ.

ಓಲಾ ಎಲೆಕ್ಟ್ರಿಕ್‌ನ ಓಲಾ S1 ಪ್ರೊ ಪವರ್‌ಟ್ರೇನ್ ಅನ್ನು ಪಡೆಯುತ್ತದೆ. ಅದು 8.4 kW ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಮತ್ತು 181 km ನ ARAI ಪ್ರಮಾಣೀಕೃತ ಶ್ರೇಣಿಯನ್ನು ಉತ್ಪಾದಿಸುತ್ತದೆ. S1 ಪ್ರೊ ಸ್ಕೋಟರ್, ಹೈಪರ್ ಮೋಡ್‌ನಲ್ಲಿ, 3 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು. ಓಲಾ S1 ARAI ಪ್ರಮಾಣೀಕೃತ ಶ್ರೇಣಿಯೊಂದಿಗೆ 121 km ಮತ್ತು 90kmph ವೇಗವನ್ನು ಹೊಂದಿದೆ. ಓಲಾ S1 3.6 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

Ola S1, S1 Pro Electric Scooter Deliveries to start Today: Details.

Story first published: Wednesday, December 15, 2021, 9:29 [IST]



Read more…