News
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಹು ನಿರೀಕ್ಷಿತ ಐಪಿಒ ಶೀಘ್ರದಲ್ಲೇ ಆರಂಭ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿ ಅತೀ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿಯ ಐಪಿಒ ಶೀಘ್ರದಲ್ಲೇ ನಡೆಯಲಿದೆ ಎಂದು ಈ ಹಿಂದೆ ವರದಿ ಆಗಿತ್ತು.
“ತಮ್ಮ ಸರ್ಕಾರವು ಹೊಸ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಇ) ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಏರ್ ಇಂಡಿಯಾದ ಮಾಲೀಕತ್ವ ವರ್ಗಾವಣೆ ಪೂರ್ಣ ಮಾಡಲಾಗಿದೆ. ಹಣಕಾಸು ವರ್ಷ 2022 ರಲ್ಲಿ ವಿತರಣಾ ಗುರಿಗಳನ್ನು ಸಾಧಿಸಲು ಎಲ್‌ಐಸಿ ಐಪಿಒ ನಿರ್ಣಾಯಕವಾಗಿದೆ,” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್‌ಐಸಿ ಐಪಿಒ: ವಿಮಾ ಸಂಸ್ಥೆಯ ಸ್ವತ್ತು ಮೌಲ್ಯ 463 ಬಿಲಿಯನ್ ಡಾಲರ್
ಡಿಪಾರ್ಟ್‌ಮೆಂಟ್ ಆಫ್ ಇನ್ವೆಸ್ಟ್‌ಮೆಂಟ್ ಮತ್ತು ಪಬ್ಲಿಕ್ ಅಸೆಟ್ ಮ್ಯಾನೇಜ್‌ಮೆಂಟ್ (ಡಿಐಪಿಎಎಂ) ಪ್ರಕಾರ, ಸರ್ಕಾರವು ಇದುವರೆಗೆ ತನ್ನ ಮಾಲೀಕತ್ವವನ್ನು ಹಿಂಪಡೆಯುವ ಮೂಲಕ 9,329.9 ಕೋಟಿ ಹಾಗೂ ಡಿವಿಡೆಂಡ್ ಮೂಲಕ 35,116.72 ಕೋಟಿ ರೂಪಾಯಿ ಹಣವನ್ನು ಪಡೆದಿದೆ.

ಸರ್ಕಾರಿ ಸ್ವಾಮ್ಯದ ವಿಮಾದಾರರ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಸುಲಭಗೊಳಿಸಲು ಸಹಾಯ ಮಾಡಲು ಎಲ್‌ಐಸಿಯಲ್ಲಿ ವಿದೇಶಿ ಹೂಡಿಕೆಯನ್ನು ಅನುಮತಿಸುವ ಪ್ರಸ್ತಾಪವನ್ನು ಸರ್ಕಾರವು ಸಂಸತ್ತಿನಲ್ಲಿ ಈ ಬಜೆಟ್ ಅಧಿವೇಶನದಲ್ಲಿ ಇಡುವ ಸಾಧ್ಯತೆ ಇದೆ. ಭಾರತವು ವಿಮಾ ವಲಯದಲ್ಲಿ 74 ಪ್ರತಿಶತದವರೆಗೆ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಅನುಮತಿಸುತ್ತದೆ. ಆದರೆ ಇದು ಎಲ್‌ಐಸಿ ಕಾಯಿದೆಯಿಂದ ನಿಯಂತ್ರಿಸಲ್ಪಡುವ ಎಲ್‌ಐಸಿಗೆ ಅನ್ವಯಿಸುವುದಿಲ್ಲ.
ಎಲ್‌ಐಸಿ ಸ್ವತ್ತು ಮೌಲ್ಯ 463 ಬಿಲಿಯನ್ ಡಾಲರ್
ದೇಶದಲ್ಲಿ ಅತೀ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿಯ ಸ್ವತ್ತುಗಳ ಮೌಲ್ಯವು ಸುಮಾರು 463 ಬಿಲಿಯನ್ ಡಾಲರ್ ಆಗಿದೆ ಎಂದು ಕಳೆದ ತಿಂಗಳು ವರದಿಯು ಉಲ್ಲೇಖ ಮಾಡಿದೆ. ಈ ಮೌಲ್ಯವು ಹಲವು ರಾಷ್ಟ್ರಗಳು ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಗಿಂತ ಅಧಿಕವಾಗಿದೆ. ಪಾಕಿಸ್ತಾನದ ಜಿಡಿಪಿಗಿಂತ ಭಾರತದ ವಿಮಾ ಸಂಸ್ಥೆ ಎಲ್‌ಐಸಿಯ ಸ್ವತ್ತು ಇದೆ ಎಂದು ವರದಿ ಹೇಳಿದೆ.
ಶೀಘ್ರದಲ್ಲಿ ಬರಲಿರುವ 8 ‘ಐಪಿಒ’ ಸೇವೆಗಳ ಪೂರ್ಣ ಮಾಹಿತಿ
ಮಾಧ್ಯಮಗಳ ವರದಿಗಳ ಪ್ರಕಾರ, ಗ್ರಾಸ್ ರಿಟನ್ ಪ್ರಿಮೀಯಂ (ಜಿಡಬ್ಲ್ಯೂಪಿ) ನಲ್ಲಿ ಎಲ್‌ಐಸಿ ವಿಶ್ವದ ಐದನೇ ಸ್ಥಾನದಲ್ಲಿ ಇದೆ. ಇನ್ನು ಒಟ್ಟು ಸ್ವತ್ತುಗಳ ಪ್ರಕಾರ ಸಂಸ್ಥೆಯು ಜಾಗತಿಕವಾಗಿ ಹತ್ತನೇ ರ್‍ಯಾಂಕ್‌ನಲ್ಲಿ ಇದೆ. ಇನ್ನು ಎರಡನೇ ಸ್ಥಾನದಲ್ಲಿ ಇರುವ ಎಸ್‌ಬಿಐ ಲೈಫ್‌ಗಿಂತ ಎಲ್‌ಐಸಿಯ ಸ್ವತ್ತಿನ ಮೌಲ್ಯವು ಸುಮಾರು 16.3 ಪಟ್ಟು ಅಧಿಕವಾಗಿದೆ. ಎಲ್‌ಐಸಿಯು ಭಾರತದಲ್ಲಿ ಅತೀ ದೊಡ್ಡ ಸ್ವತ್ತು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಾಗಿದ್ದು, ಇದರ ಒಟ್ಟು ಮೌಲ್ಯ 36.7 ಟ್ರಿಲಿಯನ್ ಆಗಿದೆ. ಭಾರತದ ಹಣಕಾಸು ವರ್ಷದ 21ರ ಜಿಡಿಪಿಯ ಶೇಕಡ 18ಕ್ಕೆ ಎಲ್‌ಐಸಿಯ ಸ್ವತ್ತು ಮೌಲ್ಯ ಸಮವಾಗಿದೆ.
English summary
Budget 2022: LIC IPO Expected Shortly Says FM Nirmala Sitharaman
Budget 2022: LIC IPO expected shortly says Finance Minister Nirmala Sitharaman.
Story first published: Tuesday, February 1, 2022, 13:25 [IST]
Read more…
[wpas_products keywords=”deal of the day”]