PTI
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನೈಟ್ ಕರ್ಫ್ಯೂ ತೆರವುಗೊಂಡಿದ್ದು, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ 2021-22ನೇ ಸಾಲಿನ ಉಳಿದ ರೇಸ್‌ಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ.
ಕೋವಿಡ್-19 ಮಾರ್ಗಸೂಚಿಗಳ ಕಾರಣದಿಂದಾಗಿ ಕಂಬಳವನ್ನು ಕಳೆದ ತಿಂಗಳು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೊರೋನಾ ಕರ್ಫ್ಯೂ ತೆರವುಗೊಂಡ ಹಿನ್ನೆಲೆಯಲ್ಲಿ ಕಂಬಳದ ಕಹಳೆ ಮತ್ತೆ ಮೊಳಗಲಿದೆ.
ಇದನ್ನು ಓದಿ: ಕಂಬಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋಣ ಓಡಿಸಲಿದ್ದಾರೆ ಐವರು ಹೆಣ್ಣು ಮಕ್ಕಳು!
ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸೋಮವಾರ ಸಭೆ ನಡೆಸಿ ಕಂಬಳದ ಪರಿಷ್ಕೃತ ದಿನಾಂಕಗಳನ್ನು ನಿಗದಿಪಡಿಸಿದೆ ಎಂದು ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಅವರು ತಿಳಿಸಿದ್ದಾರೆ.
ಕಳೆದ ಡಿ.5ರಂದು ಕಂಬಳ ಸೀಸನ್ ಆರಂಭವಾಗಿದ್ದು, ಡಿಸೆಂಬರ್ 18 ರಂದು ಕಂಬಳ ನಡೆಸಲು ಸಮಿತಿ ದಿನಾಂಕ ಪ್ರಕಟಿಸಿತ್ತು. ಹೊಕ್ಕಾಡಿಗೋಳಿ, ಮೂಡುಬಿದಿರೆ, ಮಿಯ್ಯರ್, ಕಕ್ಕೆಪದವು, ಮುಲ್ಕಿಯಲ್ಲಿ ಕಂಬಳ ಈಗಾಗಲೇ ನಡೆದಿದೆ.
ಉಳಿದ ಕಂಬಳಗಳು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಫೆಬ್ರವರಿ 5ರಿಂದ ಬಾರಾಡಿ ಬೀಡುವಿನಲ್ಲಿ ಆರಂಭವಾಗಲಿದ್ದು, ಏಪ್ರಿಲ್ 16ರಂದು ವೇಣೂರು ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಹೆಗ್ಡೆ ಅವರು ತಿಳಿಸಿದ್ದಾರೆ.
Read more
[wpas_products keywords=”deal of the day”]