The New Indian Express
ಅರ್ಚನಾ ಕೊಟ್ಟಿಗೆ, ಈ ನಟಿಯನ್ನು ನಾವು ಬೆಳ್ಳಿತೆರೆ ಮೇಲೆ ಸಾಕಷ್ಟು ನೋಡಿಲ್ಲ, ಆದರೆ ಅವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.
ಅರ್ಚನಾ ಕೊಟ್ಟಿಗೆ ನಟಿಸಿರುವ ಸುಮಾರು 17 ರಿಂದ 18 ಸಿನಿಮಾಗಳು ವಿವಿಧ ಹಂತದಲ್ಲಿವೆ. ಸದ್ಯ ಅರ್ಚನಾ ಕೊಟ್ಟಿಗೆ ಸುಜಯ್ ಶಾಸ್ತ್ರಿ ಎರಡನೇ ನಿರ್ದೇಶನದ ಸನಿಮಾಗೆ ಸಹಿ ಮಾಡಿದ್ದಾರೆ.
ಎಲ್ರ ಕಾಲ್ ಎಳೀತದೆ ಕಾಲ ಎಂಬ ಟೈಟಲ್ ನ ಸಿನಿಮಾದಲ್ಲಿರ್ಯಾಪರ್ ಮತ್ತು ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದು ಚಂದನ್ ಶೆಟ್ಟಿ ನಟನೆಯ ಚೊಚ್ಚಲ ಸಿನಿಮಾವಾಗಿದೆ. ಇದು 80 ಮತ್ತು 90 ದಶಕದ ಕಥೆ ಇದಾಗಿದೆ. ಫೆಬ್ರವರಿ 3 ರಂದು ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: ‘ಶುಗರ್ ಫ್ಯಾಕ್ಟರಿ’ ಟೈಟಲ್ ಸಾಂಗ್ ಗೆ ಚಂದನ್ ಶೆಟ್ಟಿ ಗಾಯನ: ಮೂವರು ನಾಯಕಿಯರೊಂದಿಗೆ ಡಾರ್ಲಿಂಗ್ ಕೃಷ್ಣ ‘ಗಾನ ಬಜಾನ’
ಎಲ್ರ ಕಾಳಲೆಯತ್ತೆ ಕಾಲ ಚಿತ್ರದಲ್ಲಿ ಪ್ರವೀಣ್ ಮತ್ತು ಪ್ರದೀಪ್ ಅವರ ಸಹೋದರ ಜೋಡಿ ಸಂಗೀತ ಸಂಯೋಜಕರಾಗಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಸುಜಯ್, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ರ ಕಾಲೆಳೆಯತ್ತೆ ಕಾಲ ಸಿನಮಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ವಿಜೇತ ಮಂಜು ಪಾವಗಡ, ಹಿರಿಯ ನಟ ಮಂಡ್ಯ ರಮೇಶ್ ಸಹ ಮಹತ್ವದ ಪಾತ್ರಗಳಲ್ಲಿ ನಟಿಸಲಿದ್ದಾರೆ.
Read more…
[wpas_products keywords=”party wear dress for women stylish indian”]