Karnataka news paper

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕಾವೇರಿ ನೀರು: ಸಂಸದ ಡಿ.ಕೆ.ಸುರೇಶ್


ಬೆಂಗಳೂರು: ‘‌ಸಿದ್ದರಾಮಯ್ಯ ಕಾಂಗ್ರೆಸ್‌ ಅವಧಿಯಲ್ಲಿ ಜಿಗಣಿಯನ್ನು ಪುರಸಭೆಯನ್ನಾಗಿ ಮಾಡಿದರು. ಕಾವೇರಿ ನೀರು ಕೊಡಲೂ ಯೋಜನೆ ರೂಪಿಸಲಾಗಿತ್ತು. ಸರ್ಕಾರ ಬದಲಾದ ಬಳಿಕ ಯೋಜನೆ ಕೈಬಿಡಲಾಗಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಕಾವೇರಿ ನೀರು ಪೂರೈಸಿಯೇ ತೀರುತ್ತೇವೆ’ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಜಿಗಣಿ ಪುರಸಭೆ ಚುನಾವಣೆ ಅಂಗವಾಗಿ ಬಂಡೇನಲ್ಲಸಂದ್ರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ‘ಜಿಗಣಿ ಕೆರೆ ಅಭಿವೃದ್ದಿಗಾಗಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ₹3 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆರೆ ಅಭಿವೃದ್ದಿ ಆಗಲೇ ಇಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಜಿಗಣಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳಾಗಿಲ್ಲ. ಬಿಡುಗಡೆಯಾದಹಣ ಏನಾಯಿತು’ ಎಂದು ಪ್ರಶ್ನಿಸಿದರು.



Read more from source