Karnataka news paper

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ‘ಗಾಳಿಪಟ 2’; ಭಾರಿ ಮೊತ್ತಕ್ಕೆ ಡಿಜಿಟಲ್‌ ಹಕ್ಕುಗಳು ಸೇಲ್‌!


‘ಗೋಲ್ಡನ್ ಸ್ಟಾರ್’ ಗಣೇಶ್‌-ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಈಗಾಗಲೇ ‘ಮುಂಗಾರು ಮಳೆ’, ‘ಗಾಳಿಪಟ’, ‘ಮುಗುಳು ನಗೆ’ ಸಿನಿಮಾಗಳು ತೆರೆಕಂಡಿವೆ. ಇದೀಗ ಗಣೇಶ್ ಮತ್ತು ಯೋಗರಾಜ್ ಭಟ್ ‘ಗಾಳಿಪಟ 2‘ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಬಾರಿ ಗಣೇಶ್‌ ಅವರೊಂದಿಗೆ ದಿಗಂತ್, ಪವನ್‌ ಕುಮಾರ್ ಕೂಡ ಜೊತೆಯಾಗಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ರಿಲೀಸ್‌ಗೆ ಸಿದ್ಧಗೊಳ್ಳುತ್ತಿದೆ. ಈ ಮಧ್ಯೆ ಬಿಡುಗಡೆಗೂ ಮುನ್ನವೇ ಒಂದು ದಾಖಲೆ ‘ಗಾಳಿಪಟ 2’ ಚಿತ್ರಕ್ಕೆ ಸೇರಿಕೊಂಡಿದೆ. ಏನದು? ಮುಂದೆ ಓದಿ.

ದಾಖಲೆ ಬೆಲೆಗೆ ಡಿಜಿಟಲ್ ಹಕ್ಕುಗಳು ಮಾರಾಟ
‘ಗಾಳಿಪಟ 2’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಚಿತ್ರದ ಓಟಿಟಿ ಹಕ್ಕುಗಳು ಜೀ5 ಪಾಲಾಗಿವೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಇದೆಲ್ಲದಿರಂದ ನಿರ್ಮಾಪಕರಿಗೆ ಸಿಕ್ಕಿರುವ ಮೊತ್ತವೆಷ್ಟು ಗೊತ್ತಾ? ಬರೋಬ್ಬರಿ 8 ಕೋಟಿ ರೂ. ಹಾಗಾಗಿ, ಬಿಡುಗಡೆಗೂ ಮುನ್ನವೇ ನಿರ್ಮಾಪಕ ರಮೇಶ್‌ ರೆಡ್ಡಿ ಖುಷಿಯಾಗಿದ್ದಾರೆ.

ಕನ್ನಡ ಮೇಷ್ಟ್ರಾಗಿ ಅನಂತ್ ನಾಗ್
ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಕುದುರೆಮುಖದಲ್ಲಿ ಈ ಸಿನಿಮಾದ ಪ್ರಮುಖ ಸೀನ್‌ಗಳ ಚಿತ್ರೀಕರಣ ಮಾಡಲಾಗಿದೆ. ಮೂರು ಜನ ನಾಯಕರ ಇಂಟ್ರಡಕ್ಷನ್‌ ಹಾಡಿನ ಚಿತ್ರೀಕರಣ, ವಿದೇಶಕ್ಕೆ ಹೊರಡುವ ದೃಶ್ಯಗಳು, ಅನಂತ್‌ನಾಗ್‌ ಅವರ ಕಾಂಬಿನೇಷನ್‌ ಸೀನ್‌ಗಳನ್ನು ಅಲ್ಲಿಯೇ ಶೂಟಿಂಗ್‌ ಮಾಡಲಾಗಿದೆ. ‘ಕುದುರೆಮುಖದಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಹಲವು ದೃಶ್ಯಗಳನ್ನು ಸೆರೆಹಿಡಿದಿದ್ದೇವೆ. ನೋಡುವವರ ಕಣ್ಣಿಗೆ ಇದು ಹಬ್ಬದ ರೀತಿ ಫೀಲ್‌ ಆಗುತ್ತದೆ. ಅನಂತನಾಗ್‌ ಮತ್ತು ಮೂರು ಜನ ನಾಯಕರ ನಡುವಿನ ದೃಶ್ಯಗಳು ಸಿನಿಮಾದಲ್ಲಿ ಬಹಳ ಮುಖ್ಯವಾಗುತ್ತವೆ’ ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್.

ಗಣೇಶ್ ‘ಗೋಲ್ಡನ್ ಗ್ಯಾಂಗ್‌’ ಶೋನಲ್ಲಿ ‘ಮುಂಗಾರು ಮಳೆ’ ಟೀಮ್; ಏನೆಲ್ಲ ಚರ್ಚೆ ಆಯ್ತು?

ಹಾಗೆಯೇ, ಈ ಸಿನಿಮಾದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನ ಭಾಗದ ಚಿತ್ರೀಕರಣ ಬೆಂಗಳೂರು, ಕಝಕಿಸ್ಥಾನದಲ್ಲಿ ಮಾಡಲಾಗಿದೆಯಂತೆ. ‘ಗಾಳಿಪಟ 2’ ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ಅನಂತ್ ನಾಗ್ ಜೊತೆಗೆ ಸಂಯುಕ್ತಾ ಮೆನನ್‌, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಆಗಲಿದೆ.

‘ಗೋಲ್ಡನ್‌ ಗ್ಯಾಂಗ್’ ಜೊತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‘ಗೋಲ್ಡನ್ ಸ್ಟಾರ್’ ಗಣೇಶ್‌; ಯಾವಾಗ ಪ್ರಸಾರ?



Read more

[wpas_products keywords=”deal of the day party wear dress for women stylish indian”]