Karnataka news paper

ನಗ್ನ ಫೋಟೋ ಹರಿಬಿಟ್ಟು ಅಮೆರಿಕಗೆ ತೆರಳಿದ ಬೆಂಗಳೂರಿನ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಕಾರ


ಬೆಂಗಳೂರು : ಹಣಕಾಸು ವಿಚಾರದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ಆತನ ನಗ್ನ ಪೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಬಳಿಕ ಅಮೆರಿಕಗೆ ಪ್ರಯಾಣ ಬೆಳೆಸಿರುವ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ನಗರದ ಎನ್‌ಆರ್‌ಐ ಲೇಔಟ್‌ನ 2ನೇ ಹಂತದ ಎನ್‌.ಮಂಜುನಾಥ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯಪೀಠ ತಿರಸ್ಕರಿಸಿದೆ.

”ಹಣಕಾಸು ವಿಚಾರದಲ್ಲಿ ದೂರುದಾರೆಯ ಪತಿಯನ್ನು ಅಪಹರಿಸಿ, ಆತನ ನಗ್ನ ಪೋಟೋಗಳನ್ನು ಮೊಬೈಲ್‌ನಲ್ಲಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ ಆರೋಪ ಅರ್ಜಿದಾರನ ಮೇಲಿದೆ. ಆರೋಪಿಯು ಘಟನೆ ನಡೆದ ನಂತರ ವಿದೇಶಕ್ಕೆ ತೆರಳಿದ್ದಾನೆ. ಹಾಗಾಗಿ, ನಿರೀಕ್ಷಣಾ ಜಾಮೀನಿಗೆ ಆತ ಅರ್ಹವಲ್ಲ” ಎಂದು ಹೈಕೋರ್ಟ್‌ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ನಗ್ನ ಫೋಟೋ ಕಳಿಸುವಂತೆ ಮಹಿಳೆಗೆ ಬ್ಲ್ಯಾಕ್‌ಮೇಲ್; ಮೂಡಬಿದ್ರೆಯ ವಿಜಯ್‌ ಗೌಡ ಬಂಧನ

‘ಎರಡು ಲಕ್ಷ ರೂ. ಲೇವಾದೇವಿ ವಿಚಾರವಾಗಿ ನನ್ನ ಪತಿಯನ್ನು ಅಪಹರಿಸಿ ಹಲ್ಲೆ ಮಾಡಲಾಗಿದೆ. ಪತಿಯ ನಗ್ನ ಪೋಟೋಗಳನ್ನು ಮೊಬೈಲ್‌ನಲ್ಲಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ, ಎಂದು ಟಿ.ಸಿ. ಪಾಳ್ಯದ ಸುಜಾತ ಎಂಬುವವರು ಕೆ.ಆರ್‌.ಪುರ ಠಾಣಾ ಪೊಲೀಸರಿಗೆ 2021ರ ನ.13ರಂದು ದೂರು ಸಲ್ಲಿಸಿದ್ದರು.

ಆ ದೂರಿನ ಆಧಾರದ ಮೇಲೆ ಅರ್ಜಿದಾರ ಎನ್‌. ಮಂಜುನಾಥ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದರು. ತನಿಖೆ ಪ್ರಗತಿಯಲ್ಲಿದ್ದು, ಬಂಧನ ಭೀತಿಯಿಂದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ.



Read more

[wpas_products keywords=”deal of the day sale today offer all”]