Karnataka news paper

ಹೊತ್ತಿ ಉರಿದ ಬಿಎಂಟಿಸಿ ಬಸ್‌; ಚಾಲಕನ ಸಮಯಪ್ರಜ್ಞೆಯಿಂದ 35 ಪ್ರಯಾಣಿಕರು ಪಾರು


ಬೆಂಗಳೂರು: ಇತ್ತೀಚೆಗೆ ಮಕ್ಕಳ ಕೂಟ ಉದ್ಯಾನದ ಬಳಿ ಬಿಎಂಟಿಸಿ ಬಸ್‌ ಅಗ್ನಿಗಾಹುತಿಯಾಗಿರುವ ಘಟನೆ ಮಾಸುವ ಮುನ್ನವೇ ಜಯನಗರದ ಸೌತ್‌ ಎಂಡ್‌ ವೃತ್ತದ ನಂದಾ ಟಾಕೀಸ್‌ ಬಳಿ ಮೆಟ್ರೊ ರೈಲು ನಿಲ್ದಾಣದ ಪಕ್ಕದಲ್ಲಿ ಮಂಗಳವಾರ ಮತ್ತೊಂದು ಬಿಎಂಟಿಸಿ ಬಸ್‌ ಧಗಧಗಿಸಿದೆ. ಅದೃಷ್ಟವಶಾತ್‌ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಬೆಂಗಳೂರು ಮೆಜೆಸ್ಟಿಕ್‌ನಿಂದ ಹೊರಟ ಬಿಎಂಟಿಸಿ ಬಸ್‌ ಸೌತ್‌ ಎಂಡ್‌ ವೃತ್ತದ ಮಾರ್ಗವಾಗಿ ಬನಶಂಕರಿ ಬಸ್‌ ನಿಲ್ದಾಣ ತಲುಪಬೇಕಾಗಿತ್ತು. ಆದರೆ, ಸೌತ್‌ ಎಂಡ್‌ ವೃತ್ತದ ಮೆಟ್ರೊ ನಿಲ್ದಾಣ ತಲುಪುತ್ತಿದ್ದಂತೆಯೇ ಬಸ್‌ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಬಸ್‌ನಲ್ಲಿದ್ದ 25 ಪ್ರಯಾಣಿಕರನ್ನು ಬಸ್‌ ಚಾಲಕ ಹಾಗೂ ನಿರ್ವಾಹಕ ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಗೆಗೆ ಇಡೀ ಬಸ್‌ ಸುಟ್ಟು ಕರಕಲಾಯಿತು.

ಬೆಂಗಳೂರು: ಧಗ ಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್‌, ಪ್ರಾಣಾಪಾಯದಿಂದ ಪಾರಾದ 40 ಪ್ರಯಾಣಿಕರು

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೂ, ಬಸ್‌ ಬಹುತೇಕ ಅಗ್ನಿಗಾಹುತಿಯಾಗಿದೆ. ಬಸ್‌ ಎಂಜಿನ್‌ ಓವರ್‌ ಹೀಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂಬಂಧ ಅಗ್ನಿ ಅವಘಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದರು.

ಇನ್ನು ಮಂಗಳವಾರ ಹೊತ್ತಿ ಉರಿದ ಬಿಎಂಟಿಸಿ ಬಸ್‌ ಅನ್ನು 2014ರಲ್ಲಿ ಖರೀದಿಸಲಾಗಿತ್ತು. ಕೇವಲ 8 ವರ್ಷಗಳಷ್ಟೇ ಆಗಿದೆ. ಆದರೂ, ಯಾವ ಕಾರಣಕ್ಕೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಎಂಜಿನಿಯರ್‌ಗಳು ಸಹ ಅಧ್ಯಯನ ನಡೆಸುತ್ತಿದ್ದಾರೆ ಎಂದು ಬಿಎಂಟಿಸಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಘಟನೆ

ಕಳೆದ ಜ.21ರಂದು ಚಾಮರಾಜಪೇಟೆಯ ಮಕ್ಕಳ ಕೂಟ ಉದ್ಯಾನದ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಪ್ರಯಾಣಿಕರು ಕೆಳಗಿಳಿದರು. ನಂತರ ಇಡೀ ಬಸ್‌ ಬೆಂಕಿಗಾಹುತಿಯಾಗಿತ್ತು.

ಬೈಕ್ ಬಿಡಿಸಿಕೊಳ್ಳಲು ಟೋಯಿಂಗ್ ವಾಹನದ ಹಿಂದೆ ಯುವಕನ ಓಟ : ಬೆಂಗಳೂರಿನಲ್ಲಿ ಮನಕಲಕುವ ಘಟನೆ

ಮೆಜೆಸ್ಟಿಕ್‌ನಿಂದ ಚಾಮರಾಜಪೇಟೆ ಕಡೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ 40 ಮಂದಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ನಂತರ ನೋಡ ನೋಡುತ್ತಿದ್ದಂತೆ ಬಸ್‌ ಧಗಧಗನೆ ಹೊತ್ತಿ ಉರಿದಿತ್ತು. ಪರಿಣಾಮ ಬಸ್‌ ಶೇ.70 ರಷ್ಟು ಸುಟ್ಟು ಹೋಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಅದೃಷ್ಟವಶಾತ್‌ ಸಾವು-ನೋವು ಸಂಭವಿಸಿರಲಿಲ್ಲ.



Read more

[wpas_products keywords=”deal of the day sale today offer all”]