Karnataka news paper

ಕೊರೊನಾ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಅರ್ಧಕ್ಕೇ ಶಾಲೆ ಬಿಡುವ ಮಕ್ಕಳ ಪ್ರಮಾಣ ಏರಿಕೆ


The New Indian Express

ನವದೆಹಲಿ: ದೇಶದ ಗ್ರಾಮೀಣ ಭಾಗದಲ್ಲಿ ಅರ್ಧಕ್ಕೇ ಶಾಲೆ ಬಿಡುವ ಮಕ್ಕಳ ಪ್ರಮಾಣ ಏರಿಕೆಯಾಗಿರುವುದು ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ.

ಇದನ್ನೂ ಓದಿ: ಹೆಚ್ಚಿದ ಕೊರೋನಾ ಸೋಂಕು: ದಕ್ಷಿಣ ಕನ್ನಡದಲ್ಲಿ 12 ಶಾಲೆಗಳು ಬಂದ್

6- 14 ವಯೋಮಾನದ ಮಕ್ಕಳ ಶಾಲಾ ದಾಖಲಾತಿ ಪ್ರಮಾಣವೂ ಶೇ.4.6 ರಷ್ಟು ಕುಸಿದಿರುವುದು ಗಮನಕ್ಕೆ ಬಂದಿದೆ. ಅರ್ಧಕ್ಕೇ ಶಾಲೆ ಬಿಡುವ ಮಕ್ಕಳಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚಾಗಿರುವುದು ಗಮನಾರ್ಹ ಸಂಗತಿ. ಡಿಜಿಟಲ್ ತರಗತಿಗಳಿಗೆ ಹಣ ಹೊಂದಿಸಲಾಗದೆ ಪಾಲಕರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಇಂದಿನಿಂದ ನೈಟ್ ಕರ್ಫ್ಯೂ ರದ್ದು, ನಿರ್ಬಂಧ ಸಡಿಲ: ನಗರದಲ್ಲಿ ಶಾಲಾ, ಕಾಲೇಜು ಪುನರಾರಂಭ

ಅಧ್ಯಯನದಿಂದ ತಿಳಿದುಬಂದ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಕೊರೊನಾ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. 

ಇದನ್ನೂ ಓದಿ: ಮೈಸೂರು: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಕಿಸ್ ಮಾಡಿದ ಮುಖ್ಯೋಪಾಧ್ಯಾಯ ವಜಾ

ಕಡಿಮೆ ಶುಲ್ಕದ ಖಾಸಗಿ ಶಾಲೆಗಳು ಬಂದ್ ಆಗಿರುವುದು, ಪಾಲಕರ ಆರ್ಥಿಕ ದುಸ್ಥಿತಿ, ಸರ್ಕಾರಿ ಶಾಲೆಗಳಲ್ಲಿನ ಉಚಿತ ಸವಲತ್ತುಗಳು ಈ ಬದಲಾವಣೆಗಳಿಗೆ ಕಾರಣ ಎನ್ನಲಾಗಿದೆ. Annual Status of Education Report ಈ ಅಧ್ಯಯನ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ವರ್ಷಾಂತ್ಯದ ವೇಳೆಗೆ 180 ಕೋಟಿ ರೂ. ವೆಚ್ಚದಲ್ಲಿ ರಾಯಣ್ಣ ಹೆಸರಿನಲ್ಲಿ ಮಿಲಿಟರಿ ಶಾಲೆ: ಬಸವರಾಜ ಬೊಮ್ಮಾಯಿ



Read more

[wpas_products keywords=”deal of the day”]