Karnataka news paper

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಲಂಚ ಕೇಳಿದ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ FIR!


ಬೆಂಗಳೂರು : ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ರೋಗಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಗೂ ರೋಗಿಯ ಪುತ್ರಿಗೆ ಜಾತಿ ನಿಂದನೆ ಮಾಡಿರುವ ಆರೋಪದಡಿ ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ವಿರುದ್ಧ ವಿವಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಬ್ಬಲಾಳದ ಭುವನೇಶ್ವರಿನಗರದ ಲಕ್ಷ್ಮಿ ಎಂಬುವವರು ನೀಡಿದ ದೂರಿನ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳಾದ ಆನಂದ್‌, ನಾಗೇಶ್‌, ಗಿರೀಶ್‌ ಹಾಗೂ ಭದ್ರತಾ ಸಿಬ್ಬಂದಿ ರಂಜಿತಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಧಿರೆ.

ಏನಿದು ಆರೋಪ?

ಲಕ್ಷ್ಮಿ, ಪಾಶ್ರ್ವವಾಯುವಿಗೆ ತುತ್ತಾಗಿದ್ದ ತಮ್ಮ ತಾಯಿ ಯಲ್ಲಮ್ಮ ಅವರನ್ನು ಜ.21ರಂದು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಈಗಾಗಲೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತಾಯಿಯ ಯೋಗಕ್ಷೇಮ ನೋಡಿಕೊಳ್ಳಲು ಪುತ್ರಿ ಲಕ್ಷ್ಮಿ ಆಸ್ಪತ್ರೆಯಲ್ಲಿದ್ದರು.

ಜ.28ರಂದು ಬೆಳಗ್ಗೆ 6.30ರ ಸಮಯದಲ್ಲಿ ಆಸ್ಪತ್ರೆಯ 5ನೇ ಮಹಡಿಯಲ್ಲಿರುವ ತೀವ್ರ ನಿಗಾ ಘಟಕ ಟಿಸಿಸಿ ಬಿಲ್ಡಿಂಗ್‌ಗೆ ನಾಗೇಶ್‌ ಹಾಗೂ ಗಿರೀಶ್‌ ಬಂದಿದ್ದರು. ಈ ವೇಳೆ ಲಕ್ಷ್ಮಿಯನ್ನು ಮಾತನಾಡಿಸಿ, ”ನಿಮ್ಮ ತಾಯಿಯನ್ನು ಗುಣಮುಖರನ್ನಾಗಿಸಲು 50 ಸಾವಿರ ರೂ. ನೀಡಬೇಕು” ಎಂದು ಕೇಳಿದ್ದಾರೆ. ಲಕ್ಷ್ಮಿ ಹಣ ಕೊಡುವುದಕ್ಕೆ ನಿರಾಕರಿಸಿದ್ದಾರೆ. ಹೀಗಾಗಿ, ಆರೋಪಿಗಳಿಬ್ಬರ ಜತೆ ಮತ್ತಿಬ್ಬರು ಸೇರಿ ಜಾತಿನಿಂದನೆ ಪದಗಳನ್ನು ಬಳಸಿ ಹಲ್ಲೆನಡೆಸಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ದೂರು ನೀಡಿದ್ದಾರೆ.

ಲಂಚ ಪಡೆದು ಜೈಲಿಗೋಗಿದ್ದ ಪಿಎಸ್‌ಐ ಬಿಡುಗಡೆ ವೇಳೆ ಅದ್ಧೂರಿ ಮೆರವಣಿಗೆ! ಕೊಟ್ಟೂರು ಠಾಣೆಯಲ್ಲಿ ದೂರು ದಾಖಲು

ಇತ್ತ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಗಳಾದ ಆನಂದ್‌, ಗಿರೀಶ್‌ ನಾಗೇಶ್‌ ಹಾಗೂ ರಂಜಿತಾ ಅವರು ಲಕ್ಷ್ಮಿ ವಿರುದ್ಧ ಪ್ರತಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಮಜಲುಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.



Read more

[wpas_products keywords=”deal of the day sale today offer all”]