The New Indian Express
ಬೆಂಗಳೂರು: ಕೇಂದ್ರ ಬಜೆಟ್ ಕುರಿತು ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲೆಗಳಲ್ಲಿ ಸಭೆ ಹಾಗೂ ಚರ್ಚೆಗಳ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು, ಬಜೆಟ್ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣವನ್ನು ಎಲ್ಲಾ ಜಿಲ್ಲೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಬಜೆಟ್ ಬಳಿಕ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಜಿಲ್ಲೆಗಳಲ್ಲಿ ಫೆಬ್ರವರಿ 5 ರಿಂದ 15ರವರೆಗೆ ಈ ಸಭೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ದೊಡ್ಡ ಪರದೆ ಮೇಲೆ ಮೋದಿಯವರ ಭಾಷಣವನ್ನು ಎಲ್ಲಾ ಜಿಲ್ಲೆಗಳ ಪಕ್ಷ ಕಚೇರಿಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಮೋದಿಯವರ ಭಾಷಣದ ವೇಳೆ ಪಕ್ಷದ 100 ಕಾರ್ಯಕರ್ತರು, ಸಚಿವರು, ಶಾಸಕರು ಹಾಗೂ ಸಂಸದರು ಕಚೇರಿಯಲ್ಲಿರಲಿದ್ದಾರೆ. ಫೆಬ್ರವರಿ 5 ರಿಂದ 15ರವರೆಗೂ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿರುವ ಸಭೆ, ಚರ್ಚೆಗಳಲ್ಲಿ ಬಿಜೆಪಿ ನಾಯಕರು, ಸಂಸದರು, ತಜ್ಞರು, ವಾಣಿಜ್ಯೋದ್ಯಮಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದಷ್ಟೇ ಅಲ್ಲದೆ, ಬಜೆಟ್ ನಲ್ಲಿ ಘೋಷಣೆಯಾದ ಯೋಜನೆಗಳಿಂದ ಲಾಭ ಪಡೆದ ಫಲಾನುಭವಿಗಳೊಂದಿಗೂ ಸಭೆ ನಡೆಸುತ್ತೇವೆಂದು ತಿಳಿಸಿದ್ದಾರೆ.
Read more
[wpas_products keywords=”deal of the day”]