Karnataka news paper

ಅಂದು ಅಪ್ಪು ಮಾಡಿದ ಸಹಾಯದಿಂದ ಡ್ಯಾನ್ಸ್ ಸ್ಕೂಲ್ ಆರಂಭಿಸಿದ್ದ ಗೌರಿಶ್ರೀ ಈಗ ನಿರ್ದೇಶಕಿ


ಸ್ಯಾಂಡಲ್‌ವುಡ್‌ನಲ್ಲಿನಿರ್ದೇಶಕಿಯರ ಸಂಖ್ಯೆ ಕಡಿಮೆ. ಈಗ ಗೌರಿಶ್ರೀ ಎಂಬ ಸಹಕಲಾವಿದೆಯೊಬ್ಬರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗೌರಿಶ್ರೀ ಸುಮಾರು ನೂರು ಸಿನಿಮಾಗಳಲ್ಲಿಸಹ ಕಲಾವಿದೆಯಾಗಿ ನಟಿಸಿದ್ದಾರೆ. ಈಗ ‘ಜನರಕ್ಷಕ’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಪುನೀತ್‌ ರಾಜ್‌ಕುಮಾರ್‌ಅವರ ಜತೆ ‘ಪರಮಾತ್ಮ’ ಚಿತ್ರದಲ್ಲಿ ಗೌರಿಶ್ರೀ ಅಭಿನಯಿಸಿದ್ದರು. ಇದೀಗ ಸಹ ಕಲಾವಿದೆಯಾಗಿ ತಾವು ದುಡಿದು ಸಂಪಾದಿಸಿದ ಹಣದಲ್ಲಿಯೇ ಈ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ ಗೌರಿಶ್ರೀ. ‘ಜನರಕ್ಷಕ’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಗೌರಿಶ್ರೀ ಕಲಾವಿದೆ ಮಾತ್ರವಲ್ಲ, ನೃತ್ಯ ಸಂಯೋಜಕಿಯೂ ಹೌದು. ತಮ್ಮದೇ ಆದ ನೃತ್ಯಶಾಲೆಯನ್ನು ಹೊಂದಿರುವ ಈಕೆ ಈ ಸಿನಿಮಾದ ಮೂಲಕ ನಾಯಕಿಯೂ ಆಗಿದ್ದಾರೆ. ‘ಜನರಕ್ಷಕ’ ಸಿನಿಮಾಕ್ಕೆ ‘ನಾ ಭಕ್ಷಕ’ ಎಂಬ ಟ್ಯಾಗ್‌ಲೈನ್ ಕೂಡ ಇದೆ.

‘ನಾನು ಪುನೀತ್‌ ರಾಜ್‌ಕುಮಾರ್‌ಅವರ ಜತೆ ‘ಪರಮಾತ್ಮ’ ಚಿತ್ರದಲ್ಲಿ ಅಭಿನಯಿಸಿದ್ದೆ. ಆಗವರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ನಾನು ಡಾನ್ಸ್‌ ಸ್ಕೂಲ್‌ ಆರಂಭಿಸಿದಾಗಲೂ ಹಣಕಾಸಿನ ಸಹಾಯ ಮಾಡಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿ ಕೂತಾಗ ಮಾಡಿಕೊಂಡ ಕಥೆಯಿದು. ಮಕ್ಕಳಾದವರು ತಮ್ಮ ಕುಟುಂಬದ ಗೌರವ, ಘನತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಅವರು ದಾರಿತಪ್ಪಿದರೆ ಆ ಸಂಸಾರ ಹೇಗೆ ಹಾಳಾಗುತ್ತದೆ, ಅಲ್ಲದೆ ಕುಡಿತದಿಂದ ಕುಟುಂಬದಲ್ಲಿ ಏನೆಲ್ಲಅನಾಹುತಗಳಾಗುತ್ತವೆ ಎಂಬುದನ್ನು ಕುಟುಂಬವೊಂದರ ವಿಭಿನ್ನ ವ್ಯಕ್ತಿತ್ವದ ಇಬ್ಬರು ಮಕ್ಕಳ ಮೂಲಕ ಹೇಳಲು ಪ್ರಯತ್ನ ಮಾಡಿದ್ದೇನೆ. ಕುಡಿತದ ಚಟದಿಂದ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸುವುದರ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುತ್ತಿದ್ದೇವೆ. ಈಗಾಗಲೇ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳನ್ನು ಚಿತ್ರೀಕರಣ ಮಾಡಿದ್ದೇವೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದಿದ್ದಾರೆ ಗೌರಿಶ್ರೀ.

ಪೋಸ್ಟರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಅವರು, ‘ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯರ ಸಂಖ್ಯೆ ಕಡಿಮೆ. ಡಾ. ಪಾರ್ವತಮ್ಮ ರಾಜ್ಕುಮಾರ್ ಅವರು ಯಶಸ್ವಿ ನಿರ್ಮಾಪಕಿ ಆಗಿದ್ದರು. ಎಷ್ಟೋ ಕಲಾವಿದರಿಗೆ, ತಂತ್ರಜ್ಞರಿಗೆ ಅವರು ಅವಕಾಶ ಕೊಟ್ಟಿದ್ದರು. ಅದೇ ರೀತಿ ಗೌರಿಶ್ರೀ ಬೆಳೆಯಲಿ’ ಎಂದು ಹಾರೈಸಿದರು.

‘ಜೇಮ್ಸ್‌ನಲ್ಲಿ ನಟಿಸಿದ್ದು ಗಿಮಿಕ್ ಅಲ್ಲ, ಅಪ್ಪು ಸಿನಿಮಾಗೆ ಪ್ರಮೋಷನ್‌ ಮಾಡೋ ಯೋಗ್ಯತೆ ಯಾರಿಗೆ ಇದೆ’- ರಾಘಣ್ಣ

ಈ ಚಿತ್ರಕ್ಕೆ ದೇವದಾಸ್‌ ಸಂಗೀತ ಸಂಯೋಜನೆ ಮಾಡಿದ್ದರೆ, ಪಿ.ಕೆ.ಹೆಚ್‌. ದಾಸ್‌ ಸಿನಿಮಾಟೋಗ್ರಾಫರ್‌ ಕೆಲಸ ಮಾಡಿದ್ದಾರೆ. ಸುಪ್ರೀಮ್ ಸುಬ್ಬು ಸಾಹಸ ನಿರ್ದೇಶನ ಮಾಡಿದ್ದಾರೆ. ಪ್ರಮುಖ ತಾರಾಗಣದಲ್ಲಿ ರಘು, ಗೌರಿಶ್ರೀ, ಭಾಗ್ಯಶ್ರೀ, ನಟರಾಜ್‌, ರತ್ನಮಾಲಾ, ಪ್ರಿಯಾ ಸೋಮಸುಂದರ್‌ ಮುಂತಾದವರು ನಟಿಸಿದ್ದಾರೆ.

ಮದುವೆ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ಫೋಟೋ; ‘ಅಪ್ಪು ಅಮರ’ ಎಂದ ನವಜೋಡಿ



Read more

[wpas_products keywords=”deal of the day party wear dress for women stylish indian”]