ಯಾವ ವಸ್ತುಗಳ ಬೆಲೆ ಇಳಿಕೆ ..?
– ಆಭರಣಗಳ ಸುಂಕ ಇಳಿಕೆ
– ಚಿನ್ನ, ವಜ್ರಾಭರಣ ತೆರಿಗೆ ಇಳಿಕೆ
– ಡೈಮಂಡ್ ಕಸ್ಟಮ್ ದರ ಶೇ. 5ರಷ್ಟು ಇಳಿಕೆ
– ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ
– ಚಪ್ಪಲಿ ದರ ಇಳಿಕೆ
– ಮೊಬೈಲ್, ಚಾರ್ಜರ್ ಬೆಲೆ ಇಳಿಕೆ
– ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ
– ಕಾರ್ಪೊರೇಟ್ ಸರ್‌ಚಾರ್ಜ್ ಶೇ. 12 ರಿಂದ 7ಕ್ಕೆ ಇಳಿಕೆ
– ಎಲೆಕ್ಟ್ರಾನಿಕ್ ಉಪಕರಣ ದರ ಇಳಿಕೆ
– ಕೆಲವು ರಾಸಾಯನಿಕ ವಸ್ತುಗಳ ಆಮದು ಸುಂಕ ಇಳಿಕೆ
– ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಉಕ್ಕಿನ ತ್ಯಾಜ್ಯದ ಮೇಲಿನ ಕಸ್ಟಮ್ ಸುಂಕದಿಂದ ವಿನಾಯಿತಿ
– ಕಲೆ ರಹಿತ ಉಕ್ಕು, ಸ್ಟೀಲ್ ಬಾರ್‌ಗಳ ಮೇಲಿನ ಕಸ್ಟಮ್ ಸುಂಕ ತೆರವು
– ಸಿರಿ ಧಾನ್ಯ ಉತ್ಪನ್ನಗಳ ಬೆಲೆ ಇಳಿಕೆ
ಯಾವುದರ ದರ ಏರಿಕೆ..?
– ಎಥೆನಾಲ್ ಮಿಶ್ರಿತ ತೈಲದ ಆಮದು ಸುಂಕ ಏರಿಕೆ
– ಅನ್ ಬ್ಲೆಂಡೆಂಡ್ ಇಂಧನದ ಮೇಲೆ ಅಕ್ಟೋಬರ್ 2022ರಿಂದ 2 ರೂ. ಹೆಚ್ಚುವರಿ ಸುಂಕ
– ಛತ್ರಿ ಮೇಲಿನ ಸುಂಕ ಏರಿಕೆ
– ಆಮದು ವಸ್ತುಗಳ ಮೇಲಿನ ಸುಂಕ ಏರಿಕೆ
ಇನ್ನು ಸಂಪ್ರದಾಯದಂತೆ ಪ್ರತಿ ವರ್ಷ ಏರಿಕೆ ಕಾಣುತ್ತಿದ್ದ ಸಿಗರೇಟು ಹಾಗೂ ತಂಬಾಕು ಮೇಲಿನ ತೆರಿಗೆಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಮದ್ಯದ ಮೇಲೂ ಹೆಚ್ಚುವರಿ ಸುಂಕ ಹೇರಿಕೆಯಾಗಿಲ್ಲ. ಒಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಅಗತ್ಯ ವಸ್ತುಗಳ ದರ ಇಳಿಕೆ ಮಾಡಿ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಬಜೆಟ್ ಭಾಷಣಕ್ಕೂ ಮುನ್ನವೇ ವಾಣಿಜ್ಯ ಬಳಕೆ ಸಿಲಿಂಡರ್ ದರ ಇಳಿಕೆ ಮಾಡಿ ತೈಲ ಕಂಪನಿಗಳು ಕೊಂಚ ರಿಲೀಫ್ ನೀಡಿದ್ದವು. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ದೇಶದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟದು ಎಂದೇ ವಿಶ್ಲೇಷಿಸಲಾಗುತ್ತಿದೆ.
Read more
[wpas_products keywords=”deal of the day sale today offer all”]