Karnataka news paper

Budget 2022: ವಿನಾಶಕಾರಿ ಹಾದಿ ತುಳಿದ ಮೋದಿ ಸರ್ಕಾರ : ನದಿ ಜೋಡಣೆಗೆ ಜೈರಾಮ್ ರಮೇಶ್ ಕಳವಳ


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನದಿ ಜೋಡಣೆ ಘೋಷಣೆಯ ಮೂಲಕ ಪರಿಸರದ ವಿಚಾರದಲ್ಲಿ ವಿನಾಶಕಾರಿ ಹಾದಿಯನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ತುಳಿದಿದೆ ಎಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಬಾಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಲೇ, ಇನ್ನೊಂದೆಡೆ ಪರಿಸರವನ್ನು ಹಾಳು ಮಾಡುವ ನದಿ ಜೋಡಣೆಯಂತಹ
ಅನಾಹುತಕಾರಿ ಯೋಜನೆಗಳನ್ನು ಸರಕಾರ ಘೋಷಿಸುತ್ತಿದೆ ಎಂದು ಜೈರಾಮ್ ರಮೇಶ್ ಬೇಸರ ವ್ಯಕ್ತಪಡಿಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ನದಿ ಜೋಡಣೆ ಪ್ರಸ್ತಾವದ ಬಗ್ಗೆ ಜೈರಾಮ್ ರಮೇಶ್ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಇದು ವಿನಾಶಕಾರಿ ಹೆಜ್ಜೆ ಎಂದಿದ್ದಾರೆ. ಇದೇ ಬಜೆಟ್ನಲ್ಲಿ ಸಚಿವೆ ನಿರ್ಮಾಲಾ ಸೀತಾರಾಮನ್ ಹವಾಮಾನ ವೈಪರಿತ್ಯ ತಡೆಯುವ ಕ್ರಿಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ, ಪರಿಸರ ಸಂರಕ್ಷಣೆಗೆ ಬದ್ಧತೆಯನ್ನು ಸಚಿವರು ಪ್ರದರ್ಶಿಸಿದ್ದಾರೆ.

union budget-2022: ಕಾವೇರಿ- ಪೆನ್ನಾರ್‌ ನದಿ ಜೋಡಣೆ ಯೋಜನೆಗೆ ಬಜೆಟ್‌ನಲ್ಲಿ ಸಮ್ಮತಿ

ಆದರೆ ಪರಿಸರಕ್ಕೆ ದುರಂತವಾಗುವ ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದಾರೆ. ಯೋಜನೆಗಳಿಗೆ ಕೇಂದ್ರ ಸರ್ಕಾರವು ಅತ್ಯುತ್ತಮ ಹೆಸರುಗಳನ್ನು ನೀಡುತ್ತದೆ. ಆದರೆ ಅನುಷ್ಠಾನ ಹಂತದಲ್ಲಿ ವಿನಾಶಕಾರಿ ಹಾದಿಯನ್ನು ತುಳಿಯುತ್ತಿದ್ದಾರೆ ಎಂದು ಅವರು ಹೇಳಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜೈರಾಂ ರಮೇಶ್ ಅವರು ಕೇಂದ್ರ ಪರಿಸರ ಸಚಿವರಾಗಿದ್ದರು. ಪ್ರಸ್ತುತ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.

ಸಚಿವೆ ನಿರ್ಮಾಲ ಸೀತಾರಾಮನ್ ಹೇಳಿದ್ದೇನು?
ಕೃಷಿ ಅಭಿವೃದ್ಧಿ ಮತ್ತು ಕುಡಿಯುವ ನೀರು ಯೋಜನೆಗಾಗಿ 5 ನದಿಗಳ ಜೋಡಣೆಗೆ ಕಾರ್ಯಯೋಜನೆಯನ್ನು ಕೇಂದ್ರ್ ಸಚಿವೆ ನಿರ್ಮಾಲ ಸೀತಾರಾಮನ್ ಪ್ರಸ್ತಾಪಿಸಿದರು. ಗೋದಾವರಿ – ಕೃಷ್ಣಾ, ಕೃಷ್ಣಾ- ಪೆನ್ನಾರ್ , ಕಾವೇರಿ- ಪೆನ್ನಾರ್, ದಮನ್ ಗಂಗಾ- ಪಿಂಜಾಲ್ ಮತ್ತು ತಪತಿ- ನರ್ಮದಾ ಈ 5 ನದಿಗಳ ಜೋಡಣೆ ಬಗ್ಗೆ ಮಾಹಿತಿ ನೀಡಿದರು. ಈ ನದಿಗಳು ಹರಿಯುವ ರಾಜ್ಯಗಳ ನಡುವೆ ಸಹಮತ ವ್ಯಕ್ತವಾದ ಕೂಡಲೇ ಯೋಜನೆ ಜಾರಿಗೆ ಕೇಂದ್ರದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಬಜೆಟ್ ಮೂಲಕ ಸೀತಾರಾಮನ್ ತಿಳಿಸಿದ್ದರು.



Read more

[wpas_products keywords=”deal of the day sale today offer all”]