ಗೋದಾವರಿ – ಕೃಷ್ಣಾ, ಕೃಷ್ಣಾ – ಪೆನ್ನಾರ್, ಪೆನ್ನಾರ್ – ಕಾವೇರಿ, ದಮನ್ ಗಂಗಾ – ಪಿಂಜಾಲ್, ಪಾರ್ – ತಪ್ತಿ, ನರ್ಮದಾ ಜೋಡಣೆಗೆ ಯೋಜನೆಗಳು ಸಿದ್ಧವಾಗಿವೆ. ಈ ನದಿ ಯೋಜನೆಗಳನ್ನ ಒಮ್ಮೆ ನೋಡಿದಾಗ ನಮಗೆ ಎರಡು ಅಂಶಗಳು ಕಂಡು ಬರುತ್ತವೆ. ಈ ಯೋಜನೆಯಿಂದ ಸಹಸ್ರಾರು ಕೋಟಿ ರೂಪಾಯಿ ಹೊರೆ ಕೇಂದ್ರ ಸರ್ಕಾರದ ಮೇಲೆ ಬರುತ್ತದೆ. ಇನ್ನು ಈ ಭಾಗದಲ್ಲಿ ಪರಿಸರ ನಾಶವನ್ನ ಊಹೆ ಮಾಡಿದರೆ ಈ ಯೋಜನೆಗೆ ತಗುಲುವ ನೂರು ಪಟ್ಟು ನಷ್ಟ ಉಂಟಾಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಕರ್ನಾಟಕ ಸರ್ಕಾರದ ಎತ್ತಿನ ಹೊಳೆ ಯೋಜನೆಯನ್ನ ಒಮ್ಮೆ ನೋಡಿದಾಗ ಇಂತಹ ಯೋಜನೆಗಳಿಂದ ಏನು ಲಾಭ ಎಂಬುದು ಕಣ್ಣ ಮುಂದೆ ಬರುತ್ತದೆ. ನದಿ ಜೋಡಣೆ ಯೋಜನೆಗಳೇ ಹಾಸ್ಯಾಸ್ಪದ. ಇದರಿಂದ ಏನೂ ಲಾಭವಿಲ್ಲ. ಬಹಳ ಮುಖ್ಯವಾಗಿ ಇಲ್ಲಿನ ನದಿಗಳು ಗುಜರಾತ್‌ನಿಂದ ತಮಿಳುನಾಡಿನವರೆಗೆ ನಮ್ಮ ಪಶ್ಚಿಮ ಘಟ್ಟಕ್ಕೆ ಸೇರಿವೆ. ಇತ್ತೀಚಿನ ದಿನಗಳಲ್ಲಿ ಕಾಡು ಕ್ಷೀಣಿಸಿದೆ. ನಿರಂತರವಾಗಿ ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ನಮ್ಮ ಜನಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಈ ನದಿಗಳ ಜೋಡಣೆ ಅನಿವಾರ್ಯ ಅನಿಸಿದೆ ಎಂದು ಶರ್ಮಾ ಅಭಿಪ್ರಾಯಪಟ್ಟರು.
ಇಂತಹ ಯೋಜನೆಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಹತ್ತಿರವಾಗಲು ಯತ್ನಿಸಿವೆ. ಈ ಯೋಜನೆಗಳೇನಾದರೂ ಅನುಷ್ಠಾನವಾದರೆ ಮುಂದೆ ಈ ಪರಿಸರವನ್ನ ನಾವು ರಕ್ಷಿಸಲು ಆಗದ ಸ್ಥಿತಿ ತಲುಪುತ್ತೇವೆ. ಬಹಳ ಮುಖ್ಯವಾಗಿ ನಮ್ಮ ರಾಜ್ಯಕ್ಕೆ ಇದರಿಂದ ಏನೂ ಲಾಭವಿಲ್ಲ. ಈ ಯೋಜನೆಗಳಿಂದ ನದಿ ಕೊನೆಯಲ್ಲಿರುವ ರಾಜ್ಯಗಳಿಗೆ ಮಾತ್ರ ಲಾಭವಾಗುತ್ತದೆ. ಈ ಯೋಜನೆಗಳಿಂದ ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಿಗೆ ಮಾತ್ರ ಲಾಭವಾಗುತ್ತದೆ ಎಂದು ಅಜಯ್ ಹೇಳಿದರು.
ಇನ್ನು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಕೆ. ಟಿ. ಗಂಗಾಧರ್ ಮಾತನಾಡಿ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ನದಿಗಳ ಜೋಡಣೆ ಅವೈಜ್ಞಾನಿಕ. ಉದ್ಯೋಗ ಸೃಷ್ಟಿ ಬಗ್ಗೆ ಹಲವು ವರ್ಷಗಳಿಂದಲೂ ಅಸಮಾಧಾನ ಇದೆ. ಇಂತಹ ಮಹತ್ಕಾರ್ಯಗಳನ್ನ ಮಾಡುವ ಬದಲು ಹಣವನ್ನ ನೀರಿಗಾಗಿ ನೀರಿನಂತೆ ಪೋಲು ಮಾಡಲಾಗುತ್ತಿದೆ. ಕೃಷಿ ಸಂಬಂಧಿ ಕೈಗಾರಿಕೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ವಿದ್ಯುತ್ ಖಾಸಗೀಕರಣ ಮಾಡಿ, ಆದರೆ ನಮ್ಮ ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ಅಳವಡಿಸಿಕೊಳ್ಳುತ್ತೇವೆ ಅದಕ್ಕೆ ನೂರರಷ್ಟು ಸಬ್ಸಿಡಿ ಮೊದಲು ನೀಡಿ ಎಂದು ಆಗ್ರಹಿಸಿದರು.
ರೈತನಿಗೆ ಈ ಬಜೆಟ್‌ನಿಂದ ಏನೂ ಸಿಕ್ಕಿಲ್ಲ. ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿದೆ. ಕಳೆದ ಒಂದು ವರ್ಷದಲ್ಲಿ ನಡೆದ ರೈತ ಚಳವಳಿ ಮುಕ್ತಾಯದ ಸಂದರ್ಭದಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನ ಕಾನೂನುಬದ್ಧ ಮಾಡಲು ಬೇಡಿಕೆ ಇಡಲಾಗಿತ್ತು. ಸರ್ಕಾರ ಬೆಂಬಲ ಬೆಲೆಗೆ ಕಾನೂನು ರೂಪ ನೀಡುತ್ತೇವೆ ಎಂದು ಆಸ್ವಾಸನೆ ಕೊಟ್ಟಿತ್ತು. ಈಗದು ಹುಸಿಯಾಗಿದೆ ಎಂದು ಗಂಗಾಧರ್ ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಒಂದೇ ಒಂದು ವಾಕ್ಯವನ್ನೂ ಹೇಳಲಿಲ್ಲ. ಆದ್ದರಿಂದ ನಮಗೆ ಕೇಂದ್ರ ಸರ್ಕಾರದ ಮೇಲೆ ಅನುಮಾನ ದಟ್ಟವಾಗಿದೆ. ಇನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಆಚರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಸಿರಿ ಧಾನ್ಯದ ಪ್ರಮುಖ ಬೆಳೆ ರಾಗಿಯನ್ನ ಖರೀದಿ ಮಾಡೋದಿಲ್ಲ, ನಿಲ್ಲಿಸುತ್ತೇವೆ ಎನ್ನುತ್ತಾರೆ. ಇವರು ಮೀಸಲಿಟ್ಟ ಹಣದಲ್ಲಿ ಗೋಧಿ ಖರೀದಿ ಮಾಡಲಾಗದು, ಇನ್ನು ರಾಗಿ ಎಲ್ಲಿಂದ ಖರೀದಿ ಮಾಡುತ್ತಾರೆ? ಇದು ಕೇಂದ್ರ ಸರ್ಕಾರದ ಇಬ್ಬಂದಿತನವನ್ನ ತೋರುತ್ತಿದೆ ಎಂದು ಗಂಗಾಧರ್ ಗುಡುಗಿದರು.
Read more
[wpas_products keywords=”deal of the day sale today offer all”]