Online Desk
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವು ಜನವರಿಯಲ್ಲಿ ದಾಖಲೆಯ 1.38 ಲಕ್ಷ ಕೋಟಿ ರೂ.ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.15 ರಷ್ಟು ವೃದ್ಧಿಯಾಗಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಜನವರಿ 30, 2022 ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್ ಟಿಆರ್-೩ಬಿ ರಿಟರ್ನ್‌ಗಳ ಸಂಖ್ಯೆ 1.05 ಕೋಟಿಯಾಗಿದ್ದು, ಇದರಲ್ಲಿ 36 ಲಕ್ಷ ತ್ರೈಮಾಸಿಕ ರಿಟರ್ನ್ಸ್ ಸೇರಿವೆ. ಅಲ್ಲದೇ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 1.30 ಲಕ್ಷ ಕೋಟಿ ರೂಪಾಯಿ ದಾಟಿದ ಸತತ ನಾಲ್ಕನೇ ತಿಂಗಳು ಜನವರಿ ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನು ಓದಿ: ಕರ್ನಾಟಕ ಜಿಎಸ್ ಟಿ ಸಂಗ್ರಹದಲ್ಲಿ ದಾಖಲೆ ಏರಿಕೆ, ಕಳೆದ ವರ್ಷಕ್ಕಿಂತ ಶೇ.31ರಷ್ಟು ಹೆಚ್ಚಳ
31.01.2022 ರಂದು ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು ಜಿಎಸ್ ಟಿ ಆದಾಯವು 1,38,394 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್ ಟಿ 24,674 ಕೋಟಿ ರೂ.ಗಳು, ಎಸ್ ಜಿಎಸ್ ಟಿ 32,016 ಕೋಟಿ ರೂ.ಗಳು, ಐಜಿಎಸ್ ಟಿ 72,030 ಕೋಟಿ ರೂ.ಗಳು (ಸರಕುಗಳ ಆಮದು ಮೇಲೆ 35,181 ಕೋಟಿ ರೂ. ಒಳಗೊಂಡಂತೆ ) ಮತ್ತು ಸೆಸ್ 9,674 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 517 ಕೋಟಿ ಸೇರಿದಂತೆ) ಎಂದು ಹೇಳಿದೆ.
ಜಿಎಸ್ ಟಿ ಸಂಗ್ರಹವು ಏಪ್ರಿಲ್ 2021ರಲ್ಲಿ 1,39,708 ಕೋಟಿ ರೂ. ಸಂಗ್ರಹವಾಗಿದ್ದು, ಇತರೆ ತಿಂಗಳಿಗೆ ಹೋಲಿಸಿದರೆ ಏಪ್ರಿಲ್ ನಲ್ಲಿಯೇ ಅತಿಹೆಚ್ಚು ಜಿಎಸ್ ಟಿ ಸಂಗ್ರಹವಾದ ತಿಂಗಳಾಗಿದೆ. 2022ರ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಶೇ.15ರಷ್ಟು ಹೆಚ್ಚಾಗಿದೆ ಮತ್ತು 2020 ರ ಜನವರಿಯಲ್ಲಿ ಆದಾಯಕ್ಕಿಂತ ಶೇ. 25ರಷ್ಟು ಹೆಚ್ಚಾಗಿದೆ.
ಆರ್ಥಿಕ ಚೇತರಿಕೆ, ವಂಚನೆ-ವಿರೋಧಿ ಚಟುವಟಿಕೆಗಳು, ವಿಶೇಷವಾಗಿ ನಕಲಿ ಬಿಲ್ಲರ್ ಗಳ ವಿರುದ್ಧ ತೆಗೆದುಕೊಂಡ ಕ್ರಮಗಳಿಂದಾಗಿ ವರ್ಧಿತ ಜಿಎಸ್ ಟಿ ಹೆಚ್ಚಳಗೊಂಡಿದೆ. ಕರ್ತವ್ಯ ಲೋಪಗಳನ್ನು ಸರಿಪಡಿಸಲು ಕೌನ್ಸಿಲ್ ಕೈಗೊಂಡ ತರ್ಕಬದ್ಧ ಕ್ರಮಗಳಿಂದ ಆದಾಯದಲ್ಲಿ ಸುಧಾರಣೆಯಾಗಿದೆ. ಮುಂಬರುವ ದಿನಗಳಲ್ಲಿಯೂ ಆದಾಯದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
Read more…
[wpas_products keywords=”deal of the day”]