ಕೇಂದ್ರ ಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಡಿಜಿಟಲ್ ಕರೆನ್ಸಿಗಳಿಂದ ಬರುವ ಆದಾಯದ ಮೇಲೆ ಶೇ.30ರಷ್ಟು ಆದಾಯ ತೆರಿಗೆ ಹೇರುವುದಾಗಿ ತಿಳಿಸಿದರು. ಇದರರ್ಥ ಹೂಡಿಕೆದಾರರು ವ್ಯಾಪಾರ ಅಥವಾ ಹೂಡಿಕೆಯಿಂದ ಮಾಡುವ ಆದಾಯದ ಮೇಲೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
ಈ ತೆರಿಗೆಯನ್ನು ಇತರ ಯಾವುದೇ ನಷ್ಟ ಅಥವಾ ವೆಚ್ಚಗಳ ವಿರುದ್ಧ ಹೊಂದಿಸಲು ಅನುಮತಿ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಕ್ರಿಪ್ಟೋಕರೆನ್ಸಿ ಹೂಡಿಕೆದಾರರಿಗೆ ತೆರಿಗೆ ಹೊರೆಯನ್ನು ಹೆಚ್ಚಿಸಲಿದೆ. ಅವರು ತಮ್ಮ ಆದಾಯದ ಮೂರನೇ ಒಂದು ಭಾಗವನ್ನು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದು ತಜ್ಞರ ಅನಿಸಿಕೆ.
ಕ್ರಿಪ್ಟೋ ಕರೆನ್ಸಿಗಳಲ್ಲಿ ವ್ಯಾಪಾರ ಅಥವಾ ಹೂಡಿಕೆಯಿಂದ ಗಳಿಸಿದ ಆದಾಯವನ್ನು, ಈ ವರ್ಷದಿಂದ ವ್ಯಾಪಾರ ಆದಾಯ ಎಂದು ಪರಿಗಣಿಸಬಹುದೇ ಎಂದು ಸರ್ಕಾರವು ಹಿರಿಯ ತೆರಿಗೆ ಸಲಹೆಗಾರರ ಅಭಿಪ್ರಾಯ ಕೇಳಿದೆ. ಈ ಕುರಿತು ಅಂತಿಮ ತೀರ್ಮಾನ ಬಂದಾಗ ಕ್ರಿಪ್ಟೋಕರೆನ್ಸಿ ಹಣೆಬರಹ ಸ್ಪಷ್ಟವಾಗಲಿದೆ ಎನ್ನುತ್ತಾರೆ ಉದ್ಯಮ ತಜ್ಞರು.
ಹಣಕಾಸು ಮಸೂದೆಯ ಪ್ರಕಾರ, ಹೂಡಿಕೆದಾರರು ಈ ವರ್ಷ ಏಪ್ರಿಲ್ 1 ರ ಮೊದಲು ತಮ್ಮ ಕ್ರಿಪ್ಟೋ ಆಸ್ತಿಗಳನ್ನು ಮಾರಾಟ ಮಾಡಬಹುದು. ಹೊಸ ತೆರಿಗೆ ದರವು ಮುಂದಿನ ಹಣಕಾಸು ವರ್ಷದಿಂದ ಮಾತ್ರ ಅನ್ವಯಿಸುತ್ತದೆ. ಹೂಡಿಕೆದಾರರು ಇನ್ನೂ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಅನ್ವಯಿಸಬಹುದು ಅಥವಾ ಇತರ ವ್ಯಾಪಾರ ನಷ್ಟಗಳ ವಿರುದ್ಧ ಲಾಭವನ್ನು ಹೊಂದಿಸಬಹುದು.
ಆದರೆ ಏಪ್ರಿಲ್ 1ರ ಬಳಿಕ ಈ ನಿಯಮ ಬದಲಾಗಲಿದ್ದು, ಆ ಸಂದರ್ಭದಲ್ಲಿ ಭಾರತೀಯ ಹೂಡಿಕೆದಾರರು ಅಧಿಕ ಪ್ರಮಾಣದಲ್ಲಿ ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿರುವ ಹೂಡಿಕೆಯನ್ನು ಮಾರಾಟ ಮಾಡಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.
Read more
[wpas_products keywords=”deal of the day sale today offer all”]