News
ಇಂದು ಕೇಂದ್ರ ಸರ್ಕಾರದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಬಜೆಟ್ ಆರಂಭಕ್ಕೂ ಮುನ್ನ ಆರಂಭಿಕವಾಗಿ ಏರಿಕೆ ಕಂಡಿದ್ದ ಸೆನ್ಸೆಕ್ಸ್, ನಿಫ್ಟ್ ಬಜೆಟ್ ಮುಗಿದ ಬಳಿಕ ಸೆನ್ಸೆಕ್ಸ್ ಸುಮಾರು ಶುಭ ಅಂತ್ಯವನ್ನು ಕಂಡಿದೆ. ಸೆನ್ಸೆಕ್ಸ್ 848 ಅಂಕ ಜಿಗಿದು 58,862ಕ್ಕೆ ಮುಕ್ತಾಯವಾದರೆ, ನಿಫ್ಟಿ 17,576ಕ್ಕೆ ಏರಿ ದಿನದ ವಹಿವಾಟನ್ನು ಅಂತ್ಯ ಮಾಡಿದೆ.
ಭಾರತೀಯ ಷೇರು ಮಾರುಕಟ್ಟೆ ಇಂದು ಆರಂಭಿಕವಾಗಿ ಪಾಸಿಟಿವ್ ದಾರಿಯಲ್ಲಿತ್ತು. ಅಂತ್ಯವೂ ಪಾಸಿಟಿವ್ ಆಗಿದೆ. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಮಂಡಿಸಿದ್ದು ಈ ನಡುವೆ ಷೇರು ಮಾರುಕಟ್ಟೆ ಏರುಗತಿಯಲ್ಲಿ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ 848 ಅಂಕ ಜಿಗಿತ, ನಿಫ್ಟಿ 17,600 ಸಮೀಪ ಕೊನೆಗೊಂಡಿದೆ.
ಬಜೆಟ್ ನಡುವೆ ಸೆನ್ಸೆಕ್ಸ್ 58,920 ಪಾಯಿಂಟ್‌ಗೆ ಏರಿಕೆ
ಸನ್ ಫಾರ್ಮಾ, ಐಟಿಸಿ ಮತ್ತು ಇನ್ಫೋಸಿಸ್‌ನಲ್ಲಿನ ಪ್ರಮುಖ ಲಾಭಗಳ ಸಹಾಯದಿಂದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 600 ಪಾಯಿಂಟ್‌ಗಳ ಏರಿಕೆ ಕಂಡಿದೆ. ಬಜೆಟ್ ಪ್ರಕಟಣೆ ಸಂದರ್ಭದಲ್ಲಿ ಏರಿಳಿತ ಕಂಡು ಬಂದಿದ್ದು, ಕೊನೆಯದಾಗಿ 58,862 ಪಾಯಿಂಟ್‌ಗಳಲ್ಲಿ ಅಂತ್ಯವಾಗಿದೆ. ಇನ್ನು ವಹಿವಾಟು ಅಂತ್ಯವಾಗುವ ಮುನ್ನ ಸೆನ್ಸೆಕ್ಸ್ 59,032.20 ಅಥವಾ 1,000 ಪಾಯಿಂಟ್‌ಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆ ಕಂಡಿತ್ತು. ನಿಫ್ಟಿ 300 ಪಾಯಿಂಟ್‌ಗಳ ಸಮೀಪಕ್ಕೆ ಏರಿ 17,600 ಕ್ಕಿಂತ ಮೇಲಕ್ಕೆ ಜಿಗಿದಿದೆ. ವಹಿವಾಟು ಅಂತ್ಯಕ್ಕೂ ಮುನ್ನ 17,576.85 ಅಥವಾ 1.37% ಕ್ಕಿಂತ ಹೆಚ್ಚಾಗಿತ್ತು.

ಯಾವ ಷೇರು ಏರಿಕೆ, ಯಾವುದು ಇಳಿಕೆ?
ಸೆನ್ಸೆಕ್ಸ್‌ನಲ್ಲಿನ ಷೇರುಗಳಲ್ಲಿ, ಟಾಟಾ ಸ್ಟೀಲ್ 7.2%, ಸನ್ ಫಾರ್ಮಾ 6.7%, ಮತ್ತು ಇಂಡಸ್‌ಇಂಡ್ ಬ್ಯಾಂಕ್ 5.65% ರಷ್ಟು ಏರಿಕೆ ಕಂಡಿದೆ. ಬಜೆಟ್ ರಫ್ತಿಗೆ ಉತ್ತೇಜನ ನೀಡಿದ ನಂತರ ಜವಳಿ ದಾಸ್ತಾನು ಕೂಡ ಗಗನಕ್ಕೇರಿದೆ. ಎಲ್ & ಟಿ, ಐಟಿಸಿ, ಅಲ್ಟ್ರಾಟೆಕ್, ಇನ್ಫೋಸಿಸ್ ಉತ್ತಮ ಪ್ರದರ್ಶನ ನೀಡಿದ ಇತರ ಷೇರುಗಳಾಗಿವೆ. ಈ ನಡುವೆ ಎಂ & ಎಂ, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಪವರ್‌ಗ್ರಿಡ್, ರಿಲಯನ್ಸ್ ನಷ್ಟ ಅನುಭವಿಸಿದೆ.
ನಿಫ್ಟಿಯಲ್ಲಿ ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ ಉತ್ತಮ ಪ್ರದರ್ಶನ ನೀಡಿದೆ. ಬಿಪಿಸಿಎಲ್, ಟಾಟಾ ಮೋಟಾರ್ಸ್, ಐಒಸಿ ನಷ್ಟ ಅನುಭವಿಸಿವೆ. ಸೆನ್ಸೆಕ್ಸ್‌ನಲ್ಲಿ, 30 ಷೇರುಗಳಲ್ಲಿ 7 ನೆಗೆಟಿವ್ ಅಥವಾ ನಷ್ಟದ ಮೂಲಕ ವಹಿವಾಟು ಕೊನೆಗೊಳಿಸಿದೆ. ಫಾರ್ಮಾ, ಲೋಹಗಳು, ರಿಯಾಲ್ಟಿ, ಐಟಿ, ಎಫ್‌ಎಂಸಿಜಿ ಷೇರುಗಳು ಲಾಭ ಗಳಿಸಿದರೆ, ಆಟೋ ಮತ್ತು ತೈಲ ಮತ್ತು ಅನಿಲ ನಷ್ಟ ಅನುಭವಿಸಿದೆ.
ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 550 ಪಾಯಿಂಟ್ ಜಿಗಿತ ಕಂಡಿದೆ. ಇನ್ನು ನಿಫ್ಟಿ ಟಾಪ್ 17,500ರಲ್ಲಿದೆ. ಬ್ಯಾಂಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನದ ಷೇರುಗಳಲ್ಲಿನ ಲಾಭದ ಮೂಲಕ ಭಾರತೀಯ ಷೇರು ವಹಿವಾಟು ಆರಂಭ ಮಾಡಿದೆ. ಈಗ 900 ಪಾಯಿಂಟ್ ಜಿಗಿತ ಕಂಡಿದ್ದು, ಸೆನ್ಸೆಕ್ಸ್ 58,920 ಪಾಯಿಂಟ್‌ಗೆ ಏರಿಕೆ ಕಂಡಿತ್ತು.
ಮೂಲಸೌಕರ್ಯ, ಹವಾಮಾನ ಬದಲಾವಣೆ, ಎಂಎಸ್‌ಎಂಇಗಳಿಗೆ ಬೆಂಬಲ ಮತ್ತು ಡಿಜಿಟಲೀಕರಣದ ಬಗ್ಗೆ ಬಜೆಟ್ ಹೆಚ್ಚು ಉಲ್ಲೇಖ ಮಾಡಿದೆ. ಡಿಜಿಟಲ್ ನೆಲೆಯಲ್ಲಿ ಆರ್ಥಿಕತೆಯ ಸಮಗ್ರ ಬೆಳವಣಿಗೆ ಮತ್ತು ಚೇತರಿಕೆಯ ಮೇಲೆ ಬಜೆಟ್ ಯೋಜಿಸಿದೆ. ಈ ನಡುವೆ ಷೇರು ಮಾರುಕಟ್ಟೆ ಲಾಭಾಂಶದಲ್ಲಿ ಸಾಗುತ್ತಿದೆ. ಮಧ್ಯಾಹ್ನ 12 ಗಂಟೆಗೆ ಸೆನ್ಸೆಕ್ಸ್ 892 ಪಾಯಿಂಟ್ ಅಥವಾ 1.54 ರಷ್ಟು ಏರಿಕೆಯಾಗಿ 58,906 ಕ್ಕೆ ತಲುಪಿದರೆ, ನಿಫ್ಟಿ 235 ಪಾಯಿಂಟ್ ಜಿಗಿದ 17,575 ಕ್ಕೆ ತಲುಪಿತ್ತು.
English summary
Budget 2022: Sensex Jumps 848 pts to close at 58,862; Nifty ends day at 17,576
Budget 2022: Sensex Jumps 848 pts to close at 58,862; Nifty ends day at 17,576.
Story first published: Tuesday, February 1, 2022, 16:31 [IST]
Read more…
[wpas_products keywords=”deal of the day”]