Karnataka news paper

ಶಮಿತಾ ಶೆಟ್ಟಿ ಬರ್ತ್‌ಡೇ ಪಾರ್ಟಿ: ‘ಆಂಟಿ’ ಎಂದು ಕರೆದ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾಗಿಲ್ಲ ಆಹ್ವಾನ!


ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ನಟಿ ಶಮಿತಾ ಶೆಟ್ಟಿ ಅವರು ಫೆಬ್ರವರಿ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಶಮಿತಾ ಶೆಟ್ಟಿ ಅವರ 43ನೇ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಹೋದರಿ ಶಿಲ್ಪಾ ಶೆಟ್ಟಿ ಪ್ಲಾನ್ ಮಾಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ‘ಬಿಗ್ ಬಾಸ್’ ಶೋನಲ್ಲೇ ಶಮಿತಾ ಶೆಟ್ಟಿ ಬಿಜಿಯಾಗಿದ್ದರು. ‘ಬಿಗ್ ಬಾಸ್ ಓಟಿಟಿ’ ಮತ್ತು ‘ಬಿಗ್ ಬಾಸ್ 15’ ಕಾರ್ಯಕ್ರಮಗಳಲ್ಲಿ ಶಮಿತಾ ಶೆಟ್ಟಿ ಸ್ಪರ್ಧಿಸಿದ್ದರು. ‘ಬಿಗ್ ಬಾಸ್ 15’ ಕಾರ್ಯಕ್ರಮದಲ್ಲಿ ನಟಿ ಶಮಿತಾ ಶೆಟ್ಟಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮೊನ್ನೆಮೊನ್ನೆಯಷ್ಟೇ ‘ಬಿಗ್ ಬಾಸ್ 15’ ಗ್ರ್ಯಾಂಡ್ ಫಿನಾಲೆ ಮುಗಿದು ಶಮಿತಾ ಶೆಟ್ಟಿ ವಾಪಸ್ ಮನೆಗೆ ಬಂದಿರುವುದರಿಂದ ಈ ಬಾರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲು ಶಿಲ್ಪಾ ಶೆಟ್ಟಿ ಸಕಲ ತಯಾರಿ ಮಾಡಿಕೊಂಡಿದ್ದಾರೆ.

Bigg Boss 15 Winner Tejasswi Prakash: ಗೆಲ್ಲದ ಪ್ರತೀಕ್ ಸೆಹಜ್‌ಪಾಲ್: ವೀಕ್ಷಕರಿಗೆ ನಿರಾಸೆ, ಬೇಸರ!
ಶಮಿತಾ ಶೆಟ್ಟಿ ಅವರ ಬರ್ತ್‌ಡೇ ಪಾರ್ಟಿಗೆ ಬಾಲಿವುಡ್ ನಟ-ನಟಿಯರಿಗೆ, ಸ್ನೇಹಿತರಿಗೆ ಹಾಗೂ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಶಮಿತಾ ಶೆಟ್ಟಿಗೆ ಸಾಥ್ ಕೊಟ್ಟ ಎಲ್ಲರಿಗೂ ಶಿಲ್ಪಾ ಶೆಟ್ಟಿ ಆಹ್ವಾನ ಕೊಟ್ಟಿದ್ದಾರೆ. ಆದರೆ, ‘ಬಿಗ್ ಬಾಸ್ 15’ ಕಾರ್ಯಕ್ರಮದ ವಿನ್ನರ್ ತೇಜಸ್ವಿ ಪ್ರಕಾಶ್ ಮತ್ತು ಆಕೆಯ ಬಾಯ್‌ಫ್ರೆಂಡ್ ಕರಣ್ ಕುಂದ್ರಾಗೆ ಮಾತ್ರ ಶಿಲ್ಪಾ ಶೆಟ್ಟಿ ಆಹ್ವಾನ ಕೊಟ್ಟಿಲ್ಲ ಎನ್ನಲಾಗಿದೆ.

Bigg Boss 15 Winner: ‘ಬಿಗ್ ಬಾಸ್’ ಗೆದ್ದ ತೇಜಸ್ವಿ ಪ್ರಕಾಶ್‌ಗೆ ಸಿಕ್ಕ ಬಂಪರ್ ಬಹುಮಾನವೇನು?
ತೇಜಸ್ವಿ ಪ್ರಕಾಶ್ ವಿರುದ್ಧ ಕೆಂಡ
‘ಬಿಗ್ ಬಾಸ್ 15’ ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್ ಹಾಗೂ ಶಮಿತಾ ಶೆಟ್ಟಿ ಮಧ್ಯೆ ಎಲ್ಲವೂ ಸರಿಯಿರಲಿಲ್ಲ. ಶಮಿತಾ ಶೆಟ್ಟಿಗೆ ತೇಜಸ್ವಿ ಪ್ರಕಾಶ್ ‘ಆಂಟಿ’ ಎಂದು ಕರೆದಿದ್ದರು, ಏಜ್ ಶೇಮ್ ಮಾಡಿದ್ದರು. ಇದೇ ಕಾರಣಕ್ಕೆ ಶಮಿತಾ ಶೆಟ್ಟಿ ಹಾಗೂ ತೇಜಸ್ವಿ ಪ್ರಕಾಶ್ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿತ್ತು.

ಶಮಿತಾ ಶೆಟ್ಟಿಯ ವಯಸ್ಸನ್ನು ತೇಜಸ್ವಿ ಪ್ರಕಾಶ್ ಹಂಗಿಸಿದ್ದು ಶಿಲ್ಪಾ ಶೆಟ್ಟಿ ಮತ್ತು ಕುಟುಂಬಸ್ಥರಿಗೆ ನೋವುಂಟು ಮಾಡಿದೆ. ತೇಜಸ್ವಿ ಪ್ರಕಾಶ್ ಅವರನ್ನ ಕಂಡ್ರೆ ಶಮಿತಾ ಶೆಟ್ಟಿ ಫ್ಯಾಮಿಲಿ ಕೆಂಡಕಾರುತ್ತಿದ್ದಾರೆ. ಹೀಗಾಗಿ, ಶಮಿತಾ ಶೆಟ್ಟಿ ಬರ್ತ್‌ಡೇ ಪಾರ್ಟಿಗೆ ತೇಜಸ್ವಿ ಪ್ರಕಾಶ್ ಮತ್ತು ಬಾಯ್‌ಫ್ರೆಂಡ್ ಕರಣ್ ಕುಂದ್ರಾಗೆ ಆಹ್ವಾನ ನೀಡಿಲ್ಲ ಎಂಬ ಗುಸುಗುಸು ಬಿಟೌನ್‌ನಲ್ಲಿ ಹಬ್ಬಿದೆ.

Bigg Boss 15 Winner Tejasswi Prakash: ಯಾರೀ ತೇಜಸ್ವಿ ಪ್ರಕಾಶ್?
ಶಿಲ್ಪಾ ಶೆಟ್ಟಿ ಗರಂ
‘’ಶಮಿತಾ ಶೆಟ್ಟಿ ಆಂಟಿ ತರಹ ಕಾಣುತ್ತಾಳಾ? ನನ್ನ ತಂಗಿಯಾಗಲಿ, ಬೇರೆ ಯಾರೇ ಆಗಲಿ.. ಓರ್ವ ಹೆಣ್ಣು ಮತ್ತೋರ್ವ ಹೆಣ್ಣನ್ನು ಕೀಳಾಗಿ ಕಾಣುವುದು ಆಕೆಯ ದೌರ್ಬಲ್ಯದ ಸಂಕೇತ ಎಂಬುದನ್ನು ನಾನು ನಂಬುತ್ತೇನೆ. ಇದನ್ನ ನಾನು ಎಂದಿಗೂ ಬೆಂಬಲಿಸುವುದಿಲ್ಲ. ಅದರಲೂ ತೇಜಸ್ವಿ ಪ್ರಕಾಶ್ ಹೇಳಿದ ರೀತಿಯನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ನಾನು ಮತ್ತು ಶಮಿತಾ ಈ ರೀತಿ ಇನ್ನೊಬ್ಬರಿಗೆ ಯಾವತ್ತೂ ಹೇಳುವುದಿಲ್ಲ. ಈ ವಿಷಯದಲ್ಲಿ ನಮ್ಮ ತಂದೆ-ತಾಯಿ ತುಂಬಾ ಸ್ಟ್ರಿಕ್ಟ್’’ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುವಾಗ ಶಿಲ್ಪಾ ಶೆಟ್ಟಿ ಹೇಳಿದ್ದರು.

ರಾಷ್ಟ್ರೀಯ ವಾಹಿನಿಯಲ್ಲಿ ಸಲ್ಮಾನ್ ಖಾನ್‌ಗೆ ಮುಖಕ್ಕೆ ಹೊಡೆದಂತೆ ಮಾತನಾಡಿದ ನಟಿ ತೇಜಸ್ವಿ ಪ್ರಕಾಶ್
ತೇಜಸ್ವಿ ಪ್ರಕಾಶ್
‘ಬಿಗ್ ಬಾಸ್’ ಮನೆಯಲ್ಲಿದ್ದಷ್ಟು ಕಾಲ ವಾದ-ವಿವಾದಗಳಿಂದ ಹಾಗೂ ಕರಣ್ ಕುಂದ್ರಾ ಜೊತೆಗಿನ ಲವ್ವಿ ಡವ್ವಿಯಿಂದ ಸದ್ದು ಮಾಡಿದ್ದ ತೇಜಸ್ವಿ ಪ್ರಕಾಶ್ ‘ಬಿಗ್ ಬಾಸ್ 15’ ವಿನ್ನರ್ ಆಗಿ ಹೊರಹೊಮ್ಮಿದರು. ಪ್ರತೀಕ್ ಸೆಹಜ್‌ಪಾಲ್ ಮೊದಲನೇ ರನ್ನರ್ ಅಪ್, ಕರಣ್ ಕುಂದ್ರಾ ಸೆಕೆಂಡ್ ರನ್ನರ್ ಅಪ್, ಶಮಿತಾ ಶೆಟ್ಟಿ ಮೂರನೇ ರನ್ನರ್ ಅಪ್ ಸ್ಥಾನ ಪಡೆದರು.



Read more

[wpas_products keywords=”deal of the day party wear dress for women stylish indian”]