Karnataka news paper

Budget 2022: ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸೇವಾ ಹಬ್‌ಗಳಲ್ಲಿ ರಾಜ್ಯಗಳಿಗೆ ಪಾಲುದಾರಿಕೆ


ಹೊಸದಿಲ್ಲಿ: ಉದ್ಯಮಶೀಲತೆಯ ಅಭಿವೃದ್ಧಿ ಮತ್ತು ಸೇವಾ ಹಬ್‌ಗಳಲ್ಲಿ ರಾಜ್ಯಗಳನ್ನು ಪಾಲುದಾರರನ್ನಾಗಿ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆಯನ್ನು ಹೊಸ ಶಾಸನದ ಮೂಲಕ ಬದಲಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಂಸತ್‌ನಲ್ಲಿ ಮಂಗಳವಾರ ಬಜೆಟ್ ಮಂಡನೆ ಮಾಡಿದ ಅವರು, ಈ ಹೊಸ ಕಾಯ್ದೆಯು ಹಾಲಿ ಇರುವ ಎಲ್ಲ ದೊಡ್ಡ ಕೈಗಾರಿಕೆಗಳು ಮತ್ತು ಹೊಸ ಕೈಗಾರಿಕಾ ಸಂಸ್ಥೆಗಳು ಲಭ್ಯವಿರುವ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ರಫ್ತಿನ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲಿದೆ ಎಂದು ಹೇಳಿದರು.

ಸಶಸ್ತ್ರ ಪಡೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಯೋಜನೆಗೆ ಆದ್ಯತೆ ನೀಡಿದೆ. ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅನುದಾನದ ಘೋಷಣೆ ಮಾಡಿಲ್ಲ. ಆದರೆ ರಕ್ಷಣಾ ವಿಭಾಗಗಳಿಗೆ ಅಗತ್ಯ ಸಾಮಗ್ರಿಗಳ ಆಮದು ಕಡಿಮೆ ಮಾಡುವ ಹಾಗೂ ಭಾರತದಲ್ಲಿಯೇ ತಯಾರಿಸುವ ಪರಿಕಲ್ಪನೆಯಡಿ ಸ್ವದೇಶಿ ತಯಾರಿಕೆಗೆ ಒತ್ತು ನೀಡುವ ಉದ್ದೇಶವನ್ನು ಪ್ರಸ್ತಾಪಿಸಿದ್ದಾರೆ.

‘ನಮ್ಮ ಸರ್ಕಾರವು ಶಸ್ತ್ರಾಸ್ತ್ರ ಪಡೆಗಳ ಸಾಮಗ್ರಿಗಳ ಖರೀದಿಯಲ್ಲಿ ಆಮದುಗಳನ್ನು ತಗ್ಗಿಸಲು ಮತ್ತು ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡಲು ಬದ್ಧವಾಗಿದೆ. 2021-22ರಲ್ಲಿ ಶೇ 58ರಷ್ಟಿದ್ದ ದೇಶಿ ಕೈಗಾರಿಕೆಯ ಬಂಡವಾಳ ಖರೀದಿಯ ಪ್ರಮಾಣವನ್ನು 2022-23ರಲ್ಲಿ ಶೇ 68ಕ್ಕೆ ಹೆಚ್ಚಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ತೆರೆದುಕೊಳ್ಳಲಿದೆ. ಶೇ 25ರಷ್ಟು ರಕ್ಷಣಾ ಆರ್‌ & ಡಿ ಬಜೆಟ್ ಅನ್ನು ಮೀಸಲಿಡಲಾಗುತ್ತದೆ. ಡಿಆರ್‌ಡಿಒ ಮತ್ತು ಇತರೆ ಸಂಸ್ಥೆಗಳ ಜತೆಗೆ ಎಸ್‌ಪಿವಿ ಮಾದರಿಯಲ್ಲಿ ಸಹಯೋಗ ಹೊಂದುವ ಮೂಲಕ ಸೇನಾ ವೇದಿಕೆ ಮತ್ತು ಸಾಮಗ್ರಿಗಳ ವಿನ್ಯಾಸ ಹಾಗೂ ಅಭಿವೃದ್ಧಿಯ ಕಾರ್ಯಗಳನ್ನು ನಡೆಸುವಂತೆ ಖಾಸಗಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತದೆ.

ವ್ಯಾಪಕ ಪ್ರಮಾಣದ ಪರೀಕ್ಷೆಗಳು ಮತ್ತು ಪ್ರಮಾಣೀಕರಣ ಅಗತ್ಯಗಳನ್ನು ತಲುಪಲು ಸ್ವತಂತ್ರ ನೋಡೆಲ್ ಕೇಂದ್ರ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.



Read more

[wpas_products keywords=”deal of the day sale today offer all”]