Source : PTI
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಫೈನಲ್ ನಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಚಿನ್ನದ ಪದಕ ವಂಚಿತರಾಗಿದ್ದಾರೆ.
ಭಾನುವಾರ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಸಿಂಧು ದಕ್ಷಿಣ ಕೊರಿಯಾದ ಆನ್ ಸೆಯೊಂಗ್ ವಿರುದ್ಧ 21-16, 21-12 ಸೆಟ್‌ಗಳಿಂದ ಸೋತರು. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಆದರೆ ಅಂದಿನಿಂದ ಆಕೆಗೆ ಯಾವುದೇ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಸೆಯಾಂಗ್ ಈ ಹಿಂದೆ ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರು ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರನ್ನು ಸೋಲಿಸಿದ್ದರು. ಸಿಂಧು ಈ ಟೂರ್ನಿಯಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದರು. ಅವರು 2018 ರಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ.