Online Desk
ಮಸ್ಕತ್: ಗೋಲ್‌ಕೀಪರ್ ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ಸೋಮವಾರ ಚೀನಾ ವಿರುದ್ಧ 7-1 ಅಂತರದ ಭರ್ಜರಿ ಜಯ ಗಳಿಸಿ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ಗೆ ಪಾದಾರ್ಪಣೆ ಮಾಡಿದೆ.
ಎಫ್‌ಐಎಚ್ ಹಾಕಿ ಪ್ರೊ ಲೀಗ್ 2021-22(ಮಹಿಳೆಯರು) ಪ್ರಸ್ತುತ ಒಮಾನ್‌ನ ಮಸ್ಕತ್ ನಲ್ಲಿ ನಡೆಯುತ್ತಿದೆ. ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತವು ಚೀನಾವನ್ನು ಸೋಲಿಸಿದ ಕೆಲವು ದಿನಗಳ ನಂತರ ಈಗ ಮತ್ತೆ ಚೀನಾದ ವಿರುದ್ಧ ಭಾರತ 7-1 ಅಂತರದಲ್ಲಿ ಗೆಲುವು ಪಡೆದುಕೊಂಡಿದೆ. ಜನವರಿ 29 ರಂದು ಕೊರಿಯಾ ವಿರುದ್ಧ ಕಂಚಿನ ಪದಕ ಪಡೆದಿದ್ದ ಮಹಿಳಾ ತಂಡ ಚೀನಾ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿದ್ದರು.
ಸೋಮವಾರದ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಪಂದ್ಯದ ವೇಳೆ, ನವನೀತ್ ಕೌರ್ ಕೇವಲ ಐದು ನಿಮಿಷದೊಳಗೆ ಮೊದಲ ಗೋಲು ಗಳಿಸುವ ಮೂಲಕ ಪಂದ್ಯದ ಅಂಕಪಟ್ಟಿಯನ್ನು ತೆರೆದರು. ಪಂದ್ಯದ 10ನೇ ನಿಮಿಷದಲ್ಲಿ ಭಾರತದ ನಾಯಕಿ ಸವಿತಾ ಪೂನಿಯಾ ಸೂಪರ್ ಸೇವ್ ಮಾಡಿ ಪೆನಾಲ್ಟಿ ಕಾರ್ನರ್ ಅನ್ನು ಉಳಿಸುವ ಮೂಲಕ ಚೀನಾದ ವನಿತೆಯರು ಮೊದಲ ಗೋಲ್ ನಿಂದ ವಂಚಿತರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಮೊದಲ ಕ್ವಾರ್ಟರ್ ಅಂತ್ಯಗೊಳ್ಳುವ ಮೊದಲು ಅಂದರೆ 12ನೇ ನಿಮಿಷಕ್ಕೆ ನೇಹಾ ಅವರ ಆಟದೊಂದಿಗೆ 0:2 ಅಂತರದಲ್ಲಿ ಆಟ ಮುಕ್ತಾಯಗೊಂಡಿತು. 23ನೇ ನಿಮಿಷದಲ್ಲಿ ಮೊದಲಾರ್ಧ ಮುಗಿದರೆ, 40ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಅವರ ಪ್ರಯತ್ನದಿಂದ ಭಾರತದ ಪಟ್ಟಿಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. ಆದರೆ ೪೩ನೇ ನಿಮಿಷದಲ್ಲಿ ಚೀನಾವು ಮೊದಲ ಗೋಲು ಬಾರಿಸುವ ಮೂಲಕ ಭಾರತದ ಮೇಲೆ ಸೇಡು ತೀರಿಸಿಕೊಂಡಿತ್ತು. ಇಲ್ಲಿಗೆ ಭಾರತ 3:1 ಅಂತರದಲ್ಲಿ ಆಟ ಮುಂದುವರೆದಿತ್ತು.
ಪಂದ್ಯದ ಅಂತಿಮ ಕ್ವಾರ್ಟರ್ ನಲ್ಲಿ, ಶರ್ಮಿಳಾ ದೇವಿಯವರ ಶಾಂತ ಮತ್ತು ಸಂಯೋಜಿತ ಪ್ರಯತ್ನದಿಂದ ಭಾರತ 47ನೇ ನಿಮಿಷದಲ್ಲಿ ನಾಲ್ಕನೇ ಗೋಲು ಗಳಿಸಿತು. ನಂತರದ ನಿಮಿಷದಲ್ಲಿ ಶರ್ಮಿಳಾ ಎರಡನೇ ಗೋಲು ಗಳಿಸಿ ಭಾರತಕ್ಕೆ 5ನೇ ಗೋಲು ಸಂಪಾದಿಸಿಕೊಟ್ಟರು. ಗುರ್ಜಿತ್ ಕೌರ್ ಕೂಡ 50ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಸುಶೀಲಾ 52ನೇ ನಿಮಿಷದಲ್ಲಿ ಭಾರತಕ್ಕೆ ಏಳನೇ ಗೋಲು ತಂದುಕೊಟ್ಟರು.
ಫೆಬ್ರವರಿ 1 ರಂದು ನಡೆಯಲಿರುವ ಟೂರ್ನಿಯಲ್ಲಿ ಭಾರತ ಮತ್ತು ಚೀನಾ ಎರಡನೇ ಬಾರಿ ಮುಖಾಮುಖಿಯಾಗಲಿವೆ.
Read more…
[wpas_products keywords=”deal of the day sports items”]