ಬಿ-ಟೌನ್ ಲವ್‌ಬರ್ಡ್‌ಗಳು ಸಾಂಕ್ರಾಮಿಕ ಸಮಯದಲ್ಲಿ ಗುಟ್ಟುಗುಟ್ಟಾಗಿ ಸದ್ದಿಲ್ಲದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೋವಿಡ್ 19ರ ನಿರ್ಬಂಧಗಳಿಂದಾಗಿ ತಮ್ಮ ವಿವಾಹ ಮತ್ತು ಆರತಕ್ಷತೆಯನ್ನು ಅದ್ದೂರಿಯಾಗಿ ಆಚರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕುಟುಂಬದವರ ಸಮ್ಮುಖದಲ್ಲಿ, ಕೆಲವೇ ಜನರ ಮುಂದೆ ಮದುವೆ ಮಾಡಿಕೊಂಡಿದ್ದ ಈ ಜೋಡಿಗಳು ತಮ್ಮ ಬಂಧುಗಳು, ಆತ್ಮೀಯರು ಮತ್ತು ಸಿನಿ ಉದ್ಯಮದ ತಾರಾ ಸ್ನೇಹಿತರನ್ನು ಆಹ್ವಾನಿಸಿ ವಿವಾಹ ಮಹೋತ್ಸವದ ದೊಡ್ಡ ಸಂಭ್ರಮವನ್ನು ಆಚರಿಸಲು ಬಯಸಿರುವುದರಿಂದ ತಮ್ಮ ಮದುವೆ ಆರಕ್ಷತೆಯನ್ನು ಮುಂದೂಡಿದ್ದಾರೆ. ಇನ್ನು ಕೆಲ ತಾರೆಯರಿಗೆ ತಮ್ಮ ಮದುವೆ ಆರತಕ್ಷತೆ ಹಮ್ಮಿಕೊಳ್ಳಲು ಸಾಧ್ಯವೇ ಆಗಿಲ್ಲ. ಇಂತಹ ಜೋಡಿಗಳ ವಿವರ ಇಲ್ಲಿದೆ:
ಮೌನಿ ರಾಯ್
ಇತ್ತೀಚಿಗೆ ಗೋವಾದಲ್ಲಿನಟಿ ಮೌನಿ ರಾಯ್ ದುಬೈ ಮೂಲದ ಬಿಸ್ನೆಸ್ ಮ್ಯಾನ್ ಸೂರಜ್ ನಂಬಿಯಾರ್‌ರನ್ನು ಮದುವೆಯಾದರು. ಮದುವೆಯಲ್ಲಿ ಭಾಗಿಯಾಗಲು ಕೇವಲ 50 ಮಂದಿಗೆ ಮಾತ್ರ ಅವಕಾಶವಿತ್ತು. ಮದುವೆ ನಂತರ ಮುಂಬೈಯಲ್ಲಿ ಎರಡು ದಿನಗಳ ಅದ್ಧೂರಿ ಆರತಕ್ಷತೆ ಸಂಭ್ರಮ ಕೂಡ ಆಯೋಜನೆಯಾಗಿತ್ತು. ಪ್ಯಾಂಡಮಿಕ್ ನಿರ್ಬಂಧಗಳಿಂದಾಗಿ ಅದು ರದ್ದಾಗಿದೆ ಎಂದು ವರದಿಯಾಗಿದೆ. ಹಾಗಾಗಿ ನವದಂಪತಿ ತಮ್ಮ ಮದುವೆ ಆರಕ್ಷತೆಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ.
ವರುಣ್ ಧವನ್

ವರುಣ್ ಧವನ್ ಮತ್ತು ನತಾಶಾ ದಲಾಲ್ ಇತ್ತೀಚಿಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಲಾಕ್‌ಡೌನ್‌ನಿಂದಾಗಿ ತಮ್ಮ ಮದುವೆಯನ್ನು ಹಲವು ಬಾರಿ ಮುಂದೂಡಿದ ದಂಪತಿ ಅಂತಿಮವಾಗಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಅಲಿಬಾಗ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು. ಅನೇಕ ವರ್ಷಗಳಿಂದ ವರುಣ್, ನತಾರಾ ಪ್ರೀತಿ ಮಾಡುತ್ತಿದ್ದರೂ ಕೂಡ ಅಷ್ಟಾಗಿ ಹೇಳಿಕೊಂಡಿರಲಿಲ್ಲ. ಇವರ ಮದುವೆಯಲ್ಲಿ ತುಂಬ ಕಡಿಮೆ ಮಂದಿ ಭಾಗಿಯಾಗಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಿರ್ಬಂಧಗಳು ಮುಂದುವರಿದ ಕಾರಣ ಚಿತ್ರೋದ್ಯಮದ ಸ್ನೇಹಿತರಿಗಾಗಿ ಬಾಲಿವುಡ್ ಶೈಲಿಯ ಭವ್ಯವಾದ ಪಾರ್ಟಿಯನ್ನು ಆಯೋಜಿಸಲು ಈವರೆಗೂ ಇವರಿಗೆ ಸಾಧ್ಯವಾಗಿಲ್ಲ. ಅಂದಹಾಗೆ ಖಾಸಗಿ ಜೀವನದ ಬಗ್ಗೆ ವರುಣ್ ಎಲ್ಲಿಯೂ ಹೇಳಿಕೊಳ್ಳೋದಿಲ್ಲ.
ಕಾಜಲ್ ಅಗರ್ವಾಲ್

ಕಾಜಲ್ ಅಗರ್ವಾಲ್ ಮದುವೆಯಾಗಿ ಸಂತೋಷದಿಂದ ಇದ್ದಾರೆ ಮತ್ತು ಪ್ರಸ್ತುತ ಪತಿ ಗೌತಮ್ ಕಿಚ್ಲು ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟನೆಯಿಂದ ದೂರವಿರುವ ಕಾಜಲ್ ಮಗು, ಕುಟುಂಬದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅಕ್ಟೋಬರ್ 30ರಂದು ಮುಂಬೈಯಲ್ಲಿ ಕಡಿಮೆ ಜನರ ಎದುರಿಗೆ ಸತಿಪತಿಗಳಾದ ಈ ಜೋಡಿ ತಮ್ಮ ಸಂತೋಷ ಹಂಚಿಕೊಳ್ಳಲು ಕುಟುಂಬ ಮತ್ತು ಚಿತ್ರರಂಗದ ಸ್ನೇಹಿತರಿಗಾಗಿ ಹೈದರಾಬಾದ್ ಮತ್ತು ಚೆನ್ನೈಯಲ್ಲಿ ಎರಡು ಅದ್ಧೂರಿ ವಿವಾಹ ಆರತಕ್ಷತೆಗಳನ್ನು ಆಯೋಜಿಸಲು ಯೋಜಿಸಿದ್ದರು ಎಂದು ವರದಿಯಾಗಿದೆ. ಆದರೆ ಲಾಕ್‌ಡೌನ್ ಮತ್ತು ನಿರ್ಬಂಧಗಳ ಕಾರಣ, ತಮ್ಮ ಅದ್ಧೂರಿ ಪಾರ್ಟಿಗಳನ್ನುಆಯೋಜಿಸಲು ದಂಪತಿಯಿಂದ ಸಾಧ್ಯವಾಗಲಿಲ್ಲ.
ಅಂಕಿತಾ ಲೋಖಂಡೆ

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಡಿಸೆಂಬರ್ 14ರಂದು ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಅಂಕಿತಾ ಲೋಖಂಡೆ ದಶಕಗಳಿಂದ ಬಾಲಿವುಡ್‌ನ ಕಿರುತೆರೆಯಲ್ಲಿ ಬ್ಯುಸಿಯಿದ್ದಾರೆ. ಮೂರು ವರ್ಷಗಳಿಗೂ ಅಧಿಕ ಕಾಲ ವಿಕ್ಕಿ ಜೈನ್ ಜೊತೆ ಡೇಟ್ ಮಾಡಿದ್ದ ಅಂಕಿತಾ ಅದ್ದೂರಿಯಾಗಿ ಸಂಗೀತ್, ಮೆಹೆಂದಿ, ಮದುವೆ ಸಮಾರಂಭ ಮಾಡಿಕೊಂಡರು. ಮದುವೆಯಲ್ಲಿ ಅದ್ಭುತವಾಗಿ ಕಲ್ಯಾಣಮಂಟಪ ಮಾಡಲಾಗಿತ್ತು. ಅಂಕಿತಾ ದುಬಾರಿ ಸೀರೆ, ಉಡುಗೆ ಉಟ್ಟು ಮದುವೆಯ ಎಲ್ಲ ಕಾರ್ಯಕ್ರಮದಲ್ಲಿಯೂ ಕಂಗೊಳಿಸಿದ್ದರು. ಇಬ್ಬರೂ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಲು ಬಯಸಿದ್ದರು. ಕಟ್ಟುನಿಟ್ಟಿನ ಮಾರ್ಗಸೂಚಿಗೆ ಬದ್ಧರಾಗಿರುವ ಅವರು ಆರತಕ್ಷತೆಯನ್ನು ಮುಂದೂಡಿದ್ದು, ನಂತರ ದೊಡ್ಡ ಪಾರ್ಟಿ ಆಯೋಜಿಸುವ ನಿರೀಕ್ಷೆಯಲ್ಲಿದ್ದಾರೆ.
Mouni Roy Marriage: ದೀರ್ಘಕಾಲದ ಗೆಳೆಯನ ಜೊತೆ ನಟಿ ಮೌನಿ ರಾಯ್ ವಿವಾಹ
ಕತ್ರಿನಾ ಕೈಫ್

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋರ್ಟ್ ಬರ್ವಾರಾದಲ್ಲಿ ಡಿಸೆಂಬರ್‌ನಲ್ಲಿ ವಿವಾಹವಾದರು. ಅವರ ಮನೆಯವರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಈ ಮದುವೆಯಲ್ಲಿ ಹಾಜರಿದ್ದರು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್, ಶಾರುಖ್ ಖಾನ್ ಸೇರಿದಂತೆ ಸ್ಟಾರ್ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು ಕೂಡ ಇವರ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಕೇವಲ 150 ಅತಿಥಿಗಳಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಮದುವೆಯ ನಂತರ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಉದ್ಯಮದ ಎಲ್ಲಾ ಸ್ನೇಹಿತರಿಗೆ, ಆತ್ಮೀಯರಿಗೆ ವೈಯಕ್ತಿಕವಾಗಿ ಪತ್ರವನ್ನು ಕಳುಹಿಸಿದ್ದಾರೆ. ಕೋವಿಡ್ 19ರ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ತಮ್ಮ ಮದುವೆ ಆರಕ್ಷತೆ ನಡೆಯಲಿದೆ ಎಂದು ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
Mouni Roy Marriage: ದೀರ್ಘಕಾಲದ ಗೆಳೆಯನ ಜೊತೆ ನಟಿ ಮೌನಿ ರಾಯ್ ವಿವಾಹ
Read more
[wpas_products keywords=”deal of the day party wear dress for women stylish indian”]