ಹೈಲೈಟ್ಸ್:
- 13 ಸೇನಾಧಿಕಾರಿಗಳ ವಿಮೆ ಕೇವಲ 30 ನಿಮಿಷದಲ್ಲಿ ಇತ್ಯರ್ಥ
- ಹೆಲಿಕಾಪ್ಟರ್ ದುರಂತದಲ್ಲಿ ಮಣಿದಿದ್ದ ವೀರ ಸೇನಾನಿಗಳು
- ಗುಂಪು ಅಪಘಾತ ವಿಮೆ ಅಡಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುವವರಿಗೆ 30 ಲಕ್ಷ ರೂ.
ನ್ಯಾಷನಲ್ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ಬ್ರಿಗೇಡಿಯರ್ ಎಲ್.ಎಸ್.ಲಿಡ್ಡೇರ್ ಹಾಗೂ ಮೂವರ ವಿಮೆ ಹಣವನ್ನು ಕೇವಲ ಒಂದು ಗಂಟೆಯಲ್ಲಿ ಪಾವತಿಸಿದೆ. ಈ ಎರಡೂ ಸಾಮಾನ್ಯ ವಿಮಾ ಸಂಸ್ಥೆಗಳು ಕೇಂದ್ರ ಸರಕಾರದ ಒಡೆತನದಲ್ಲಿವೆ. ”ನಮ್ಮ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ ಎಂದು ಡಿ.10ರಂದು ಬ್ಯಾಂಕ್ ಪ್ರಾಥಮಿಕ ಮಾಹಿತಿ ನೀಡಿತು. ಮಾಹಿತಿ ಬಂದ ಅರ್ಧ ಗಂಟೆಯೊಳಗೆ ಅತ್ಯಂತ ಕಡಿಮೆ ದಾಖಲೆಗಳನ್ನು ಪಡೆದು ಕ್ಲೈಮ್ ಇತ್ಯರ್ಥಪಡಿಸಲಾಗಿದೆ,” ಎಂದು ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತ್ಯಜಿತ್ ತ್ರಿಪಾಠಿ ತಿಳಿಸಿದ್ದಾರೆ.
ಜ.ರಾವತ್ ಹಾಗೂ ಇತರ ಎಂಟು ಮಂದಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಹಾಗೂ ಇಬ್ಬರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಗುಂಪು ಅಪಘಾತ ವಿಮೆ ಹೊಂದಿದ್ದರು. ಗುಂಪು ಅಪಘಾತ ವಿಮೆ ಅಡಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುವವರಿಗೆ 30 ಲಕ್ಷ ರೂ. ಮತ್ತು ವಾಯು ಪಡೆಯಲ್ಲಿ ಕಾರ್ಯನಿರ್ವಹಿಸುವವರಿಗೆ 40 ಲಕ್ಷ ರೂ. ವಿಮಾ ರಕ್ಷಣೆ ನೀಡಲಾಗುತ್ತದೆ.
IAF Chopper Crash: ರಕ್ಷಣಾ ಕಾರ್ಯಕ್ಕೆ ನೆರವು ನೀಡಿದ ಹಳ್ಳಿಯನ್ನು ದತ್ತು ಪಡೆದ ಸೇನೆ
ರಾವತ್ ಸಾವು ಅವಹೇಳನ ಪ್ರಕರಣ: ಫೇಸ್‌ಬುಕ್‌ಗೆ ಪತ್ರ
ಮಂಗಳೂರು : ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸಿಡಿಎಸ್ ಜ| ಬಿಪಿನ್ ರಾವತ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಖಾತೆದಾರರ ಮಾಹಿತಿ ಪತ್ತೆಗೆ ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಫೇಸ್‌ಬುಕ್ ಖಾತೆಗಳಿಂದ ಜ| ಬಿಪಿನ್ ರಾವತ್ ಅವರ ಕುರಿತು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ತನಿಖೆಯನ್ನು ನಡೆಸಲಾಗಿದ್ದು, ಕೆಲವು ನಕಲಿ ಐಡಿ ಎಂಬುವುದು ಪತ್ತೆಯಾಗಿದೆ. ಇದರ ಮೂಲ ಪತ್ತೆಹಚ್ಚಿ ಮಾಹಿತಿ ನೀಡುವಂತೆ ಫೇಸ್‌ಬುಕ್ ಸಂಸ್ಥೆಗೆ ಬರೆಯಲಾಗಿದೆ. ಇಬ್ಬರು ಆರೋಪಿಗಳ ಪೈಕಿ ಒಬ್ಬ ಬೆಂಗಳೂರು, ಮತ್ತೊಬ್ಬ ಕಾರ್ಕಳದವನೆಂದು ಮಾಹಿತಿ ಲಭಿಸಿದ್ದು, ಅವರನ್ನು ಶೀಘ್ರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.