Karnataka news paper

ಈ ವರ್ಷ ರಾಜ್ಯ ಸರ್ಕಾರ ಮಾಡಿರುವ ಒಟ್ಟು ಸಾಲ ಬರೋಬ್ಬರಿ ₹96,509 ಕೋಟಿ!; ವಿಧಾನಸಭೆಯಲ್ಲಿ ಬಹಿರಂಗ


ಬೆಳಗಾವಿ: ವರ್ಷಗಳು ಕಳೆದಂತೆ ಸರಕಾರದ ಋಣಭಾರವೂ ಹೆಚ್ಚುತ್ತಿದ್ದು, 2020-21ನೇ ಸಾಲಿನಲ್ಲಿ ರಾಜ್ಯ ಸರಕಾರದ ಒಟ್ಟು ಸಾಲ ಹಾಗೂ ಋಣಭಾರ ಪ್ರಮಾಣಕ್ಕೆ ₹96,509 ಕೋಟಿ ರೂ. ಸೇರ್ಪಡೆಯಾಗಿದೆ.

ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಹಣಕಾಸು ಲೆಕ್ಕಪತ್ರ ಸಂಬಂಧ ಮಹಾಲೇಖಪಾಲರ ವರದಿಯಲ್ಲಿಈ ಅಂಶ ದಾಖಲಾಗಿದೆ. 2020-21ನೇ ಸಾಲಿನಲ್ಲಿ ಮಾರ್ಚ್‌ 31ಕ್ಕೆ ಅಂತ್ಯಗೊಂಡಂತೆ, ರಾಜ್ಯ ಸರಕಾರ ಒಟ್ಟು ₹61,900 ಕೋಟಿ ರೂ. ಮಾರುಕಟ್ಟೆ ಸಾಲ ಪಡೆದಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಉಂಟಾಗಿದ್ದ ಆದಾಯದ ಕೊರತೆ ಸರಿದೂಗಿಸಲು ರಾಜ್ಯ ಸರಕಾರವು ಹೆಚ್ಚುವರಿ ಸಾಲ ಮಾಡಿದೆ. ಇದು ಒಟ್ಟಾರೆ ಸಾಲದ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ.
ಬಿಜೆಪಿ ಗೆಲುವಿನ ಓಟಕ್ಕೆ ಕಾಂಗ್ರೆಸ್‌ ಕಡಿವಾಣ; ಆಡಳಿತ ಪಕ್ಷಕ್ಕೆ ಬಹುಮತ ಸಾಧಿಸಿದ ಸಮಾಧಾನ
ಕೊರೊನಾದಿಂದ ಜಿಎಸ್‌ಟಿ ಆದಾಯದಲ್ಲೂ ಕೊರತೆಯಾಗಿತ್ತು. ಇದರ ಜತೆಗೆ ಕೇಂದ್ರ ಸರಕಾರವು ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಇದರಿಂದ ಸಾಲದ ಹೊರೆ 18 ಸಾವಿರ ಕೋಟಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಆದಾಯವೂ ಕುಸಿತವಾಗಿತ್ತು. ಇದು ಕೂಡ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯದ ಆದಾಯದ ಮೂಲಗಳಲ್ಲೂ ಕುಸಿತವಾಗಿದೆ. ಜಿಎಸ್‌ಟಿ 2019-20ರಲ್ಲಿ ₹42.147 ಕೋಟಿ ರೂ.ಗಳಿಂದ 2020-21ರಲ್ಲಿ ₹37.711 ಕೋಟಿ ರೂ.ಗಳಿಗೆ ಇಳಿದಿದೆ. ಸರಕಾರದ ವಿವಿಧ ಆದಾಯದ ಮೂಲಗಳಾದ ರಾಜ್ಯ ಅಬಕಾರಿ, ನೋಂದಣಿ ಶುಲ್ಕ ಹಾಗೂ ಇತರ ತೆರಿಗೆಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಸರಕಾರದ ಸಾಲವು ವರ್ಷದಲ್ಲಿ ₹96,509 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇದರಲ್ಲಿ ₹18,421 ಕೋಟಿ ರೂ. ಬಜೆಟ್‌ ಸಾಲವೂ ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ,
‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯ ₹446.72 ಕೋಟಿಯಲ್ಲಿ 79% ಹಣ ಮಾಧ್ಯಮ ಪ್ರಚಾರಕ್ಕೆ ಬಳಕೆ!
ರೈತರಿಗೆ 3 ಪಟ್ಟು ಹೆಚ್ಚು ಪರಿಹಾರ ಕೊಡಿ
ಬೆಳಗಾವಿ ರಾಜ್ಯದಲ್ಲಿ 3 ವರ್ಷದಿಂದ ನೆರೆ, ಭಾರೀ ಮಳೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ನೀಡುತ್ತಿರುವ ಪರಿಹಾರಕ್ಕಿಂತ 3 ಪಟ್ಟು ಹೆಚ್ಚು ಬೆಳೆ ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್‌ ನಿಯಮಾವಳಿಗೆ ತಿದ್ದುಪಡಿ ತರಧಿಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ನೆರೆ, ಮಳೆ ಹಾನಿ ಕುರಿತಂತೆ ನಿಯಮ 69ರಡಿ ಮಂಗಳವಾರ ಚರ್ಚೆ ನಡೆಸಿದ ಅವರು, ‘ಕಳೆದ ಏಪ್ರಿಲ್‌ನಿಂದೀಚೆಗೆ ಮೂರು ಬಾರಿ ಪ್ರವಾಹ, ಭಾರೀ ಮಳೆಯಾಗಿದೆ. ರೈತರ ಬೆಳೆಯೆಲ್ಲಾ ನಾಶವಾಗಿದ್ದು, ಡಿ.8ಕ್ಕೆ ಬೆಳೆ ನಷ್ಟ ಪರಿಹಾರ ಅರ್ಜಿ ಸ್ವೀಕಾರವು ಸ್ಥಗಿತಗೊಂಡಿದೆ. ಅಧಿಕಾರಿಗಳು ಬೆಳೆ ನಷ್ಟ ಸಮೀಕ್ಷೆ ನಿಲ್ಲಿಸಿದ್ದಾರೆ. ಕೂಡಲೇ ಬೆಳೆ ನಷ್ಟ ಸಮೀಕ್ಷೆ ನಡೆಸುವ ಜತೆಗೆ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿದರು.
ಕೆಂಪಡಕೆ ದರವನ್ನೂ ಮೀರಿದ ಚಾಲಿ ಬೆಲೆ; ಹಳೆ ಅಡಕೆಗೆ ಮಾರ್ಕೆಟ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!
ಸರಕಾರ ಎಚ್ಚರ ವಹಿಸಲಿ ‘ಹವಾಮಾನ ಬದಲಾವಣೆಯಾಗುತ್ತಿದ್ದು, 2030ರ ಹೊತ್ತಿಗೆ ರಾಗಿ, ಭತ್ತ, ಕಡಲೆ ಇತರ ಬೆಳೆಗಳ ಉತ್ಪಾದನೆ ಕುಸಿತವಾಗಲಿದೆ. ಹತ್ತಿ, ಜೋಳ, ಕಬ್ಬು ಉತ್ಪಾದನೆ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.



Read more