Karnataka news paper

ಚಿತ್ರಮಂದಿರಗಳ ಮೇಲಿನ ನಿರ್ಬಂಧ ತೆಗೆದರೆ ಫೆಬ್ರವರಿ-ಮಾರ್ಚ್‌ನಲ್ಲಿ ಬರಲಿದೆ ಚಿತ್ರಸಾಲು


ಫೆಬ್ರವರಿಯಲ್ಲಿ ಏಳೆಂಟು

ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ಶೇ. 100ರಷ್ಟು ಸೀಟು ತುಂಬಲು ಅನುಮತಿ ನೀಡಿದ ತಕ್ಷಣ ಏಳೆಂಟು ಸಿನಿಮಾಗಳು ಬಿಡುಗಡೆಯಾಗಲಿವೆ. ಫೆ.25ರಂದು ಶ್ರೀನಿ ತಮ್ಮ ‘ಓಲ್ಡ್‌ ಮಾಂಕ್‌’ ಬಿಡುಗಡೆ ಮಾಡುವುದಾಗಿ ಅನೌನ್ಸ್‌ ಮಾಡಿದ್ದಾರೆ. ಮುಂದಿನ ವಾರ ನಾಲ್ಕು ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ನಿರ್ಮಾಪಕರ ಪಾಲಿಗೆ ಚಿತ್ರಮಂದಿರಗಳೇ ಮೊದಲ ಆಯ್ಕೆ, ಒಟಿಟಿ ನಂತರ

‘ಏಕ್‌ ಲವ್‌ ಯಾ’ ಬಿಡುಗಡೆ ಶೀಘ್ರ

ಪ್ರೇಮ್‌ ನಿರ್ದೇಶನ ಮಾಡಿರುವ ‘ಏಕ್‌ ಲವ್‌ ಯಾ’ ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಈಗ ಸರ್ಕಾರ ನಿಯಮ ಸಡಿಲಿಕೆ ಮಾಡಿದ ತಕ್ಷಣ ರಿಲೀಸ್‌ ಮಾಡಲು ಪ್ರೇಮ್‌ ಎಲ್ಲಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫೆ. 24 ಅಥವಾ ಮಾರ್ಚ್ ಮೊದಲ ವಾರದಲ್ಲಿ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಅವರು ಯೋಚಿಸಿದ್ದಾರೆ. ಸದ್ಯದಲ್ಲೆ ರಿಲೀಸ್‌ ದಿನಾಂಕವನ್ನು ಪ್ರೇಮ್‌ ಅವರೇ ಅನೌನ್ಸ್‌ ಮಾಡಲಿದ್ದಾರೆ.

ಚಿತ್ರರಂಗದ ಬಗ್ಗೆ ಮತ್ತೆ ತಾತ್ಸಾರ: ನಾಯಕತ್ವದ ಕೊರತೆಯೇ ಇದಕ್ಕೆ ಕಾರಣ?

ಮಾರ್ಚ್‌ನಲ್ಲಿ ‘ಅವತಾರ ಪುರುಷ’

ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ‘ಅವತಾರ ಪುರುಷ’ ಸಹ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಮಾರ್ಚ್ ಮಧ್ಯದಲ್ಲಿಅಥವಾ ಕೊನೆಗೆ ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಯೋಚಿಸಿದ್ದಾರೆ.

ನೈಟ್ ಕರ್ಫ್ಯೂ, 50:50 ರೂಲ್ಸ್ ಕ್ಯಾನ್ಸಲ್ ಆದರೂ ಥಿಯೇಟರ್‌ಗಳಿಗೆ ಮುಂದುವರಿದ ನಿರ್ಬಂಧ!

ಆರ್‌ಆರ್‌ಆರ್‌, ವಿಕ್ರಾಂತ್‌ ರೋಣ

ರಾಜಮೌಳಿಯವರ ‘ಆರ್‌ಆರ್‌ಆರ್‌’ ಮತ್ತು ಸುದೀಪ್‌ರ ‘ವಿಕ್ರಾಂತ್‌ ರೋಣ’ ಸಿನಿಮಾಗಳ ಬಿಡುಗಡೆ ದಿನಾಂಕಕ್ಕಾಗಿ ಹಲವು ಸಣ್ಣ ಪುಟ್ಟ ಸಿನಿಮಾಗಳು ಕಾಯುತ್ತಿವೆ. ಅವರು ದಿನಾಂಕ ಘೋಷಣೆ ಮಾಡಿದ ತಕ್ಷಣ ತಮ್ಮ ಸಿನಿಮಾಗಳನ್ನು ರಿಲೀಸ್‌ ಮಾಡಲು ಮುಂದೆ ಬರುತ್ತಾರೆ. ಆದರೆ ಸದ್ಯದ ಮಾಹಿತಿ ಪ್ರಕಾರ, ‘ವಿಕ್ರಾಂತ್‌ ರೋಣ’ ಯಾವಾಗ ಬಿಡುಗಡೆ ಮಾಡಬೇಕು ಎನ್ನುವ ಬಗ್ಗೆ ಅವರಿನ್ನೂ ಯೋಚಿಸಿಲ್ಲ. ಒಂದು ವೇಳೆ ಇದ್ದಕ್ಕಿದ್ದ ಹಾಗೆ ಅನೌನ್ಸ್‌ ಮಾಡಿದರೆ ಬೇರೆ ಸಿನಿಮಾಗಳಿಗೂ ತೊಂದರೆಯಾಗುತ್ತದೆ.

ಕಾದು ನೋಡುವ ತಂತ್ರ

ಜಗ್ಗೇಶ್‌ ನಟನೆಯ ‘ತೋತಾಪುರಿ’ ಫೆಬ್ರವರಿ ಮಧ್ಯ ಭಾಗ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು. ಸತೀಶ್‌ ನೀನಾಸಂ ಅವರ ‘ಪೆಟ್ರೋಮ್ಯಾಕ್ಸ್‌’ ಮಾರ್ಚ್ 31ಕ್ಕೆ ರಿಲೀಸ್‌ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ನಡುವೆ ಯೋಗರಾಜ್‌ ಭಟ್‌ ಮತ್ತು ಗಣೇಶ್‌ ಕಾಂಬಿನೇಶನ್‌ನ ‘ಗಾಳಿಪಟ-2’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದೆ. ಆ ಸಿನಿಮಾ ತಂಡ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಒಟ್ಟಾರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸಿನಿಮಾಗಳು ಯಥೇಚ್ಛವಾಗಿ ಬಿಡುಗಡೆಯಾಗಲಿರುವುದು ನಿಜ.

‘ನಮ್ಮ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಜತೆಗೆ ಜನ ಹೇಗೆ ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಖುಷಿಯ ವಿಚಾರ ಎಂದರೆ ನಮ್ಮ ‘ಗಾಳಿಪಟ-2’ ಸಿನಿಮಾದ ಸ್ಯಾಟಲೈಟ್‌ ಹಕ್ಕು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ಸಿನಿಮಾ ಮೇಲೆ ಇನ್ನಷ್ಟು ನಂಬಿಕೆ ಬಂದಿದೆ’ ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ

‘ಅವತಾರ ಪುರುಷ’ ಸಿನಿಮಾಗಾಗಿ ಒಳ್ಳೆಯ ದಿನಾಂಕ ನೋಡುತ್ತಿದ್ದೇವೆ. ಮಾರ್ಚ್ ಮಧ್ಯದಲ್ಲಿ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮದು ಔಟ್‌ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌ ಸಿನಿಮಾ. ಎಲ್ಲರೂ ಬಂದು ನೋಡಬೇಕು. ಹಾಗಾಗಿ ಜನರಿಗಾಗಿ ನಾವು ಕಾಯುತ್ತೇವೆ’ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.



Read more

[wpas_products keywords=”deal of the day party wear dress for women stylish indian”]