The New Indian Express
ಶೃಂಗೇರಿ: ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಕ್ಕು ಪತ್ರಗಳಿಗೆ ಸಂಬಂಧಿಸಿದ ಹಗರಣ ಹಾಗೂ ವಿವಾದಗಳ ಪ್ರಕರಣದಲ್ಲಿ ಅಮಾನತುಗೊಂಡ ತಹಶೀಲ್ದಾರ್ ಅವರ ವಾಹನ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಮೂಲಕ ಹಗರಣ ಕಗ್ಗಂಟಾಗಿದೆ. ಗ್ರಾಮ ಲೆಕ್ಕಿಗ ಸಿದ್ದಪ್ಪ ಎಂಬಾತ ಫಲಾನುಭವಿಯೋರ್ವರಿಗೆ ಹಕ್ಕು ಪತ್ರ ನೀಡುವುದಕ್ಕಾಗಿ 60,000 ರೂಪಾಯಿ ಲಂಚ ಪಡೆದ ಹಿನ್ನೆಲೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಎಸಿಬಿಯಿಂದ ಬಂಧನಕ್ಕೊಳಗಾಗಿದ್ದರು.
ಇದು ಕೇವಲ ಲಂಚ ಪ್ರಕರಣ ಎಂದು ಭಾವಿಸಿದ್ದ ಪೊಲೀಸ್ ಅಧಿಕಾರಿಗಳಿಗೆ ತಹಶೀಲ್ದಾರ್ ಅಂಬುಜಾ ಹಾಗೂ ಇತರ ಹಿರಿಯ ಅಧಿಕಾರಿಗಳು ಹಗರಣವೊಂದರಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ.
ಅಂಬುಜಾ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದರು. ಈ ಬಳಿಕ ಸಿದ್ದಪ್ಪ ಹಾಗೂ ಅಂಬುಜಾ ಇಬ್ಬರೂ ಜಾಮೀನು ಪಡೆದು ಹೊರಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇಬ್ಬರನ್ನು ಅಮಾನತುಗೊಳಿಸಿತ್ತು. ಈಗ ಸತೀಶ್, ಶಿವಕುಮಾರ್, ಸಂದೀಪ್ ಎಂಬ ಮೂವರು ನೌಕರರು ನಾಪತ್ತೆಯಾಗಿದ್ದಾರೆ.
ತಾಲೂಕು ಕಚೇರಿಯಿಂದ ವಿತರಣೆ ಮಾಡಲಾಗಿದ್ದ 617 ಹಕ್ಕು ಪತ್ರಗಳು ನಕಲಿಯಾಗಿದ್ದು ಫಲಾನುಭವಿಗಳಿಗೆ ನೀಡಲಾಗಿದ್ದ ಅವು ಡೀಮ್ಡ್ ಅರಣ್ಯ ಹಾಗೂ ಗೋಮಾಳದ ಭೂಮಿಗೆ ಸೇರಿದ್ದು ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ, ಅನುಮಾನಾಸ್ಪದ ವ್ಯವಹಾರಗಳ ಕಡತಗಳು ತಾಲೂಕು ಕಚೇರಿಯಿಂದ ನಾಪತ್ತೆಯಾಗಿದೆ. ಸಹಾಯಕ ಆಯುಕ್ತರಾದ ಡಾ. ಹೆಚ್ಎಲ್ ನಾಗರಾಜ್ ಅವರು ಈ ಅಕ್ರಮಗಳು ಹಾಗೂ ನಾಪತ್ತೆಯಾಗಿರುವ ಕಡತಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದು, ಜಿಲ್ಲಾಧಿಕಾರಿ ಕೆಎನ್ ರಮೇಶ್ ಅವರಿಗೆ ವರದಿ ಸಲ್ಲಿಸಿದ್ದಾರೆ.
ಈ ನಡುವೆ ತಹಶೀಲ್ದಾರ್ ಅವರ ಬಳಿ ಕಾರು ಚಾಲಕನ ಕೆಲಸ ಮಾಡುತ್ತಿದ್ದ ಹೆಗ್ತೂರು ವಿಜೇತ್ (26) ಎಂಬಾತ ಆತ್ಮಹತ್ಯೆಗೆ ಶರಣಾಗಿರುವುದು ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಗರಣದಲ್ಲಿ ಆತನೂ ಶಾಮೀಲಾಗಿದ್ದನೇ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
Read more
[wpas_products keywords=”deal of the day”]