Karnataka news paper

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: ಹೊಸ ಹೂಡಿಕೆದಾರರಿಂದ ಆಗದಿರಲಿ ಪ್ರಮಾದ


 ಪ್ರಚೋದನಾತ್ಮಕ (ಹೈಪ್) ಷೇರುಗಳನ್ನೇ ಖರೀದಿಸುವುದು

ಪ್ರಚೋದನಾತ್ಮಕ (ಹೈಪ್) ಷೇರುಗಳನ್ನೇ ಖರೀದಿಸುವುದು

ಷೇರು ಮಾರುಕಟ್ಟೆ ಸಾಮಾನ್ಯವಾಗಿ ಭಾವಾತಿರೇಕ ಅಥವಾ ಪ್ರಚೋದನಾತ್ಮಕ ವಹಿವಾಟಿಗೆ ಸಾಕ್ಷಿಯಾಗುತ್ತಿರುತ್ತದೆ. ಇದು ಹೂಡಿಕೆದಾರರಲ್ಲಿ ಮನೆಮಾಡಿರುವ ಸಹಜ ನಂಬಿಕೆ, ವಾಸ್ತವವೂ ಹೌದು. ಯಾವುದೇ ಕಂಪನಿಯ ಷೇರಿಗೆ ಸಾಂಸ್ಥಿಕ ಹೂಡಿಕೆದಾರರಿಂದ ಅತಿಯಾದ ಬೇಡಿಕೆ ಸೃಷ್ಟಿಯಾದರೆ, ಅದನ್ನು ಪ್ರಚೋದನಾ (ಹೈಪ್)ಷೇರುಗಳು ಎನ್ನಲಾಗುತ್ತದೆ. ಯಾವುದೇ ಒಂದು ಕಂಪನಿ ಅಥವಾ ನಿಗಮ ಸ್ಥಿರವಾಗಿ ತನ್ನ ವಹಿವಾಟು ನಡೆಸುತ್ತಾ ಹೋದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸ್ಥಿರವಾಗಿ ಬೆಳೆಯುತ್ತಾ ನಡೆದರೆಷೇರು ಮಾರುಕಟ್ಟೆಯಲ್ಲಿ ಆ ಕಂಪನಿ ಬಗ್ಗೆ ಹೈಪ್ ಅಥವಾ ಭಾವತಿರೇಕ ಬೆಳೆಯಲು ಆರಂಭವಾಗುತ್ತದೆ. ಆಗ ದೀರ್ಘಕಾಲೀನ ಹೂಡಿಕೆದಾರರು ಇಂತಹ ಕಂಪನಿಯ ಮೌಲ್ಯ, ಲಾಭಾಂಶ ಮತ್ತು ಹೂಡಿಕೆಯ ಮೇಲಿನ ಲಾಭಾಂಶ ಹೆಚ್ಚುತ್ತಾ ಹೋಗುತ್ತದೆ ಎಂಬ ನಂಬಿಕೆ ಹೊಂದುತ್ತಾರೆ. ಆದರೆ ಹೊಸ ಹೂಡಿಕೆದಾರರ ಮನಸ್ಥಿತಿ ಮತ್ತು ಪರಿಸ್ಥಿತಿ ಈ ರೀತಿ ಇರುವುದಿಲ್ಲ.

 ಷೇರಿನ ಗತಿ ಅನುಕೂಲಕರ ಸ್ಥಿತಿಯಲ್ಲಿದ್ದಾಗ

ಷೇರಿನ ಗತಿ ಅನುಕೂಲಕರ ಸ್ಥಿತಿಯಲ್ಲಿದ್ದಾಗ

ಕಂಪನಿಯ ಬೆಳವಣಿಗೆ ಮತ್ತು ಹೂಡಿಕೆ ಮೇಲಿನ ರಿಟರ್ನ್ ಬಗ್ಗೆ ಹೂಡಿಕೆದಾರ ನಂಬಿಕೆ ಗಳಿಸಿದಾಗ, ಅವರು ಆ ಕಂಪನಿಯ ಷೇರುಗಳನ್ನು ತನ್ನದಾಗಿಸಿಕೊಳ್ಳಲು ಪ್ರೀಮಿಯಂ ಪಾವತಿಗೆ ಸಿದ್ಧರಾಗುತ್ತಾರೆ. ಷೇರಿನ ಗತಿ ಅನುಕೂಲಕರ ಸ್ಥಿತಿಯಲ್ಲಿದ್ದಾಗ, ಷೇರು ವ್ಯಾಪಾರಿಗಳು ಮತ್ತು ಅಲ್ಪಾವಧಿ ಹೂಡಿಕೆದಾರರಿಗೆ ಪ್ರಚೋದನೆ ಅಥವಾ ಹೈಪ್ ನಿರ್ಣಾಯಕ ಹಂತವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ, ಹೊಸ ಹೂಡಿಕೆದಾರರು ಬರೀ ಹೈಪ್ ಷೇರುಗಳ ಮೇಲೆಯೇ ಬಾಜಿ ಕಟ್ಟುವುದು ತಪ್ಪಾಗುತ್ತದೆ. ಏಕೆಂದರೆ, ಆಶಾವಾದ ಹೊರಹಾಕುವ, ಭರವಸೆ ನೀಡುವ ಎಲ್ಲಾ ಕಂಪನಿಗಳು ಅಥವಾ ನಿಗಮಗಳು ತಮ್ಮ ಭರವಸೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುವುದಿಲ್ಲ ಎಂಬುದನ್ನು ಹೊಸ ಹೂಡಿಕೆದಾರರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

 ಹೂಡಿಕೆ ಸಲಹೆಯ ಒಂದು ಭಾಗ

ಹೂಡಿಕೆ ಸಲಹೆಯ ಒಂದು ಭಾಗ

ಅಗ್ಗದ ಬೆಲೆಗೆ ಷೇರುಗಳ ಖರೀದಿಸುವುದು ಮತ್ತು ಹೆಚ್ಚಿನ ಬೆಲೆ ಸಿಕ್ಕಾಗ ಮಾರಾಟ ಮಾಡುವುದು ಹೂಡಿಕೆ ಸಲಹೆಯ ಒಂದು ಭಾಗವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಯಶಸ್ಸಿಗೆ ಇದು ಉತ್ತಮ ಮಾರ್ಗ. ಷೇರಿನ ಬೆಲೆ ಕುಸಿದಾಗ, ಹೆಚ್ಚಿನ ಹೂಡಿಕೆದಾರರು ಸಾಧ್ಯವಾದಷ್ಟು ಬೇಗ ಷೇರುಗಳನ್ನು ಮಾರಿ ತಲೆ ತೊಳೆದುಕೊಳ್ಳಲು ಬಯಸುತ್ತಾರೆ. ಆದರೆ ವಾಸ್ತವವೆಂದರೆ, ಕೇವಲ ಬೆಲೆಯನ್ನು ಆಧರಿಸಿ, ಕಡಿಮೆ ಬೆಲೆಗೆ ಷೇರುಗಳ ಮಾರಾಟವು ಹಾನಿಕಾರಕ ಆಯ್ಕೆಯಾಗುತ್ತದೆ. ವಿವಿಧ ಕಾರಣಗಳಿಗಾಗಿ ಷೇರುಬೆಲೆ ಕುಸಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಕಂಪನಿಯ ಉತ್ಪನ್ನಗಳ ಪೂರೈಕೆ ಮತ್ತು ಬೇಡಿಕೆಯಲ್ಲಿ ಆಗುವ ವ್ಯತ್ಯಯ ಅಥವಾ ಏರಿಳಿತ ಸಂದರ್ಭದಲ್ಲಿ ಷೇರು ಬೆಲೆ ಸಹಜವಾಗಿ ಕುಸಿಯಬಹುದು. ಇದು ಸಾಮಾನ್ಯವಾಗಿ ಭಾವನಾತ್ಮಕ ಅಲೆಗಳನ್ನು ಆಧರಿಸಿರುತ್ತದೆ. ಹಾಗಾಗಿ, ನೀವು ಸರಳವಾಗಿ ಷೇರಿನ ಬೆಲೆ ಕುಸಿದಾಗ ಮಾರಾಟ ಮಾಡಿದರೆ, ನೀವು ಮುಂದೆ ಭರ್ಜರಿ ಆದಾಯವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿ. ದುಡುಕಿ ತೆಗೆದುಕೊಳ್ಳುವ ನಿರ್ಧಾರದಿಂದ ನಿಮಗೆ ನಷ್ಟ ಉಂಟಾಗುತ್ತದೆ.

 ಮಾರುಕಟ್ಟೆಯ ಏರಿಳಿತಗಳನ್ನು ಊಹಿಸುವುದು ಕಷ್ಟ

ಮಾರುಕಟ್ಟೆಯ ಏರಿಳಿತಗಳನ್ನು ಊಹಿಸುವುದು ಕಷ್ಟ

ಸಾಮಾನ್ಯವಾಗಿ, ಹೂಡಿಕೆದಾರರು ತಮ್ಮದೇ ಆದ ತಪ್ಪು ನಿರ್ಧಾರ ಅಥವಾ ಸಲಹೆಗಳನ್ನು ಪಾಲಿಸಲು ಮುಂದಾಗುತ್ತಾರೆ. ವಿವಿಧ ಹಂತಗಳಲ್ಲಿ ಗಂಡಾಂತರ ಇರುವ ಹೂಡಿಕೆಯ ಸ್ವತ್ತುಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರೆ, ವೈವಿಧ್ಯಮಯ ಹೂಡಿಕೆಗಳಲ್ಲಿ ಹಣ ತೊಡಗಿಸಲು ವಿಫಲರಾಗಿ, ಹೂಡಿಕೆದಾರರು ತೀವ್ರ ನಷ್ಟಕ್ಕೆ ಒಳಗಾಗುತ್ತಾರೆ. ಹಣಕಾಸು ಮಾರುಕಟ್ಟೆಯ ಏರಿಳಿತಗಳನ್ನು ಊಹಿಸುವುದು ಕಷ್ಟ. ಇದನ್ನು ಗಮನದಲ್ಲಿಟ್ಟುಕೊಂಡು, ಹೂಡಿಕೆದಾರರು ವಿವಿಧ ಕೈಗಾರಿಕೆಗಳಲ್ಲಿ, ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸಬೇಕು. ಇಲ್ಲದಿದ್ದರೆ, ಕೆಲವು ವ್ಯವಹಾರಗಳು ಮಾರುಕಟ್ಟೆ ಕುಸಿತ ಕಂಡಾಗ, ಒಂದು ಪ್ರದೇಶದಲ್ಲಿ ಹಲವಾರು ಆಸ್ತಿಗಳನ್ನು ಹೊಂದಿರುವ ಹೂಡಿಕೆದಾರರ ಬಂಡವಾಳವು ಗಮನಾರ್ಹ ನಷ್ಟ ಎದುರಿಸುತ್ತದೆ. ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರನ್ನು ಮಾರುಕಟ್ಟೆಯ ಚಂಚಲತೆಯಿಂದ ರಕ್ಷಿಸುತ್ತದೆ.

 ‘ಮಾರ್ಜಿನ್’ ಷೇರುಗಳ ಖರೀದಿ

‘ಮಾರ್ಜಿನ್’ ಷೇರುಗಳ ಖರೀದಿ

ಹೆಚ್ಚಿನ ಸಂಖ್ಯೆಯ ಜನರು ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಯಾರೇ ಆಗಲಿ ಷೇರುಗಳನ್ನು ಖರೀದಿಸಲು ಸಾಕಷ್ಟು ಹಣ ಹೊಂದಿಲ್ಲದಿದ್ದರೆ, ಅವರು ‘ಮಾರ್ಜಿನ್‌’ ಷೇರುಗಳನ್ನು ಖರೀದಿಸಬಹುದು. ಆರಂಭಿಕ ಹೂಡಿಕೆದಾರರಲ್ಲಿ ಇದು ಸಾಮಾನ್ಯವಾಗಿದೆ. ಮಾರ್ಜಿನ್‌ ಷೇರುಗಳ ಒಟ್ಟು ಬೆಲೆ ಪರಿಗಣಿಸದೆ ಖರೀದಿಸುವುದು ಅನನುಭವಿ ಮತ್ತು ಅನುಭವಿ ಹೂಡಿಕೆದಾರರಿಗೆ ಅತ್ಯಂತ ಅಪಾಯಕಾರಿ. ಷೇರು ಬೆಲೆಯು ಸಾಲದ ಮೊತ್ತಕ್ಕಿಂತ ಕಡಿಮೆ ಆದಾಗ, ಬ್ರೋಕರ್ “ಮಾರ್ಜಿನ್ ಕಾಲ್” ನೀಡುವ ಸಾಧ್ಯತೆ ಇರುತ್ತದೆ.

 ಸಣ್ಣ ಮೌಲ್ಯದ(ಪೆನ್ನಿ) ಷೇರುಗಳ ಖರೀದಿ ಲಾಭದಾಯಕವೇ?

ಸಣ್ಣ ಮೌಲ್ಯದ(ಪೆನ್ನಿ) ಷೇರುಗಳ ಖರೀದಿ ಲಾಭದಾಯಕವೇ?

ಸಣ್ಣ ಮೌಲ್ಯದ ಅಥವಾ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ(ಪೆನ್ನಿ) ಷೇರುಗಳು ಮೊದಲ ನೋಟದಲ್ಲಿ ಉತ್ತಮ ಆಯ್ಕೆಯಂತೆ ಕಂಡುಬರುತ್ತವೆ, ವಿಶೇಷವಾಗಿ ನೀವು ಷೇರು ಹೂಡಿಕೆ ಆರಂಭಿಸಿದಾಗ. ಸಣ್ಣ ಷೇರುಗಳನ್ನು ಬೃಹತ್ ಕಂಪನಿ(ಬ್ಲೂ-ಚಿಪ್)ಗಳ ಷೇರುಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು, ಆದರೆ ಅವುಗಳ ಚಂಚಲತೆಯನ್ನು ತೂಕ ಮಾಡಬೇಕು. ಅವು ವಾಸ್ತವವಾಗಿ ಕಡಿಮೆ ಗುಣಮಟ್ಟದ ಷೇರುಗಳಾಗಿರುತ್ತವೆ. ಆದಾಗ್ಯೂ, ಆ ಪೆನ್ನಿ ಸ್ಟಾಕ್ ಆಳದಿಂದ ಹೊರಬರಲು ಕಷ್ಟವೇನಲ್ಲ. ಹೊಸ ಹೂಡಿಕೆದಾರರು ಹೆಚ್ಚಿನ ಲಾಭ ತರುವ, ಆರ್ಥಿಕ ಶಿಸ್ತು ಕಾಪಾಡುತ್ತಿರುವ ಕಂಪನಿಗಳ ಸಣ್ಣ ಷೇರುಗಳತ್ತ ಗಮನ ಹರಿಸಬೇಕು. ಮೊದಲ ನೋಟದಲ್ಲಿ, ಪೆನ್ನಿ ಸ್ಟಾಕ್ ಉತ್ತಮವಾಗಬಹುದು. ಆದರೆ ದೀರ್ಘಾವಧಿಯ ಹೂಡಿಕೆಗೆ, ಅದು ಸರಿ ಹೋಗದೆಯೂ ಇರಬಹುದು.

ಹಕ್ಕು ನಿರಾಕರಣೆ: ಷೇರು ಮಾರುಕಟ್ಟೆ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳು, ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಈ ಲೇಖನವು ಮಾಹಿತಿ ತಿಳಿಸುವ ಪ್ರಯತ್ನವಷ್ಟೆ. ಲೇಖನ ಆಧರಿಸಿ ಮಾಡುವ ಯಾವುದೇ ಹೂಡಿಕೆ ಅಥವಾ ನಷ್ಟಗಳಿಗೆ ಗ್ರೇನಿಯಮ್ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಮತ್ತು ಲೇಖಕರು ಜವಾಬ್ದಾರರಲ್ಲ.



Read more…

[wpas_products keywords=”deal of the day”]