Online Desk
ನವದೆಹಲಿ: 2022ರ ರಣಜಿ ಟ್ರೋಫಿ ಲೀಗ್ ಫೆಬ್ರವರಿ 16ರಿಂದ ಮಾರ್ಚ್ 5ರವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಘೋಷಿಸಿದೆ.
ಹಿಂದಿನ ವೇಳಾಪಟ್ಟಿಯ ಪ್ರಕಾರ ಜನವರಿ 13 ರಿಂದ 2022ರ ರಣಜಿ ಟ್ರೋಫಿಯ ಲೀಗ್ ಪ್ರಾರಂಭವಾಗಬೇಕಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಬಿಸಿಸಿಐ ಪಂದ್ಯಾವಳಿಯನ್ನು ಮುಂದೂಡಿತ್ತು.
ಬಿಸಿಸಿಐ ಸಿದ್ಧಪಡಿಸಿದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, 38 ತಂಡಗಳ ಪಂದ್ಯಾವಳಿಗೆ ಅಹಮದಾಬಾದ್, ಕೋಲ್ಕತ್ತಾ, ತಿರುವನಂತಪುರಂ, ಕಟಕ್, ಚೆನ್ನೈ, ಗುವಾಹಟಿ, ಹೈದರಾಬಾದ್ ಮತ್ತು ರಾಜ್‌ಕೋಟ್‌ಗಳು ಸಂಭಾವ್ಯ ಸ್ಥಳಗಳಾಗಿವೆ. ಆರು ತಂಡಗಳನ್ನು ಒಳಗೊಂಡಿರುವ ಪ್ಲೇಟ್ ಗುಂಪಿನೊಂದಿಗೆ ತಲಾ ನಾಲ್ಕು ತಂಡಗಳ ಎಂಟು ಗುಂಪುಗಳು ಲೀಗ್ ನಲ್ಲಿ ಇರುತ್ತವೆ.
ಮಾರ್ಚ್ 2020 ರಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ನಂತರ ಭಾರತದಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ.
Read more…
[wpas_products keywords=”deal of the day sports items”]