Karnataka news paper

ಅಚ್ಯುತ್ ಕುಮಾರ್ ನಾಯಕರಾಗಿ ನಟಿಸಿರುವ ಫೋರ್ ವಾಲ್ಸ್ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ: ಡಿ. ಸತ್ಯಪ್ರಕಾಶ್ ವಿತರಣೆ


Online Desk

ಶೀರ್ಷಿಕೆ ಮುಖಾಂತರ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಫೋರ್ ವಾಲ್ಸ್ ಫೆಬ್ರವರಿ ಫೆಬ್ರವರಿ 11ರಂದು ಬಿಡುಗಡೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ. ಇದುವರೆಗೂ ಪೋಷಕ ನಟರಾಗಿ ಪ್ರೇಕ್ಷಕರ ನಡುವೆ ಹೆಸರು ಮಾಡಿದ್ದ ಅಚ್ಯುತ್ ಕುಮಾರ್ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕರಾಗುತ್ತಿದ್ದಾರೆ ಎನ್ನುವುದು ವಿಶೇಷ. 

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಸ್ಟಾರರ್ ಗಣ ಸಿನಿಮಾ ತಂಡಕ್ಕೆ ಪದವಿಪೂರ್ವ ನಟಿ ಯಶ ಶಿವಕುಮಾರ್ ಸೇರ್ಪಡೆ

ಮಂತ್ರಂ ಸಿನಿಮಾ ಮೂಲಕ ಚಂದನವನಕ್ಕೆ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದ ಎಸ್.ಎಸ್ ಸಜ್ಜನ್ ‘ಫೋರ್ ವಾಲ್ಸ್’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ನಾಯಕ ನಟನಾಗಿ ಮಿಂಚಿದ್ದು, ಮೂರು ಶೇಡ್ ನಲ್ಲಿ ಚಿತ್ರದಲ್ಲಿ ಕಾಣಸಿಗಲಿದ್ದಾರೆ.  

ಇದನ್ನೂ ಓದಿ: ‘ಫೋರ್ ವಾಲ್ಸ್ ಅಂಡ್ ಟೂ ನೈಟೀಸ್’ ಮೂಲಕ ನಾಯಕನಾಗುತ್ತಿದ್ದಾರೆ ಅಚ್ಯುತ ಕುಮಾರ್

ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ತಂದೆ, ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಡಾ. ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.  

ಇದನ್ನೂ ಓದಿ: ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆ



Read more…

[wpas_products keywords=”party wear dress for women stylish indian”]