ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಗರ್ಭಗುಡಿ ಎದುರು ಪ್ರತಿರೂಪ ಸೃಷ್ಟಿಸಿ ಪೂಜೆ..!
ಯುನೆಸ್ಕೊದಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ವಿಶಾಲ್ ವಿ. ಶರ್ಮಾ ಅವರು ಔಪಚಾರಿಕವಾಗಿ ಯುನೆಸ್ಕೊಗೆ ಭಾರತದ ಪಟ್ಟಿ ನೀಡಿದ್ದಾರೆ. ಮುಂದಿನ ಹಂತದಲ್ಲಿ ವಿಶ್ವ ಪಾರಂಪರಿಕ ಕೇಂದ್ರದ ತಾಂತ್ರಿಕ ಸಮಿತಿಯು ಪಟ್ಟಿಯನ್ನು ಪರಿಶೀಲನೆ ನಡೆಸಿ, ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಪಟ್ಟಿಯನ್ನು ಪರಿಶೀಲಿಸಿದ ನಂತರ ಯುನೆಸ್ಕೊ ಭಾರತದ ಜತೆ ಮತ್ತೆ ಸಂವಹನ ನಡೆಸುತ್ತದೆ. ಇದಾದ ಬಳಿಕ ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಪುನಃ ಮೌಲ್ಯ ಮಾಪನ ಮಾಡುತ್ತದೆ. ಮುಂದಿನ ವರ್ಷದ ಜುಲೈ ಅಥವಾ ಆಗಸ್ಟ್‌ನಲ್ಲಿ ಅಂತಿಮ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಸನ ಜಿಲ್ಲೆಯ ಬೇಲೂರು ಹಾಗೂ ಹಳೇಬೀಡು ಹಾಗೂ ಮೈಸೂರು ಜಿಲ್ಲೆ ಸೋಮನಾಥಪುರದಲ್ಲಿ 12 ನೇ ಶತಮಾನದಲ್ಲಿ ಹೊಯ್ಸಳರು ದೇವಾಲಯ ನಿರ್ಮಿಸಿದ್ದಾರೆ. ಸದ್ಯ ಎಲ್ಲ ಮೂರು ದೇವಾಲಯಗಳು ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ) ಯ ರಕ್ಷಿತ ಸ್ಮಾರಕಗಳಾಗಿವೆ.
ಹೊಯ್ಸಳರ ಕಾಲದಲ್ಲಿನಿರ್ಮಿಸಲಾದ ದೇವಾಲಯಗಳನ್ನು ಯುನೆಸ್ಕೊಗೆ ನಾಮನಿರ್ದೇಶನ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಏಷ್ಯಾ ಕಲೆಯಲ್ಲಿಯೇ ಹೊಯ್ಸಳದಲ್ಲಿರುವ ಶಿಲ್ಪಕಲೆ, ಚಿತ್ರಕಲೆಯು ಅತ್ಯುನ್ನತವಾಗಿದೆ ಎಂದು ಯುನೆಸ್ಕೊದಲ್ಲಿ ಭಾರತದ ಕಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ದೇವಾಲಯಗಳು ಹಾಗೂ ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳು ಈಗಾಗಲೇ ಸಂರಕ್ಷಿತ ಪ್ರದೇಶಗಳೆಂದು ಘೋಷಣೆಯಾಗಿವೆ. ಭಾತೀಯ ಪುರಾತತ್ವ ಇಲಾಖೆಯು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಅಮರ್ ಜವಾನ್ ಜ್ಯೋತಿ ವಿಲೀನದಿಂದ ಹುತಾತ್ಮರು ಅಮರ: ಪ್ರಧಾನಿ ಮೋದಿ
ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವರು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯುನೆಸ್ಕೊ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಲು ಸಲ್ಲಿಸಲಾಗಿರುವ ಪ್ರಸ್ತಾವನೆ ನಿಜಕ್ಕೂ ಐತಿಹಾಸಿಕವಾಗಿದೆ. ಇವುಗಳ ಅಭಿವೃದ್ದಿಗೆ ಮತ್ತು ಸಂರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read more
[wpas_products keywords=”deal of the day sale today offer all”]