The New Indian Express
ಹುಬ್ಬಳ್ಳಿ: ಇತ್ತೀಚೆಗಷ್ಟೇ ಪಕ್ಷ ತೊರೆದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ಭಾನುವಾರ ಭೇಟಿಯಾಗಿದ್ದು, ಇಬ್ರಾಹಿಂ ಮನವೊಲಿಸುವ ಪ್ರಯತ್ನ ಮಾಡಿದರು.
ಖಾಸಗಿ ಹೊಟೇಲ್‌ನಲ್ಲಿ ಇಬ್ರಾಹಿಂ ಅವರನ್ನು ನಿನ್ನೆ ಭೇಟಿ ಮಾಡಿದ ಪಾಟೀಲ್ ಅವರು, ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿರಲು ಇಬ್ರಾಹಿಂ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಇಬ್ರಾಹಿಂ ಇತ್ತೀಚೆಗಷ್ಟೇ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪಕ್ಷ ತೊರೆದ ಸಿಎಂ ಇಬ್ರಾಹಿಂ: ಕಾಂಗ್ರೆಸ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡರ ಅಸಮಾಧಾನ
ಭೇಟಿ ಬಳಿಕ ಮಾತನಾಡಿರುವ ಪಾಟೀಲ್ ಅವರು, ಇಬ್ರಾಹಿಂ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕಿತ್ತು, ಇದು ಇಬ್ರಾಹಿಂಗೆ ಮಾತ್ರವಲ್ಲ ಅವರ ಸಮುದಾಯಕ್ಕೂ ಆಗಿರುವ ನಷ್ಟವಾಗಿದೆ ಎಂದು ಹೇಳಿದರು.
ಇಬ್ರಾಹಿಂ ಅವರು ಮಾತನಾಡಿ, ನನಗೆ ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಕರೆಗಳೂ ಬಂದಿಲ್ಲ. ಅದನ್ನು ನಾನು ನಿರೀಕ್ಷಿಸುವುದೂ ಇಲ್ಲ ಎಂದು ತಿಳಿಸಿದ್ದಾರೆ.
“ನಾನು ಜಾತಿ ಆಧಾರಿತ ರಾಜಕೀಯದಲ್ಲಿ ಪಾಲ್ಗೊಳ್ಳುವುದಿಲ್ಲ. ಜೆಡಿಎಸ್ ಅಥವಾ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಅಥವಾ ಅಖಿಲೇಶ್ ಯಾದವ್ ಅವರ ಎಸ್ಪಿಗೆ ಸೇರುವ ಕುರಿತು ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ನಂತರ ರಾಜ್ಯದಲ್ಲಿ ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಂ
ಇದೇ ವೇಳೆ ವಿಜಯಪುರದಿಂದ ಆಲಿಂಗ ಚಳವಳಿ (ಅಲ್ಪಸಂಖ್ಯಾತರು ಮತ್ತು ಲಿಂಗಾಯತರು) ಮತ್ತು ದಕ್ಷಿಣದಲ್ಲಿ ‘ಅಗೋವ್’ ಚಳವಳಿಯನ್ನು (ಅಲ್ಪಸಂಖ್ಯಾತರು ಮತ್ತು ಗೌಡರು) ಪ್ರಾರಂಭಿಸುವುದಾಗಿ ಹೇಳಿದ ಇಬ್ರಾಹಿಂ ಅವರು. ನಾನು ಬಡವನಾಗಿದ್ದು, ಎಲ್ಲಾ ಸಮುದಾಯಗಳು, ಬಡವರು, ಶ್ರೀಮಂತರಿಗೆ ಸ್ಥಾನ ನೀಡುತ್ತೇನೆಂದು ಹೇಳಿದರು.
Read more
[wpas_products keywords=”deal of the day”]