Karnataka news paper

ಮೈಸೂರಿನ ಹಾಡ್ಯ ಗ್ರಾಮ ಸಭೆಯಲ್ಲಿ ಮಾರಾಮಾರಿ: 6 ಮಂದಿಗೆ ಗಾಯ


ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮೈಸೂರು ಜಿಲ್ಲೆಯ ಹಾಡ್ಯದಲ್ಲಿ ಮಾರಾಮಾರಿ ನಡೆದು ಹೋಗಿದೆ. ಹಾಡ್ಯ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ದೊಡ್ಡ ಮಾರಾಮಾರಿ ನಡೆದಿದ್ದು, ನೋಡನೋಡುತ್ತಿದ್ದಂತೆಯೇ ಗ್ರಾಮ ಸಭೆ ರಣಾಂಗಣವಾಗಿದೆ.

ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷದ ಮುಖಂಡ ವೀರಭದ್ರಪ್ಪ ಅಲಿಯಾಸ್ ಪಾಪು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ರಾಜು ನಡುವೆ ವಾಸದ ಮನೆ ಹಂಚಿಕೆ ವಿಚಾರಕ್ಕೆ ಮೊದಲು ಮಾತಿನ ಚಕಮಕಿ ಪ್ರಾರಂಭವಾಗಿದೆ. ಬಳಿಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಡೀ ಗ್ರಾಮ ಸಭೆಯ ಆವರಣ ಬಡಿದಾಟ ಹೊಡೆದಾಟದ ತಾಣವಾಯ್ತು.

ಸಭೆಯಲ್ಲಿದ್ದ ಕಂದೇಗಾಲದ ರಾಜಶೇಖರ್ ಮತ್ತು ಹಾಡ್ಯ ಗಣೇಶ್‌ಗೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಸಭೆಯಲ್ಲಿದ್ದ 6 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ಅವರ ನಿರ್ಲಕ್ಷ್ಯ ಧೋರಣೆಯೇ ಸಂಘರ್ಷಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದರಾಮಯ್ಯ ಒಬ್ಬನೇ ಗಂಡಸಾ..? ಆತ ಭಸ್ಮಾಸುರ : MLC ವಿಶ್ವನಾಥ್ ಆಕ್ರೋಶ
6 ಜನರಿಗೆ ಗಾಯ..!: ಗ್ರಾಮ ಸಭೆ ಆರಂಭವಾಗಿ ಅರ್ಧ ಗಂಟೆಗೆ ಸಣ್ಣ ಜಗಳ ಆರಂಭವಾಗಿದೆ. ನಂತರ ಮಾತಿಗೆ ಮಾತು ಬೆಳೆದಿದ್ದು, ವೀರಭದ್ರಪ್ಪ ಹಾಗೂ ರಾಜು ಬೆಂಬಲಿಗರು ಕೂಡ ಮಧ್ಯ ಪ್ರವೇಶ ಮಾಡಿದ್ದಾರೆ. ನೋಡ ನೋಡ್ತಿದ್ದಂತೆಯೇ ಈ ಗಲಾಟೆ ಕೈ ಕೈ ಮಿಲಾಯಿಸೋ ಹಂತ ತಲುಪಿದ್ದು, ಘಟನೆಯಲ್ಲಿ 6 ಮಂದಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದೆ. ಗ್ರಾಮ ಸಭೆಯಲ್ಲಿ ಇಬ್ಬರ ವೈಯಕ್ತಿಕ ಜಗಳ ದೊಡ್ಡ ಕಲಹವನ್ನೇ ಸೃಷ್ಟಿಸಿದ್ದು, ಸಭೆ ಸಂಘರ್ಷಮಯವಾಗಿ ಮಾರ್ಪಟ್ಟಿದೆ.

ಚೇರ್ ಪೀಸ್ ಪೀಸ್..!: ಇನ್ನು ಗಲಾಟೆ ಆರಂಭ ಆಗ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅವಾಚ್ಯವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ. ಅಸನಕ್ಕೆ ವ್ಯವಸ್ಥೆ ಮಾಡಿದ್ದ ಚೇರ್ ಎಳೆದು ಬಡಿದಾಡಿಕೊಂಡಿದ್ದಾರೆ. ಇಬ್ಬರ ಮೇಲಂತೂ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಗಲಾಟೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೈಸೂರಿಗೆ ಗ್ಯಾಸ್‌ ಪೈಪ್‌ಲೈನ್‌ ಅಗತ್ಯ: ಪ್ರತಿಷ್ಠೆ ಬಿಟ್ಟು ಎಲ್ಲರೂ ಸಹಕರಿಸಲಿ ಎಂದರು ಎಚ್. ವಿಶ್ವನಾಥ್
ಹುಲ್ಲಹಳ್ಳಿ ಪೊಲೀಸರಿಂದ ತನಿಖೆ: ಪ್ರಕರಣ ಸಂಬಂಧ ಹುಲ್ಲಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಹಲವರ ವಿಚಾರಣೆ ನಡೆದಿದ್ದು, ಗ್ರಾಮಸ್ಥರ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋ ಸಾಧ್ಯತೆ ಇದೆ

ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ರಕ್ತ ಬರುವಂತೆ ಬಡಿದಾಡಿಕೊಂಡಿದ್ದಾರೆ. ಹಲವರಿಗೆ ತಲೆ ಬುರುಡೆಗೆ ಏಟು ಬಿದ್ದಿದೆ. ಕೆಲವರಿಗೆ ರಕ್ತಸ್ರಾವವಾಗಿದ್ದು, ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಮೈಸೂರು ಪಾಲಿಕೆ ಆದಾಯ ಹೆಚ್ಚಳಕ್ಕೆ ಕ್ರಮ: ತೆರಿಗೆ ಕಟ್ಟದ ಗ್ರಾಹಕರ ಮೇಲೆ ಕೆಂಗಣ್ಣು..!



Read more

[wpas_products keywords=”deal of the day sale today offer all”]