ತಾಲೂಕಿನ ಕಾಮನಾಯಕನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ವಡಕೆ ಕಟ್ಟೆ ಕೆರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿಯವರು ಸಹ ಜೆಡಿಎಸ್ ಪಕ್ಷದಿಂದಲೇ ಹೋದವರು. ಸಮ್ಮಿಶ್ರ ಸರಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವೆ ನಾನು ಕೊಂಡಿಯಂತೆ ಕೆಲಸ ಮಾಡಿದ್ದೇನೆ. ಡಿ. ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ನಾನು ಸಣ್ಣ ನೀರಾವರಿ ಸಚಿವನಾಗಿ ಹಲವಾರು ಬಾರಿ ಜತೆಯಲ್ಲಿ ಕುಳಿತು ಚರ್ಚಿಸಿದ್ದೇವೆ. ಹೀಗಾಗಿ ನಾನು ಎಲ್ಲರೊಂದಿಗೆ ಸಮನ್ವಯತೆಯನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದರು.
ಕಾಮನಾಯಕನ ಹಳ್ಳಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಅದರಂತೆ ನಿಮ್ಮೆಲ್ಲರ ಆಶೀರ್ವಾದದಿಂದ ಸಮ್ಮಿಶ್ರ ಸರಕಾರದ ಸಚಿವನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಯೋಜನೆ ಮಂಜೂರು ಮಾಡಿದ್ದೆ. ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಸ್ವಲ್ಪ ತಡವಾಯಿತು. ಈಗಿನ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ದೊಡ್ಡತನದಿಂದ ನನ್ನ ಎಲ್ಲಾ ಯೋಜನೆಗಳು ಜಾರಿಯಾಗುತ್ತಿವೆ. ಸಚಿವ ಮಾಧುಸ್ವಾಮಿ ಅವರಿಗೆ ಎಷ್ಟು ದೊಡ್ಡತನವೆಂದರೆ ಸಿ. ಎಸ್. ಪುಟ್ಟರಾಜು ಅವರು ಈ ಹಿಂದೆ ಮಂತ್ರಿಯಾಗಿ ಕೆಲಸ ಮಾಡಿದವರು. ಅವರ ಕಾಲದಲ್ಲಿ ಮಂಜೂರಾಗಿರುವ ಯಾವುದೇ ಯೋಜನೆಗಳು ಸ್ಥಗಿತಗೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನನ್ನ ಯೋಜನೆಗಳು ಮಂಜೂರಾಗುತ್ತಿವೆ ಎಂದು ಹೇಳಿದರು.
ಈ ಹಿಂದೆ ಸಚಿವ ಮಾಧುಸ್ವಾಮಿ ಬಳಘಟ್ಟ ನೀರಾವರಿ ಯೋಜನೆಗೆ ಚಾಲನೆ ಕೊಡುವ ಕಾರ‍್ಯಕ್ರಮದಲ್ಲಿ ಒಂದು ಮಾತು ಹೇಳಿದ್ರು. ಸಿ. ಎಸ್. ಪುಟ್ಟರಾಜು ಅವರು ಜಿಲ್ಲೆಯಲ್ಲಿ ಶಂಕರೇಗೌಡ್ರು, ಮಾದೇಗೌಡ್ರು, ಚೌಡಯ್ಯನವರ ಸಾಲಿಗೆ ಸೇರಿದರು ಎಂಬುದಾಗಿ ಹೇಳಿದರು. ಆ ಮಾತಿಗೆ ಅರ್ಥವಿದೆ. ನಾವು ಅವರ ಮಟ್ಟಕ್ಕೆ ಬೆಳೆಯದಿದ್ದರೂ ಸಹ ನಾನು ಜಿಲ್ಲಾ ಮಂತ್ರಿ, ಲೋಕಸಭೆಯ ಸದಸ್ಯನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿ ಮಾಡುವ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಹೇಮಾವತಿ ನಾಲೆಯಿಂದ ನೀರು ನಿಂತರೂ ಈ ಕೆರೆಗೆ ಕಾವೇರಿ ನದಿಯಿಂದ ನೀರು ತುಂಬುವಂತೆ ಯೋಜನೆ ಮಾಡಲಾಗಿದೆ. ಬಳಘಟ್ಟ ಯೋಜನೆಯಿಂದಲೇ ಈ ಕೆರೆಗೆ ನೀರು ತುಂಬಿಸಲು ಕಾರ‍್ಯಕ್ರಮ ರೂಪಿಸಿಕೊಳ್ಳಲಾಗಿದೆ. ಮಾರ್ಮಳ್ಳಿ ಸಿಂಗಾಪುರ ಕೆರೆಗೆ ಹೆಚ್ಚುವರಿ ನೀರನ್ನು ತೊಣ್ಣೂರು ಕೆರೆಗೂ ತುಂಬಿಸಲಾಗುವುದು. ಜತೆಗೆ ಕೆರೆಯಿಂದ ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ದೊರೆತಂತಾಗಲಿದೆ. ಕೆರೆ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ರೈತರಿಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಮನಾಯಕನಹಳ್ಳಿ ಗ್ರಾಮದ ಜನರು ಮನೆಯಿಂದ ಊಟ ತೆಗೆದುಕೊಂಡು ಬಂದು ನನ್ನ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದೀರಿ. ನಿಮ್ಮೆಲ್ಲರ ಋುಣ ನನ್ನ ಮೇಲೆ ಇದೆ. ಅದನ್ನು ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಸ್ವಾಮೀಗೌಡ ಮಾತನಾಡಿ, ಸಿ. ಎಸ್. ಪುಟ್ಟರಾಜು ಅವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರನ್ನ ಮಾಜಿ ಪ್ರಧಾನ ಮಂತ್ರಿಗಳು, ಮಣ್ಣಿನ ಮಗ ಎಚ್. ಡಿ. ದೇವೇಗೌಡರು ಕೈ ಹಿಡಿದು ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ಅವರು ಎಲ್ಲಿಗೂ ಹೋಗಲ್ಲ. ಅವರು ಜೆಡಿಎಸ್‌ನಲ್ಲಿಯೇ ಇರ್ತಾರೆ, ನಾವೆಲ್ಲರೂ ಅವರ ಬೆಂಬಲಿಗರಾಗಿಯೇ ಇರೋಣ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಎಇಇ ತಾರಕೇಶ್, ಮುಖಂಡರಾದ ಕೆಂಪರಾಜು, ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರು, ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಸುಶೀಲಮ್ಮ, ಪ್ರಮೀಳ, ಶಿವಶಂಕರ್, ಮುಖಂಡರಾದ ರಾಧಾಕೃಷ್ಣ, ಕಾಂತರಾಜು, ಕರಿಯಯ್ಯ, ಉದ್ಯಮಿ ಸುರೇಶ್, ಬಲರಾಮೇಗೌಡ, ಯ.ಶಿವಪ್ಪ, ನಾಗರಾಜು, ಅಂಗಡಿ ವೆಂಕಟೇಶ್, ಬೆಟ್ಟೇಗೌಡ, ಮಧು, ಕೃಷ್ಣಪ್ಪ, ಮರಿಲಿಂಗಯ್ಯ, ಆನಂದ್ ಮಾಸ್ಟರ್, ಯೋಗ ನರಸಿಂಹೇಗೌಡ, ಯೋಗರಾಜು ಸೇರಿದಂತೆ ಹಲವರು ಹಾಜರಿದ್ದರು.
Read more
[wpas_products keywords=”deal of the day sale today offer all”]