News
ಬೆಂಗಳೂರು, ಜನವರಿ 31 2022ರ ಕೇಂದ್ರ ಬಜೆಟ್ ಅಧಿವೇಶನ ಸೋಮವಾರದಿಂದ ಶುರುವಾಗಿದ್ದು, ಮಂಗಳವಾರ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿಯೂ ನೆಟ್ಟಿಗರು ಬಜೆಟ್ ನಿರೀಕ್ಷೆಯ ಕುರಿತು ಚರ್ಚೆ ಶುರು ಮಾಡಿದ್ದಾರೆ.
ಈ ಬಾರಿಯ ಕೇಂದ್ರ ಬಜೆಟ್ ಕುರಿತು ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಾಗೂ ನಿರೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ಆರ್ಥಿಕತೆ ಪ್ರಗತಿ ಹೊಂದುವ ನಿಟ್ಟಿನಲ್ಲಿ ಬಜೆಟ್
ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕೊರೊನಾ ಮುಂದಿನ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಸೌಲಭ್ಯಗಳನ್ನು ಉತ್ತೇಜಿಸಬೇಕು. ಹಾಗೂ ದೇಶದ ಆರ್ಥಿಕತೆ ಪ್ರಗತಿ ಹೊಂದುವ ನಿಟ್ಟಿನಲ್ಲಿ ಬಜೆಟ್ ಇದ್ದರೆ ಬಹಳ ಉತ್ತಮ ಎನಿಸುತ್ತದೆ. ಎಂದು ಚಂದನ ಎನ್ನುವವರು ಕೂ ಮಾಡಿದ್ದಾರೆ.

ರಾಜಕಾರಣಿಗಳ ತೆರಿಗೆ ರಹಿತ ಸೌಲಭ್ಯಗಳನ್ನು ನಿಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ರಂಗನಾಥ್ ಎಂಬುವವರು ಕೂ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಂಗಾವತಿಯಿಂದ ದರೋಜಿ ರೈಲ್ವೆ ಮಾರ್ಗ ನಿರ್ಮಾಣ ಮಾಡಿ ಎಂದು ಸುರೇಶ ಗೌಡ ಅವರು ಕೂ ಮಾಡಿದ್ದಾರೆ.

ಅತಿವೃಷ್ಠಿಯಿಂದ ರೈತ ಕಂಗಾಲು
ಸೋಮವಾರದಿಂದ ಆರಂಭವಾಗುತ್ತಿರುವ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ರಾಜ್ಯದ ರೈತರಿಗೆ ಏನಾದರೂ ಅನುಕೂಲತೆಗಳು ಸಿಗುವಂತಾಗಬೇಕು, ಏಕೆಂದರೆ ರೈತ ಎಲ್ಲಕಿಂತ ದುಃಖಿಯಾಗಿದ್ದಾನೆ. ಅತಿವೃಷ್ಠಿಯಿಂದ ಅವನು ಕಂಗಾಲಾಗಿದ್ದಾನೆ, ಅವನ ದುಃಖ ಕೇಳುವವರ್ಯಾರು ಇಲ್ಲ, ಮೊದಲೇ ಕೊರೊನಾ ಕಾಲ, ಅಂಥದ್ದರಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಂತೋಷವಾಗುವ ಸುದ್ದಿ ನೀಡಿದರೆ ಅವರು ನೆಮ್ಮದಿಯ ಉಸಿರು ಬಿಡಬಹುದು. ಕಾದು ನೋಡೋಣ, ಇಂತಹ ಸಂಕಷ್ಟದ ಸಮಯದಲ್ಲಿ ಬಜೆಟ್ ಮಂಡನೆ ಕಷ್ಟವೇ’ ಎಂದು ಮಲ್ಲಿಕಾರ್ಜುನ್ ಎನ್ನುವವರು ಕೂನಲ್ಲಿ ಬರೆದುಕೊಂಡಿದ್ದಾರೆ.
English summary
Union Budget 2022: Nettizens Have Different Expectations
Union Budget 2022: Nettizens have also begun discussing budget expectations in Social network.
Read more…
[wpas_products keywords=”deal of the day”]