ಈ ಊರಿನ ಕಾಲೋನಿ ವ್ಯಕ್ತಿಯೊಬ್ಬರ ಮನೆ ಮುಂದೆ ಕಾಗೆ ಆಹಾರಕ್ಕಾಗಿ ಬಂದಿದ್ದು, ಕರ್ಕಶವಾಗಿ ಅರಿಚಿದೆ. ಆಗ ಆತ ಕ್ಯಾಟರ್ ಬಿಲ್ ಮೂಲಕ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ಕೆರಳಿದ ಕಾಗೆ ಆತನ ಮೇಲೆ ದಾಳಿ ಮಾಡಿದೆ. ತನ್ನನ್ನು ರಕ್ಷಿಸಿಕೊಳ್ಳಲು ಆತ ಕ್ಯಾಟರ್ ಪಿಲ್ಲರ್‌ನ್ನು ಸದಾ ಜೇಬಿನಲ್ಲಿ ಇಟ್ಟುಕೊಂಡು ಕಾಗೆ ಬಂದಾಗೆಲ್ಲ ಹೊಡೆದಿದ್ದಾನೆ.
ಹೀಗೆ ನಾಲ್ಕೈದು ದಿನ ಆದ ಮೇಲೆ ಕಾಗೆ ತನ್ನ ಜಾಗ ಖಾಲಿ ಮಾಡಿ, ಗ್ರಾಮದ ಗಿಡ ಮರಗಳು ದಟ್ಟವಾಗಿರುವ ಬೇರೊಂದು ಭಾಗಕ್ಕೆ ಬಂದು ಆ ಭಾಗದ ಜನರ ಮೇಲೆ ಮುಸುರೆ ತೊಳೆಯುವ ಸಮಯದಲ್ಲಿ ಬೆಳಗ್ಗೆ ಮತ್ತು ಸಂಜೆ ಮಾತ್ರ ಜನರ ಮೇಲೆ ಎಗರಿದೆ. ಅದರ ರೆಕ್ಕೆಗಳು ಮಾತ್ರ ಬಡಿದಿದ್ದು, ಕಾಗೆ ಕುಕ್ಕಿಲ್ಲ ಎಂದು ಸಮಿತಿ ಸ್ಪಷ್ಟ ಪಡಿಸಿದೆ.
ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ. ಯಾದವ ರೆಡ್ಡಿ, ಉಪಾಧ್ಯಕ್ಷ ಎಂ. ಆರ್. ದಾಸೇಗೌಡ, ಖಜಾಂಚಿ ಕೆ. ರಾಮಪ್ಪ, ಸದಸ್ಯ ರಾಮಶೇಖರ್ ಇದ್ದ ತಂಡವು ಓಬಳಾಪುರಕ್ಕೆ ಭೇಟಿ ಕೊಟ್ಟು ಕಾಗೆಯಿಂದ ಕುಕ್ಕಿಸಿಕೊಂಡವರು ಎನ್ನಲಾದ ಚಂದ್ರಶೇಖರ್, ಕುಮಾರ್, ಕಲ್ಲಮ್ಮ, ರಮೇಶಪ್ಪ, ಪೊಲೀಸ್ ಶಿವು, ರುದ್ರಪ್ಪ ಇವರುಗಳಲ್ಲಿ ಕೆಲವರನ್ನು ಭೇಟಿ ಮಾಡಿ ಮಾತನಾಡಿಸಿದಾಗ ಸತ್ಯ ತಿಳಿದಿದೆ. ಇನ್ನು ಕಾಗೆ ಮುಟ್ಟಿ ಮೈಲಿಗೆ ಆಗಿದೆ ಎಂಬ ಕಾರಣಕ್ಕೆ ಸ್ನಾನ ಮಾಡಿದೆವು, ಪದೇ ಪದೇ ಕಾಗೆ ಮುಟ್ಟಿದಾಗ, ಎಷ್ಟು ಸಲ ಅಂತ ಸ್ನಾನ ಮಾಡೋದು ಅಂತ, ರೋಸಿ ಸ್ನಾನ ಮಾಡುವುದನ್ನೇ ಬಿಟ್ಟೆವು ಇಂದು ಜನ ಹೇಳಿದರು ಎಂದು ಸಮಿತಿ ತಿಳಿಸಿದೆ.
ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುವ ಸಂದರ್ಭದಲ್ಲಿ ಪೋಷಕ ಹಕ್ಕಿಗಳು ಹೆಚ್ಚು ಎಚ್ಚರಿಕೆ ವಹಿಸುತ್ತವೆ. ವಲಸೆ ಸಂದರ್ಭದಲ್ಲಿ ಗುಂಪಿನಿಂದ ಆಕಸ್ಮಿಕವಾಗಿ ಬೇರ್ಪಟ್ಟು ವಿಚಲಿತವಾದಾಗಿನ ಪಕ್ಷಿಗಳ ವರ್ತನೆ ಬಗ್ಗೆ, ಹಕ್ಕಿಗಳು ಮನುಷ್ಯರಿಂದ ಘಾಸಿಗೊಂಡಾಗ ಕೆರಳುವ ಬಗ್ಗೆ, ಸಂಗಾತಿ ಹಕ್ಕಿಯಿಂದ ಬೇರ್ಪಟ್ಟಾಗ, ಗೂಡು ನಾಶವಾದಾಗ ಹಕ್ಕಿಗಳ ಸಹಜ ವರ್ತನೆ ಬೇರೆ ರೀತಿ ಇರುತ್ತದೆ.
ಗಾಜು ಅಥವಾ ಕನ್ನಡಿಯಲ್ಲಿನ ಪ್ರತಿಬಿಂಬವನ್ನು ಇನ್ನೊಂದು ಪಕ್ಷಿಯೆಂದು ಭ್ರಮಿಸಿ ಕನ್ನಡಿ ಕುಕ್ಕುವ ಕೆಲ ಸತ್ಯ ಘಟನೆಗಳನ್ನು ಹಾಗೂ ಚಿತ್ರದುರ್ಗ ತಾಲೂಕಿನ ಪಾಪೆನ ಹಳ್ಳಿಯಲ್ಲಿ ನಡೆದ ಪ್ರಸಂಗವನ್ನು ವಿಜ್ಞಾನ ಕೇಂದ್ರದ ಕೆ. ರಾಮಪ್ಪ, ರಾಮಶೇಖರ್ ಅವರು ವಿವರಿಸಿ ಹೇಳಿದಾಗ ಜನರು ತಮ್ಮಲ್ಲಿರುವ ಮೌಢ್ಯಗಳನ್ನು ಮುಕ್ತವಾಗಿ ಹೊರ ಹಾಕಿದರು. ಅಲ್ಲದೇ ಕಾಗೆ ನೆಪದಲ್ಲಾದರೂ ಆಂಜನೇಯ ದೇವಸ್ಥಾನದ ಗುಡಿ ಗುಡಿ ಪೂರ್ಣ ಆಗಲಿ ಬಿಡಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.
Read more
[wpas_products keywords=”deal of the day sale today offer all”]