Karnataka news paper

Old Monk Movie: ಹೇಳಿದ ಮಾತಿನಂತೆ ರಿಲೀಸ್ ಡೇಟ್ ಫೈನಲ್ ಮಾಡಿದ ‘ಓಲ್ಡ್ ಮಾಂಕ್’ ಶ್ರೀನಿ


ಎಂ.ಜಿ. ಶ್ರೀನಿವಾಸ್‌ ಅಲಿಯಾಸ್‌ ಶ್ರೀನಿ ನಟಿಸಿ, ನಿರ್ದೇಶನ ಮಾಡಿರುವ ‘ಓಲ್ಡ್‌ ಮಾಂಕ್‌’ ಸಿನಿಮಾದ ರಿಲೀಸ್‌ ದಿನಾಂಕ ಫೈನಲ್‌ ಆಗಿದ್ದು, ಇದೇ ಫೆಬ್ರವರಿ 25ರಂದು ಅದು ತೆರೆ ಕಾಣಲಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಎರಡು ರಿಲೀಸ್‌ ದಿನಾಂಕಗಳನ್ನು ಅನೌನ್ಸ್‌ ಮಾಡಿ ಗಮನ ಸೆಳೆದಿತ್ತು. ಅದೇ ರೀತಿ ಶ್ರೀನಿ ನಿರ್ದೇಶನದ ‘ಓಲ್ಡ್‌ ಮಾಂಕ್‌’ ಸಿನಿಮಾ ತಂಡವೂ ನಾಲ್ಕು ರಿಲೀಸ್‌ ದಿನಾಂಕಗಳನ್ನು ಅನೌನ್ಸ್‌ ಮಾಡಿತ್ತು. ಈಗ ಅದರಲ್ಲಿ ಫೆಬ್ರವರಿ 25 ದಿನಾಂಕ ಫೈನಲ್‌ ಆಗಿದೆ.

ಕೊರೊನಾ ಕಡಿಮೆಯಾದರೆ ಫೆಬ್ರವರಿ 11, ‘ವಿಕ್ರಾಂತ್‌ ರೋಣ’ ಸಿನಿಮಾ ಪೋಸ್ಟ್‌ಪೋನ್‌ ಆದರೆ ಫೆಬ್ರವರಿ 24, ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆಯಾಗದಿದ್ದರೆ ಏಪ್ರಿಲ್‌ 24, ಇದ್ಯಾವುದೂ ಆಗದೇ ಹೋದರೆ ಮೇನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುವ ಪೋಸ್ಟರ್‌ ಕಳೆದ ವಾರ ಬಿಡುಗಡೆಯಾಗಿತ್ತು. ಈಗ ಫೆಬ್ರವರಿ 25ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಶ್ರೀನಿ ತಿಳಿಸಿದ್ದಾರೆ.

‘ಈ ಸಿನಿಮಾದ ಕಥೆ ವಿಭಿನ್ನವಾಗಿರುವ ಕಾರಣ ಜನರಿಗೆ ಇಷ್ಟವಾಗುತ್ತದೆ. ಸದ್ಯಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಹಾಗಾಗಿ ಫೆಬ್ರವರಿ 25ರಂದು ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್‌ನಲ್ಲಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಪ್ರೀಮಿಯರ್‌ ಮಾಡುವ ಐಡಿಯಾ ಇದೆ. ಫೆಬ್ರವರಿ 25ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದ್ದಾರೆ ನಿರ್ದೇಶಕ ಕಮ್‌ ನಟ ಶ್ರೀನಿ.

ರೇಡಿಯೋ ಜಾಕಿ ಪಾತ್ರ ಒಪ್ಪಿಕೊಂಡ ನಟ ಶ್ರೀನಿ, ಯಾವ ಸಿನಿಮಾ? ಯಾರು ಡೈರೆಕ್ಟರ್?

ಈ ಸಿನಿಮಾದಲ್ಲಿ ಶ್ರೀನಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಎಸ್‌. ನಾರಾಯಣ್‌, ಹಿರಿಯ ನಟ ಕಲಾತಪಸ್ವಿ ರಾಜೇಶ್‌, ಸಿಹಿಕಹಿ ಚಂದ್ರು, ಸುಜಯ್‌ ಶಾಸ್ತ್ರಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದು, ಇದರಲ್ಲಿ ಶ್ರೀನಿ ನಾರದ ಮಹರ್ಷಿಯ ಪಾತ್ರದಲ್ಲಿದ್ದಾರೆ. ಈ ಕಥೆಯಲ್ಲಿ ಶ್ರೀಕೃಷ್ಣನ ಪಾತ್ರ ಬಹಳ ಪ್ರಮುಖವಂತೆ. ಹಾಗಾಗಿ ಅದನ್ನು ಸುನೀಲ್‌ ರಾವ್‌ ಮಾಡುತ್ತಿದ್ದಾರೆ. ‘ಬೀರ್‌ಬಲ್‌’ ಸಿನಿಮಾಗೆ ಸಂಗೀತ ನೀಡಿದ್ದ ಸೌರಭ್‌ ವೈಭವ್‌ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಶ್ರೀನಿಯವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Photos: ಶ್ರೀನಿ-ಅದಿತಿ ಜೋಡಿಯ ‘ಓಲ್ಡ್ ಮಾಂಕ್‌’ ಟ್ರೇಲರ್ ರಿಲೀಸ್ ಮಾಡಿದ ಪುನೀತ್ ರಾಜ್‌ಕುಮಾರ್‌

ಕೋಟ್‌
ಫೆಬ್ರವರಿ 15ರ ನಂತರ ಶೇ. 100 ಸೀಟಿಂಗ್‌ ವ್ಯವಸ್ಥೆಗೆ ಅನುಮತಿ ಸಿಗಲಿದೆ. ಫೆ. 25ರವರೆಗೆ ಯಾವುದೇ ಸಿನಿಮಾ ಬಿಡುಗಡೆ ಇಲ್ಲ. ಆದರೂ ನಾವು ಬಿಡುಗಡೆ ಮಾಡುತ್ತೇವೆ.
-ಶ್ರೀನಿ, ನಿರ್ದೇಶಕ, ನಟ

ಹಲವು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ಹಿರಿಯ ನಟ ರಾಜೇಶ್! ಯಾವ ಚಿತ್ರಕ್ಕಾಗಿ?



Read more

[wpas_products keywords=”deal of the day sale today offer all”]